HBD Ravi Shastri: 60 ಬಾರಿಸಿದ ರವಿಶಾಸ್ತ್ರಿಗೆ ಹರಿದುಬಂತು ಅಭಿನಂದನೆಗಳ ಮಹಾಪೂರ..!

By Naveen KodaseFirst Published May 27, 2022, 2:03 PM IST
Highlights

* 60ನೇ ವಸಂತಕ್ಕೆ ಕಾಲಿರಿಸಿದ ದಿಗ್ಗಜ ಕ್ರಿಕೆಟಿಗ ರವಿಶಾಸ್ತ್ರಿ

* ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂತು ಅಭಿನಂದನೆಗಳ ಮಹಾಪೂರ

* ರವಿಶಾಸ್ತ್ರಿ 1981ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು

ಬೆಂಗಳೂರು(ಮೇ.27): ಭಾರತ ಕ್ರಿಕೆಟ್‌ನ ಪ್ರಖ್ಯಾತ ಆಟಗಾರ, ಕಂಚಿನ ಕಂಠದ ವೀಕ್ಷಕ ವಿವರಣೆಗಾರ ಹಾಗೂ ಟೀಂ ಇಂಡಿಯಾ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ (Ravi Shastri Birthday), ಇಂದು(ಮೇ.27) ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭಸಂದರ್ಭದಲ್ಲಿ ಟೀಂ ಇಂಡಿಯಾದ ಹಲವು ಹಿರಿ-ಕಿರಿಯ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಮೈದಾನದೊಳಗೆ ಹಾಗೂ ಮೈದಾನದಾಚೆಗೆ ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿರುವ ರವಿಶಾಸ್ತ್ರಿ ಇಂದು 60 ಬಾರಿಸಿದ್ದಾರೆ.

ರವಿಶಾಸ್ತ್ರಿ ಓರ್ವ ಕ್ರಿಕೆಟಿಗನಾಗಿ ಜನಪ್ರಿಯರಾಗಿದ್ದಕ್ಕಿಂತ ಹೆಚ್ಚು ಕಾಮೆಂಟೇಟರ್ ಆಗಿ ಜನಪ್ರಿಯವಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ರವಿಶಾಸ್ತ್ರಿ ಕಾಮೆಂಟ್ರಿ ಕೇಳುಗರ ವಲಯವೇ ಇದೆ, ಆ ಮಟ್ಟಿಗಿನ ಜನಪ್ರಿಯತೆ ಅವರ ಕ್ರಿಕೆಟ್‌ ಕಾಮೆಂಟ್ರಿಗಿದೆ. ಇದಷ್ಟೇ ಅಲ್ಲದೇ ರವಿಶಾಸ್ತ್ರಿ ಕ್ರಿಕೆಟ್ ನಿವೃತ್ತಿ ಹಾಗೂ ಕಾಮೆಂಟ್ರಿ ಬಳಿಕ ಟೀಂ ಇಂಡಿಯಾ ಹೆಡ್ ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ರವಿಶಾಸ್ತ್ರಿ 1981ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 1981ರಿಂದ 1992ರ ಅವಧಿಯಲ್ಲಿ ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ (Indian Cricket Team) ಪರ 80 ಟೆಸ್ಟ್ ಹಾಗೂ 150 ಏಕದಿನ ಪಂದ್ಯಗಳನ್ನಾಡಿದ್ದಾರೆ. ರವಿಶಾಸ್ತ್ರಿ ಕೆಲ ಕಾಲ ಭಾರತ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಭಾರತ ಪರ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ಶಾಸ್ತ್ರಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,938 ರನ್ ಹಾಗೂ 280 ವಿಕೆಟ್ ಕಬಳಿಸಿದ್ದಾರೆ. 1985ರಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ರವಿಶಾಸ್ತ್ರಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ರವಿಶಾಸ್ತ್ರಿ ಪಾತ್ರರಾಗಿದ್ದರು.

Latest Videos

ಸ್ಪೋಟಕ ಬ್ಯಾಟಿಂಗ್ ಆಲ್ರೌಂಡರ್ ಎನಿಸಿಕೊಂಡಿದ್ದ ಮುಂಬೈ ಮೂಲದ ರವಿಶಾಸ್ತ್ರಿ, 1983ರಲ್ಲಿ ಕಪಿಲ್ ದೇವ್ (Kapil Dev) ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಲ್ಲಿ ಶಾಸ್ತ್ರಿ ಕೂಡಾ ಒಬ್ಬರಾಗಿದ್ದರು. ರವಿಶಾಸ್ತ್ರಿ ತಮ್ಮ 30ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಾದರು. ರವಿಶಾಸ್ತ್ರಿ ಹುಟ್ಟುಹಬ್ಬಕ್ಕೆ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಾಸೀಂ ಜಾಫರ್, ಚೇತನ್ ಶರ್ಮಾ ಸೇರಿದಂತೆ ಹಲವು ಹಿರಿ-ಕಿರಿಯ ಆಟಗಾರರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. 

230 international matches 👍
6938 runs & 280 wickets in international cricket 👌
1983 World Cup-winner 🏆

Birthday wishes to the former Captain & former India Head Coach . 🎂 👏 pic.twitter.com/dGZ4Rc03ZR

— BCCI (@BCCI)

Happy birthday to a teammate and a friend who lives & breathes cricket and was always there to discuss cricket with me!

Hope you're celebrating the day just like the doctor ordered, Ravi! 😉 pic.twitter.com/hi3kU9XbEI

— Sachin Tendulkar (@sachin_rt)

Birthday wishes stay blessed Have a great year ahead 😘

— Chetan Sharma (@chetans1987)

ರವಿಶಾಸ್ತ್ರಿ, 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಐತಿಹಾಸಿಕ ಸಿಕ್ಸರ್ ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದಾಗ, 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದಾಗ ರೋಚಕ ಕಾಮೆಂಟ್ರಿ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. 2014ರಲ್ಲಿ ರವಿಶಾಸ್ತ್ರಿ, ಟೀಂ ಇಂಡಿಯಾ ಡೈರೆಕ್ಟರ್ ಆಗಿ 8 ತಿಂಗಳು ಕಾರ್ಯ ನಿರ್ವಹಿಸಿದ್ದರು. ಇನ್ನು ಇದಾದ ಬಳಿಕ 2017ರಲ್ಲಿ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲಿಯೇ ಹೊರಬೀಳುವುದರೊಂದಿಗೆ ಶಾಸ್ತ್ರಿ ಜತೆಗಿನ ಬಿಸಿಸಿಐ ಒಪ್ಪಂದಾವಧಿ ಕೂಡಾ ಮುಕ್ತಾಯವಾಯಿತು.

IPL 2022 ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಥ್ಯಾಂಕ್ಸ್‌: ಕಿಂಗ್ ಕೊಹ್ಲಿಗೆ ಪಾಟೀದಾರ್ ಸಲ್ಯೂಟ್..!

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಒಂದು ವರ್ಷಕ್ಕೂ ಹೆಚ್ಚು ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು ರವಿಶಾಸ್ತ್ರಿ ಮಾರ್ಗದರ್ಶನದಲ್ಲೇ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಎರಡೆರಡು ಬಾರಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರ್ಯಿಕ ಸಾಧನೆ ಮಾಡಿತ್ತು. ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ.
 

click me!