ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೇ, ಪೃಥ್ವಿ ಶಾ ವಿರುದ್ದವೇ ದೂರು ದಾಖಲಿಸಿದ ಸ್ವಪ್ನ ಗಿಲ್

By Naveen KodaseFirst Published Feb 21, 2023, 4:03 PM IST
Highlights

ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ವಿರುದ್ದ ದೂರು ದಾಖಲು
ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸ್ವಪ್ನ ಗಿಲ್ ದೂರು ದಾಖಲು
ಕಳೆದ ಬುಧವಾರ ಪೃಥ್ವಿ ಶಾ ಮೇಲೆ ಹಲ್ಲೆ ಮಾಡಿದ್ದ ಸ್ವಪ್ನ ಗಿಲ್ ಮತ್ತು ಸಂಗಡಿಗರು

ಮುಂಬೈ(ಫೆ.21) ಸೆಲ್ಫಿ ನಿರಾಕರಿಸಿದ ಕಾರ​ಣಕ್ಕೆ ಕ್ರಿಕೆ​ಟಿಗ ಪೃಥ್ವಿ ಶಾ ಹಾಗೂ ಸ್ನೇಹಿತನ ಕಾರಿ​ನ ಮೇಲೆ ಅಭಿ​ಮಾ​ನಿ​ಗ​ಳು ದಾಳಿ ನಡೆ​ಸಿ, ಅವ​ರನ್ನು ತಳ್ಳಾ​ಡಿ​ದ ಘಟನೆಗೆ ಇದೀಗ ಮತ್ತೊಂದು ತಿರುವು ಸಿಕ್ಕಿದ್ದು, ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ವಿರುದ್ದ ಸ್ವಪ್ನ ಗಿಲ್ ದೂರು ದಾಖಲಿಸಿದ್ದಾರೆ

ಮುಂಬೈ ನ ಖಾಸಗಿ ಹೋಟೆಲ್‌ನಲ್ಲಿ ಸ್ವಪ್ನ ಗಿಲ್ ಮತ್ತು ಸ್ನೇಹಿತರು ಹಾಗೂ ಪೃಥ್ವಿ ಶಾ ನಡುವೆ ಸೆಲ್ಫಿ ವಿಚಾರವಾಗಿ ನಡೆದಿದ್ದ ಗಲಾಟೆಯ ಸಂಬಂಧ 8 ಜನರನ್ನು ಓಷಿವಾರ ಪೊಲೀಸರು ಬಂಧಿಸಿದ್ದರು. ಇದೀಗ ಈ ಎಲ್ಲರಿಗೂ ಸದ್ಯ ನ್ಯಾಯಾಲಯ ಜಾಮೀನು ನೀಡಿದೆ. ಬೇಲ್‌ ಮೇಲೆ ಹೊರಬಂದಿರುವ ಸ್ವಪ್ನ ಗಿಲ್‌, ಪೃಥ್ವಿ ಶಾ ವಿರುದ್ದವೇ ದೂರು ದಾಖಲಿಸಿದ್ದಾರೆ.

ಪೃಥ್ವಿ ಶಾ ಕಾರಿನ ಗಾಜು ಒಡೆಯಲು ಆತನೇ ಕಾರಣ. ಆತನ ಪ್ರಚೋದನೆಯಿಂದಲೇ ಈ ಘಟನೆ ಸಂಭವಿಸಿದೆ. ನನ್ನ ಗೆಳತಿ, ಪೃಥ್ವಿ ಶಾ ಬಳಿ ಸೆಲ್ಪಿ ಕೇಳಿದ್ದಳು. ಆದರೆ ಇದಕ್ಕೆ ನಿರಾಕರಣೆ ಮಾಡಿದ್ದಲ್ಲದೇ ಆಕೆಯ ಫೋನನ್ನು ಎಸೆದರು. ಈ ಘಟನೆಯ ಸಂದರ್ಭದಲ್ಲಿ ಪೃಥ್ವಿ ಶಾ ಹಾಗೂ ಆತನ ಗೆಳೆಯ ಪಾನಮತ್ತರಾಗಿದ್ದರು. 

ಅಷ್ಟಕ್ಕೂ ಆಗಿದ್ದೇನು?: ಪೃಥ್ವಿ ಶಾ ತಮ್ಮ ಸ್ನೇಹಿತ ಆಶಿಶ್‌ ಯಾದವ್‌ ಹಾಗೂ ಇನ್ನಿತರ ಸ್ನೇಹಿತರ ಜೊತೆ ಮುಂಬೈ ವಿಮಾನ ನಿಲ್ದಾಣದ ಬಳಿ ಇರುವ ಹೋಟೆ​ಲ್‌​ವೊಂದಕ್ಕೆ ಊಟಕ್ಕೆ ತೆರ​ಳಿದ ವೇಳೆ ಕೆಲವರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಆರಂಭದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಶಾ ಒಪ್ಪಿದರೂ, ಮತ್ತಷ್ಟು ಫೋಟೋಗಳಿಗೆ ಬೇಡಿಕೆ ಇಟ್ಟಾಗ ಶಾ ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಶೋಭಿತ್‌ ಠಾಕೂರ್‌ ಎನ್ನುವ ಅಭಿಮಾನಿ, ಪೃಥ್ವಿ ಜೊತೆ ವಾಗ್ವಾದಕ್ಕಿಳಿದು ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಹೋಟೆಲ್‌ ಮ್ಯಾನೇಜರ್‌ ಶೋಭಿತ್‌ ಹಾಗೂ ಆತನ ಜೊತೆ ಇದ್ದ ಸ್ನೇಹಿತರನ್ನು ಹೊರ ಕಳುಹಿಸಿದ್ದಾರೆ.

ಊಟ ಮುಗಿಸಿ ಶಾ ತಮ್ಮ ಸ್ನೇಹಿತರೊಂದಿಗೆ ಹೊರಬಂದಾಗ ಶೋಭಿತ್‌ ಹಾಗೂ ಆತನ ಸ್ನೇಹಿತರು ಬೇಸ್‌ಬಾಲ್‌ ಬ್ಯಾಟ್‌ಗಳನ್ನು ಹಿಡಿದು ದಾಳಿಗೆ ಕಾಯುತ್ತಿದ್ದರು. ಶಾ ತಮ್ಮ ಸ್ನೇಹಿತರ ಜೊತೆ ಕಾರಿನಲ್ಲಿ ಕೂರುತ್ತಿದ್ದಂತೆ ಬೇಸ್‌ಬಾಲ್‌ ಬ್ಯಾಟ್‌ನಿಂದ ಕಾರಿನ ಮುಂಭಾಗದ ಗಾಜು ಒಡೆಯಲಾಯಿತು. ಅಲ್ಲದೇ ಶಾ ಅವರನ್ನು ತಳ್ಳಾಡಿದ್ದಾರೆ. ಆ ಘಟನೆಯ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಕ್ರಿಕೆಟಿಗ ಪೃಥ್ವಿ ಶಾ ಹಾಗೂ ಅಭಿಮಾನಿಗಳ ನಡುವೆ ಮಾರಾಮಾರಿ, ಕಾರು ಪುಡಿ ಪುಡಿ!

ಮತ್ತಷ್ಟು ಸಮಸ್ಯೆ ಎದುರಾಗಬಹುದು ಎನ್ನುವ ಕಾರಣಕ್ಕೆ ಪೃಥ್ವಿಯನ್ನು ಬೇರೆ ಕಾರಿಗೆ ಕಳಿಸಿ, ಆಶಿಶ್‌ ಹಾಗೂ ಇನ್ನೂ ಕೆಲವರು ತೆರಳುತ್ತಿದ್ದಾಗ ಬೈಕ್‌ಗಳಲ್ಲಿದ್ದ 6 ಮಂದಿ ಹಾಗೂ ಕಾರ್‌ನಲ್ಲಿದ್ದ ಇಬ್ಬರು ಯೂ-ಟರ್ನ್‌ ಮಾಡುವ ವೇಳೆ ಅಡ್ಡಗಟ್ಟಿ ಹಿಂಬದಿಯ ಗಾಜನ್ನೂ ಒಡೆದಿದ್ದಾರೆ. ಜೊತೆಗೆ 50,000 ರು. ಕೊಡದಿದ್ದರೆ ಸುಳ್ಳು ಕೇಸ್‌ ಹಾಕುವುದಾಗಿ ಸಪ್ನಾ ಗಿಲ್‌ ಎಂಬಾಕೆ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಆಶಿಶ್‌ ಹತ್ತಿರದ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

click me!