₹7 ಕೋಟಿಯ ಬಿಗ್ ಸ್ಟಾರ್ ಸೇರಿ 9 ಆಟಗಾರರಿಗೆ ಆರ್‍‌ಸಿಬಿ ಗೇಟ್‌ಪಾಸ್? ಚಾಂಪಿಯನ್ ಲೆಕ್ಕಾಚಾರ ತುಂಬಾ ಸ್ಮಾರ್ಟ್‌

Published : Nov 13, 2026, 06:14 PM IST
RCB Set to Release Players

ಸಾರಾಂಶ

ಹ್ಯಾಟ್ರಿಕ್ ಟ್ರೋಫಿ ಗೆಲ್ಲಲು ಆರ್‍‌ಸಿಬಿ ಬಿಗ್ ಪ್ಲಾನ್ ಮಾಡುತ್ತಿದೆ. ಡಿಸೆಂಬರ್‍‌ನಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಹೊಸ ಆಟಗಾರರ ಖರೀದಿಸಿ ಬಲಿಷ್ಠ ತಂಡ ಕಟ್ಟಲು ಪ್ಲಾನ್ ಮಾಡಿಕೊಂಡಿದೆ. ಈ ನಡುವೆ 9 ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅವರು ಯಾರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಐಪಿಎಲ್ ಮಿನಿ ಹರಾಜಿಗೆ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸ್ತಿವೆ. ಕೆಲವು ಆಟಗಾರರ ಉಳಿಸಿಕೊಂಡು ಬೇಡದ ಆಟಗಾರರ ರಿಲೀಸ್‌ ಮಾಡೋಕೆ ನವೆಂಬರ್ 17 ಲಾಸ್ಟ್‌ ಡೇಟ್. ಹೀಗಾಗಿ ಐಪಿಎಲ್‌ನ ಬಹುತೇಕ ಫ್ರಾಂಚೈಸಿಗಳು ಗಂಭೀರ ಲೆಕ್ಕಾಚಾರದಲ್ಲಿ ಮುಳುಗಿವೆ. ಇದರಿಂದ ನಮ್ಮ ಆರ್‍‌ಸಿಬಿ ಕೂಡ ಹೊರತಾಗಿಲ್ಲ. ಕೆಲವು ವರದಿಗಳ ಪ್ರಕಾರ ಆರ್‍‌ಸಿಬಿ 9 ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಸತತ ಎರಡು ಬಾರಿ ಚಾಂಪಿಯನ್ ಆಗಿ ಹ್ಯಾಟ್ರಿಕ್ ಮೇಲೆ ಕಣ್ಣಿಟ್ಟಿರುವ ಆರ್‍‌ಸಿಬಿ, ಹೊಸ ತಂಡ ಕಟ್ಟಲು ಪಕ್ಕಾಪಕ್ಕಾ ಪ್ಲಾನ್ ಮಾಡುತ್ತಿದೆ. ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‍‌ನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಅಂದರೆ ನವೆಂಬರ್ 17 ಒಳಗಾಗಿ ಒಂದಷ್ಟು ಆಟಗಾರರನ್ನು ಆರ್‍‌ಸಿಬಿ ರಿಲೀಸ್ ಮಾಡಲಿದೆ. ಈ ರಿಲೀಸ್ ಲಿಸ್ಟ್‌ನಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ?

ನಾಯಕ ರಜತ್ ಪಾಟೀದಾರ್‍‌ ಅವರನ್ನು ಆರ್‍‌ಸಿಬಿ ರಿಟೈನ್ ಮಾಡಿಕೊಳ್ಳಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಎರಡು ಬಾರಿ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಹೀಗಾಗಿ 2027 ಐಪಿಎಲ್‌ಗೆ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಹಾಗಿಯೇ ಬ್ರಾಂಡ್ ವಿರಾಟ್ ಕೊಹ್ಲಿ ಕೂಡ. ವಿರಾಟ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತಾವು ಆರ್‍‌ಸಿಬಿ ಅಲ್ಲದೇ ಬೇರೆ ಯಾವುದೇ ಫ್ರಾಂಚೈಸಿ ಜೊತೆ ಆಡಲು ಬಯಸೋದಿಲ್ಲ ಎಂದಿದ್ದಾರೆ. ಹೀಗಾಗಿ ವಿರಾಟ್ ಕೂಡ ಆರ್‍‌ಸಿಬಿ ಭಾಗವಾಗಿಯೇ ಇರಲಿದ್ದಾರೆ.

ಇನ್ನು ಸಂಭಾವ್ಯ ಉಳಿಸಿಕೊಳ್ಳುವ ಆಟಗಾರರ ಲಿಸ್ಟ್ ಹೀಗಿದೆ..

  • ಟಿಮ್ ಡೆವಿಡ್
  • ಫಿಲ್ ಸಾಲ್ಟ್
  • ಜೋಶ್ ಹೇಜಲ್‌ವುಡ್
  • ಜಾಕೋಬ್ ಡಫಿ
  • ಜಾಕೋಬ್ ಬೆಥೆಲ್
  • ಕೃನಾಲ್ ಪಾಂಡ್ಯ
  • ಭುವನೇಶ್ವರ್ ಕುಮಾರ್

ಯಾರನ್ನೆಲ್ಲ ರಿಲೀಸ್ ಸಾಧ್ಯತೆ

  • ಮಂಗೇಶ್ ಯಾದವ್
  • ವೆಂಕಟೇಶ್ ಅಯ್ಯರ್
  • ರೊಮಾರಿಯೋ ಶೆಫರ್ಡ್
  • ನುವಾನ್ ತುಷಾರ್
  • ಅಭಿನಂದನ್ ಸಿಂಗ್
  • ಯಶ್ ದಯಾಳ್
  • ರಿಚರ್ಡ್‌ ಗ್ಲಿಸನ್
  • ಸಾತ್ವಿಕ್ ದೇಸ್ವಾಲ್
  • ವಿಕಿ ಓಸ್ಟ್ವಾಲ್

ಭುವನೇಶ್ವರ್ ಕುಮಾರ್ ಹಾಗೂ ಕೃನಾಲ್ ಪಂಡ್ಯ ಅವರನ್ನು ಆರ್‍‌ಸಿಬಿ ಕೈಬಿಡುವ ಪ್ರಶ್ನೆಯೇ ಇಲ್ಲ. ಇನ್ನು ವೆಂಕಟೇಶ್ ಅಯ್ಯರ್ ಅವರನ್ನು ಆರ್‍‌fಸಿಬಿ ಕೈಬಿಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ಬದಲಾದ ಲೆಕ್ಕಾಚಾರದಲ್ಲಿ ಆರ್‍‌ಸಿಬಿ ಅಯ್ಯರ್‍‌ ಅವರನ್ನು ಉಳಿಸಿಕೊಂಡರೂ ಅಚ್ಚರಿ ಇಲ್ಲ. 2025 ಮೆಗಾ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ಹಣಕ್ಕೆ ಖರೀದಿಸಿತ್ತು. 2026 ಹರಾಜಿನಲ್ಲಿ ಆರ್‍‌ಸಿಬಿ ಅವರನ್ನು 7 ಕೋಟಿ ರೂಪಾಯಿಗೆ ಖರೀದಿಸಿತ್ತು.

ಈಗಾಗಲೇ ಆರ್‍‌ಸಿಬಿ ಎರಡು ಬಾರಿ ಚಾಂಪಿಯನ್ ಆಗಿದೆ. ಸತತ ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಂಡಿರುವ ನಮ್ಮ ಆರ್‍‌ಸಿಬಿ ಮತ್ತೊಮ್ಮೆ ಬಲಿಷ್ಠ ತಂಡ ರಚಿಸಲು ಪ್ಲಾನ್ ಮಾಡಿಕೊಂಡಿದೆ. ಆದರೆ ಈ ಬಾರಿ ಯಾರನ್ನೆಲ್ಲ ಉಳಿಸಿಕೊಳ್ಳಲಿದೆ ಅನ್ನೋದು ನವೆಂಬರ್ 17 ತಿಳಿಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ಹೀನಾಯ ಸೋಲಿಗೆ 'ಅದೊಂದೇ ಕಾರಣ' ಎಂದ ಶ್ರೇಯಸ್ ಅಯ್ಯರ್..! ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಕ್ಯಾಪ್ಟನ್
IPL 2027: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಭಾರೀ ಬದಲಾವಣೆ? ಹೆಟ್ಮೇಯರ್, ಬಿಷ್ಣೋಯ್ ಸೇರಿ ಈ ಆಟಗಾರರಿಗೆ ಗೇಟ್‌ಪಾಸ್?