ಬೆಂಗಳೂರಿನಲ್ಲಿಂದು RCB vs CSK ಮಹಾಕದನ; ಗೆದ್ರೆ ಪ್ಲೇ ಆಫ್‌ಗೆ, ಸೋತ್ರೆ ಮನೆಗೆ..!

By Suvarna News  |  First Published May 18, 2024, 12:21 PM IST

ಇಂಡಿಯಾ-ಪಾಕಿಸ್ತಾನ ಪಂದ್ಯದಷ್ಟು ಕುತೂಹಲ, ರೋಚಕತೆ ಹುಟ್ಟು ಹಾಕೋದು RCB-CSK ಪಂದ್ಯ ಮಾತ್ರ. ಹೌದು, ಅಲ್ಲಿ ಬದ್ಧವೈರಿಗಳಂತೆ ಭಾರತ-ಪಾಕ್ ಆಟಗಾರರು ಕಿತ್ತಾಡಿದ್ರೆ, ಇಲ್ಲಿ ಬೆಂಗಳೂರು-ಚೆನ್ನೈ ಪ್ಲೇಯರ್ಸ್ ಸಹ ಬದ್ಧವೈರಿಗಳಂತೆ ಕಾದಾಡಲಿದ್ದಾರೆ.


ಬೆಂಗಳೂರು: ಇಂದು ಐಪಿಎಲ್‌ನಲ್ಲಿ ಬಿಗ್ ಫೈಟ್ ಮ್ಯಾಚ್ ನಡೆಯುತ್ತಿದೆ. ಫೈನಲ್ ಪಂದ್ಯಕ್ಕಿಂತ ಹೆಚ್ಚು ಕುತೂಹಲ ಕೆರಳಿಸಿರೋ ಪಂದ್ಯ ಇದು. ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಇಂದು ಮುಖಾಮುಖಿಯಾಗ್ತಿವೆ. ಎರಡು ತಂಡಕ್ಕೂ ಡು ಆರ್ ಡೈ ಮ್ಯಾಚ್. ಬೆಂಗಳೂರು-ಚೆನ್ನೈ ಕದನದ ಡಿಟೇಲ್ಸ್ ಇಲ್ಲಿದೆ ನೋಡಿ. 

ಕುತೂಹಲ ಕೆರಳಿಸಿದ ಡು ಆರ್ ಡೈ ಮ್ಯಾಚ್

Latest Videos

undefined

ಇಂಡಿಯಾ-ಪಾಕಿಸ್ತಾನ ಪಂದ್ಯದಷ್ಟು ಕುತೂಹಲ, ರೋಚಕತೆ ಹುಟ್ಟು ಹಾಕೋದು RCB-CSK ಪಂದ್ಯ ಮಾತ್ರ. ಹೌದು, ಅಲ್ಲಿ ಬದ್ಧವೈರಿಗಳಂತೆ ಭಾರತ-ಪಾಕ್ ಆಟಗಾರರು ಕಿತ್ತಾಡಿದ್ರೆ, ಇಲ್ಲಿ ಬೆಂಗಳೂರು-ಚೆನ್ನೈ ಪ್ಲೇಯರ್ಸ್ ಸಹ ಬದ್ಧವೈರಿಗಳಂತೆ ಕಾದಾಡಲಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದ ಈ ಎರಡು ತಂಡಗಳ ಪಂದ್ಯ ಮಾತ್ರ ಭಾರಿ ರೋಚಕತೆ ಹುಟ್ಟಿಸುತ್ತೆ. ಈ ಸಲ ಆ ರೋಚಕತೆ ದುಪ್ಪಟ್ಟಾಗಿದೆ. ಕಾರಣ ಈ ಪಂದ್ಯ ಎರಡು ತಂಡಕ್ಕೂ ಡು ಆರ್ ಡೈ.

IPL 2024 ಬೆಂಗ್ಳೂರಲ್ಲಿಂದು ಆರ್‌ಸಿಬಿ vs ಚೆನ್ನೈ ಬಹುನಿರೀಕ್ಷಿತ ನಾಕೌಟ್‌ ಕದನ

ಆರ್‌ಸಿಬಿ ಕೈ ಹಿಡಿಯಬೇಕಿದೆ ನಂಬರ್ 18

ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಲೀಗ್‌ನಲ್ಲಿ 13 ಪಂದ್ಯಗಳಿಂದ ಏಳು ಗೆದ್ದು ಆರು ಸೋತು 14 ಅಂಕಗಳಿಸಿದೆ. RCB 6 ಗೆದ್ದು ಏಳನ್ನ ಸೋತು 12 ಅಂಕಗಳಿಸಿದೆ. ಇಂದು RCB ವಿರುದ್ಧ ಸಿಎಸ್‌ಕೆ ಗೆದ್ರೆ ಪ್ಲೇ ಆಫ್‌ಗೆ ಹೋಗಲಿದೆ. ಆದ್ರೆ RCB ಗೆದ್ರೆ ಹೋಗಲ್ಲ. ಭಾರೀ ಅಂತರದಿಂದ ಗೆಲ್ಲಬೇಕು. ಕನಿಷ್ಟ 18 ರನ್‌ಗಳಿಂದ ರೆಡ್ ಆರ್ಮಿ ಪಡೆ ಗೆಲ್ಲಬೇಕು. ಇಲ್ಲ 18 ಓವರ್ ಒಳಗೆ ಟಾರ್ಗೆಟ್ ಬೆನ್ನಟ್ಟಿ ಗೆಲ್ಲಬೇಕು. ಆಗ ಮಾತ್ರ RCB ಪ್ಲೇ ಆಫ್ಗೇರಲಿದೆ. ಈ 18 ಅನ್ನ ಗೆದ್ರೆ ಅಷ್ಟೇ ರೆಡ್ ಆರ್ಮಿ ಪಡೆ ಕನಸು ನನಸಾಗೋದು. ಸ್ವಲ್ಪ ಯಾಮಾರಿದ್ರೂ ಲೀಗ್‌ನಿಂದ ಕಿಕೌಟ್ ಆಗಲಿದೆ. ಮೊದಲ ಮುಖಾಮಮುಖಿಯ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಆರ್‌ಸಿಬಿ ಎದುರು ನೋಡ್ತಿದೆ.

ವಿಲ್ ಜಾಕ್ಸ್ ಬದಲು ಗ್ಲೆನ್ ಮ್ಯಾಕ್ಸ್‌ವೆಲ್

ಇಂಗ್ಲೆಂಡ್ ಪ್ಲೇಯರ್‌ಗಳಾದ ವಿಲ್ ಜಾಕ್ಸ್ ಮತ್ತು ರೀಸ್ ಟಾಪ್ಲೆ RCB ತಂಡ ತೊರೆದಿದ್ದಾರೆ. ವಿಲ್ ಜಾಕ್ಸ್, ಗುಜರಾತ್ ಟೈಟನ್ಸ್ ವಿರುದ್ಧ ಸೆಂಚುರಿ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಈಗ ಅವರ ಅನುಪಸ್ಥಿತಿ RCBಗೆ ಕಾಡಲಿದೆ. ಜಾಕ್ಸ್ ಬದಲು ಗ್ಲೆನ್ ಮ್ಯಾಕ್ಸ್‌ವೆಲ್ ಆಡಲಿದ್ದು, ಅವರು ಈ ಸೀಸನ್ನಲ್ಲಿ ತೀರ ಕಳಪೆ ಫಾರ್ಮ್ನಲ್ಲಿದ್ದಾರೆ. ಇಂದು ಬ್ಯಾಡ್ ಫಾರ್ಮ್‌ನಿಂದ ಹೊರಬಂದು ಆಲ್ರೌಂಡ್ ಆಟವಾಡೋ ಒತ್ತಡದಲ್ಲಿ ಮ್ಯಾಕ್ಸಿ ಇದ್ದಾರೆ. ಹಾಗಾಗಿಯೇ ಇಂದು ಮ್ಯಾಕ್ಸ್‌ವೆಲ್ ಮೇಲೆ ಎಲ್ಲರ ಕಣ್ಣು ಬಿದ್ದಿರೋದು.

IPL 2024 ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಐಪಿಎಲ್‌ಗೆ ಲಖನೌ ವಿದಾಯ; 5 ಬಾರಿಯ ಚಾಂಪಿಯನ್‌ಗೆ ಕೊನೆ ಸ್ಥಾನ

ವಿರಾಟ್ ಕೊಹ್ಲಿ, 661 ರನ್ ಹೊಡೆದು, ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್, ಡಿಕೆ, ರಜತ್ ಪಾಟಿದರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಪಾಟೀದಾರ್ ಕಳೆದ 7 ಇನ್ನಿಂಗ್ಸ್ಗಳಲ್ಲಿ ಐದು ಹಾಫ್ ಸೆಂಚುರಿ ಬಾರಿಸಿದ್ದಾರೆ. ಅದಕ್ಕೂ ಮಿಗಿಲಾಗಿ 179ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿರೋದು ಸಿಎಸ್‌ಕೆ ಪಾಳಯದಲ್ಲಿ ಭಯ ಹುಟ್ಟಿಸಿದೆ. ಸಿರಾಜ್, ಫರ್ಗ್ಯೂಸನ್, ಸ್ವಪ್ನಿಲ್ ಸಿಂಗ್, ಯಶ್ ದಯಾಳ್ ಸಹ ಬೌಲಿಂಗ್ನಲ್ಲಿ ಲಯ ಕಂಡುಕೊಂಡಿದ್ದಾರೆ. ಹಾಗಾಗಿ ತವರಿನಲ್ಲಿ ಚೆನ್ನೈ ತಲೈವಾಗಳ ಬೇಟೆಗೆ ರೆಡ್ ಆರ್ಮಿ ಪಡೆ ಸಜ್ಜಾಗಿ ನಿಂತಿದೆ.

CSK ತಂಡದಿಂದ ನಾಲ್ವರು ಔಟ್

ಪಂದ್ಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ದೀಪಕ್ ಚಹರ್ ಇಂಜುರಿಯಾಗಿದ್ರೆ, ಮೊಯೀನ್ ಅಲಿ, ರೆಹಮಾನ್, ಮಹೀಶ್ ಪತಿರಾಣ ಚೆನ್ನೈ ತಂಡ ತೊರೆದಿದ್ದಾರೆ. ಈ ನಾಲ್ವರ ಅನುಪಸ್ಥಿತಿಯಲ್ಲಿ CSK ಇಂದು ಆಡ್ತಿದೆ. ರಹಾನೆ ಕಳಪೆ ಫಾರ್ಮ್ನಲ್ಲಿದ್ದಾರೆ. ಎಂಎಸ್ ಧೋನಿ ಕೊನೆ ಎರಡು ಓವರ್ ಮಾತ್ರ ಆಡ್ತಾರೆ. ಈ ಎಲ್ಲವೂ CSK ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಆದ್ರೆ ಚೆನ್ನೈ ಹೈದರು, ಸಾಂಘಿಕ  ಪ್ರದರ್ಶನ ನೀಡೋದ್ರಲ್ಲಿ ಎತ್ತಿದ ಕೈ. ಶಿವಂ ದುಬೆ, ಋತುರಾಜ್, ಮಿಚೆಲ್, ಜಡೇಜಾ, ರಚಿನ್, ತುಶಾರ್ ಡೇಂಜರ್ಸ್ ಪ್ಲೇಯರ್ಸ್. ಹಾಗಾಗಿ ಇಂದು ಈಸಿಯಾಗಿ ಸಿಎಸ್‌ಕೆ  ಸೊಲೊಪ್ಪಿಕೊಳ್ಳಲ್ಲ. ಒಟ್ನಲ್ಲಿ ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೆಡ್ ಆರ್ಮಿ ಮತ್ತು ಯೆಲ್ಲೋ ಆರ್ಮಿ ಪಡೆಗಳ ನಡುವೆ ಮಹಾಯುದ್ಧವೇ ನಡೆಯಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!