ಆರ್‌ಸಿಬಿ ಉಳಿಸಿಕೊಳ್ಳಲಿರೋ ಐವರು ಆಟಗಾರರು ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

By Naveen KodaseFirst Published Sep 30, 2024, 1:07 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಈ 5 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮುಂದಾಗುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು:  2025ರ ಐಪಿಎಲ್‌ಗು ಮುನ್ನ ಬಿಸಿಸಿಐ, ಐವರು ಆಟಗಾರರನ್ನ ತಂಡದಲ್ಲಿ ಉಳಿಸಿಕೊಳ್ಳಬಹುದು ಅಂತ ಹೇಳಿದೆ. ಇದ್ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಉಳಿಯೋದ್ಯಾರು? ಅಲ್ಲದೆ ರೆಡ್ ಆರ್ಮಿಯ ಆರ್‌ಟಿಎಂ ಕಾರ್ಡ್ ಆಯ್ಕೆ ಯಾರಾಗಲಿದ್ದಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ನಮ್ಮ ಉತ್ತರ ಇಲ್ಲಿದೆ ನೋಡಿ..!

ಯಾರಾಗಲಿದ್ದಾರೆ ರೆಡ್ಅರ್ಮಿಯ ಆರ್‌ಟಿಎಂ ಆಯ್ಕೆ?

Latest Videos

ಯೆಸ್, ಐಪಿಎಲ್ ರಿಟೆನ್ಷನ್ ಪಾಲಿಸಿ ರಿಲೀಸ್ನಿಂದಾಗಿ ಯಾವ ತಂಡಗಳು ಯಾರನ್ನ ಉಳಿಸಿಕೊಳ್ಳಲಿವೆ ಅನ್ನೋ ಕುತೂಹಲ ಮೂಡಿದೆ. ಅದರಲ್ಲೂ ಆರ್‌ಸಿಬಿ ಯಾರನ್ನ ರಿಟೈನ್ ಮಾಡಿಕೊಳ್ಳುತ್ತೆ, ಯಾರನ್ನೆಲ್ಲಾ ರಿಲೀಸ್ ಮಾಡಲಿದೆ ಅಂತ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಸಿಕೊಂಡಿದ್ದಾರೆ. 

ಐಪಿಎಲ್‌ 2025: ವಿದೇಶಿಗರಿಗೆ ಬಿಸಿಸಿಐ ಮೂಗುದಾರ, ಹರಾಜಾಗಿ ಟೂರ್ನಿಗೆ ಬರದಿದ್ರೆ 2 ವರ್ಷ ಬ್ಯಾನ್‌!

ಆರ್‌ಸಿಬಿಯ ರಿಟೈನ್ ಲಿಸ್ಟ್‌ನ ಮೊದಲ ಆಟಗಾರ ವಿರಾಟ್ ಕೊಹ್ಲಿ, ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದ್ರೆ ಕೊಹ್ಲಿಯೇ ಆರ್‌ಸಿಬಿಯ ಮೇನ್ ಅಟ್ರ್ಯಾಕ್ಷನ್. ಈವರೆಗೂ ಆರ್‌ಸಿಬಿ ಕಪ್ ಗೆಲ್ಲದೇ ಹೋದ್ರೂ, ಆರ್‌ಸಿಬಿಯ ಕ್ರೇಝ್ ಕಪ್ ಗೆದ್ದ ತಂಡಗಳಿಗಿಂತ ಕಡಿಯೇನಿಲ್ಲ. ಈ ಕ್ರೇಝ್‌ಗೆ ಪ್ರಮುಖ ಕಾರಣಾನೇ ವಿರಾಟ್ ಕೊಹ್ಲಿ. 17 ವರ್ಷಗಳಿಂದ ಕೊಹ್ಲಿ ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿದ್ದಾರೆ. 

ಆರ್‌ಸಿಬಿಯ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಅಸ್ತ್ರ, ರಜತ್ ಪಾಟೀದಾರ್

ಕಳೆದ ಬಾರಿಯ ಐಪಿಎಲ್‌ನಲ್ಲಿ ರಜತ್ ಅದ್ಭುತ ಪ್ರದರ್ಶನ ನೀಡಿದ್ರು. ಫಸ್ಟ್ ಹಾಫ್ನಲ್ಲೂ ಫೇಲಾದ್ರೂ, ಸೆಕೆಂಡ್ ಹಾಫ್ನಲ್ಲಿ ಆರ್ಭಟಿಸಿದ್ರು. ಅದರಲ್ಲೂ ಸ್ಪಿನ್ನರ್‌ಗಳ ಪಾಲಿಗೆ ಅಕ್ಷರಶ: ವಿಲನ್ ಆಗಿದ್ರು. ಇದ್ರಿಂದ ರಜತ್ ಆರ್‌ಸಿಬಿಯಲ್ಲಿ ಮುಂದುವರಿಯೋ ಅವಕಾಶವಿದೆ. 
 
ಕಳೆದ ಸೀಸನ್ನಲ್ಲಿ  ಇಂಗ್ಲೆಂಡ್ ಸ್ಟಾರ್ ವಿಲ್‌ ಜ್ಯಾಕ್ಸ್ ಆರ್‌ಸಿಬಿ ಪರ ತಮ್ಮ ತಾಕತ್ತನ್ನು ಪ್ರೂವ್ ಮಾಡಿದ್ರು. ಸಿಕ್ಕ ಅವಕಾಶದಲ್ಲಿ ಮಿಂಚಿದ್ರು. ಹೀಗಾಗಿ ಮತ್ತೊಮ್ಮೆ ಜ್ಯಾಕ್ಸ್‌ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ನಿವೃತ್ತಿ ಬೆನ್ನಲ್ಲೇ ಚೆನ್ನೈಗೆ ಶಾಕ್ ಕೊಟ್ಟ ಡ್ವೇನ್ ಬ್ರಾವೋ!
 
ಆರ್‌ಸಿಬಿಯ ಮೇನ್ ಬೌಲರ ಮೊಹಮ್ಮದ್ ಸಿರಾಜ್,  ಈ ಬಾರಿಯ ಐಪಿಎಲ್‌ನಲ್ಲಿ ಸಿರಾಜ್ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಹಾಗಂತ ಸಿರಾಜ್ ಸಾಮರ್ಥ್ಯವನ್ನ ಕಡೆಗಣಿಸುಂತಿಲ್ಲ. ಯಾವುದೇ ಕ್ಷಣದಲ್ಲಿ ಮಿಂಚಬಲ್ಲ ವೇಗಿ ಯಾಗಿರುವುದರಿಂದ ಸಿರಾಜ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 

ಈ ನಾಲ್ವರ ಜೊತೆಗೆ ಎಡಗೈ ವೇಗಿ ಯಶ್ ದಯಾಳ್ ಅವರನ್ನು ಆರ್‌ಸಿಬಿ ಖರೀದಿಸಿದಾಗ ಹಲವು ಮಂದಿ ಬೆಂಗಳೂರು ಫ್ರಾಂಚೈಸಿಯನ್ನು ಟೀಕಿಸಿದ್ದರು. ಆದ್ರೆ, ಟೂರ್ನಿಯಲ್ಲಿ ಯಶ್ ಅಮೋಘ ಪ್ರದರ್ಶನ ನೀಡಿದ್ರು.  ಇದ್ರಿಂದ ದಯಾಳ್‌ಗೆ ಆರ್‌ಸಿಬಿ ದಯೆ ತೋರಿದ್ರೆ ಅಚ್ಚರಿ ಇಲ್ಲ. 

ಗ್ರೀನ್‌ರನ್ನು ರಿಲೀಸ್ ಮಾಡಿ ಕಡಿಮೆ ಮೊತ್ತಕ್ಕೆ ಪಡೆದುಕೊಳ್ಳುತ್ತಾ? 

ಯೆಸ್, ಆರ್‌ಸಿಬಿಯ ಆರ್‌ಟಿಎಂ ಕಾರ್ಡ್ ಆಯ್ಕೆ ಯಾರಾಗಲಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ. ಆದ್ರೆ, ಈ ರೇಸ್ನಲ್ಲಿ ಕ್ಯಾಮರೂನ್ ಗ್ರೀನ್ ಹೆಸರು ಲೀಡಿಂಗ್ನಲ್ಲಿದೆ. ಕಳೆದ ಸೀಸನ್‌ಗೂ ಮುನ್ನ  RCB, ಮುಂಬೈನಲ್ಲಿದ್ದ ಗ್ರೀನ್‌ರನ್ನು 17.50 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಇದರಿಂದ ಮೆಗಾ ಆಕ್ಷನ್ಗೂ ಮೊದಲು ಗ್ರೀನ್‌ರನ್ನು ರಿಲೀಸ್ ಮಾಡಿ, ಆರ್‌ಟಿಎಂನಡಿ ಕಡಿಮೆ ಮೊತ್ತಕ್ಕೆ ಖರೀದಿಸೋ ಯೋಚನೆ, ಫ್ರಾಂಚೈಸಿಯದ್ದಾಗಿದೆ. 

ಅದೇನೆ ಇರಲಿ, ಆರ್‌ಸಿಬಿ ನಿಜಕ್ಕೂ ಯಾರನ್ನ ರಿಟೇನ್ ಮಾಡಿಕೊಳ್ಳಲಿದೆ. ಯಾರನ್ನ ರಿಲೀಸ್ ಮಾಡಲಿದೆ ಅನ್ನೋದು  ಕೆಲವೇ ದಿನಗಳಲ್ಲಿ  ಗೊತ್ತಾಗಲಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!