ತಂಡ ಮಾರಾಟಕ್ಕೆ 17600 ಕೋಟಿ ರುಪಾಯಿ ಕೇಳುತ್ತಿರುವ ಆರ್‌ಸಿಬಿ?

Published : Oct 18, 2025, 10:28 AM IST
RCB adar Poonawalla

ಸಾರಾಂಶ

ಡಿಯಾಜಿಯೋ ಸಂಸ್ಥೆಯು ಆರ್‌ಸಿಬಿ ಫ್ರಾಂಚೈಸಿಯನ್ನು 2 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಭವಿಷ್ಯದ ಐಪಿಎಲ್ ಮಾಧ್ಯಮ ಹಕ್ಕುಗಳ ಬೃಹತ್ ಆದಾಯ ಈ ಬೆಲೆಯನ್ನು ಸಮರ್ಥಿಸಿದರೂ, ಕೊಹ್ಲಿ ನಿವೃತ್ತಿ ಹಾಗೂ ಕ್ರೀಡಾಂಗಣದ ಅನಿಶ್ಚಿತತೆ ಅಂಶಗಳು ಖರೀದಿದಾರರ ಮೇಲೆ ಪರಿಣಾಮ ಬೀರಬಹುದು.

ಬೆಂಗಳೂರು: ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಸಂಸ್ಥೆಯು 2 ಬಿಲಿಯನ್ ಅಮೆರಿಕನ್ ( 17,600 ಕೋಟಿ) ಕೇಳುತ್ತಿದೆ ಎಂದು ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತ ನೀಡಿ ಫ್ರಾಂಚೈಸಿಯನ್ನು ಖರೀದಿಸುವುದು ಲಾಭದಾಯಕವೇ? ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಲಿದೆ. ಐಪಿಎಲ್ ತಂಡದ ಒಡೆತನ ಲಾಭಕ್ಕಿಂತ ಪ್ರತಿಷ್ಟ ಎನ್ನುವುದು ಒಂದು ಕಡೆಯಾದರೆ, ಮುಂಬರುವ ದಿನಗಳಲ್ಲಿ ಐಪಿಎಲ್ ಮಾಧ್ಯಮ ಹಕ್ಕು ಮಾರಾಟದಿಂದ ಎಷ್ಟು ಹಣ ಸಿಗಲಿದೆ ಎನ್ನುವುದರ ಮೇಲೆ ತಂಡ ಖರೀದಿಯ ಮೊತ್ತ నిರ್ಧಾರವಾಗಬಹುದು.

ಮಾಧ್ಯಮ ಪ್ರಸಾರ ಹಕ್ಕು ಮೌಲ್ಯ ಗಣನೀಯ ಏರಿಕೆ

ಒಂದು ಲೆಕ್ಕಾಚಾರದ ಪ್ರಕಾರ, ಜಿಯೋ-ಸ್ಟಾರ್ ಸಂಸ್ಥೆಗಳು ಒಂದಾಗಿರುವುದರಿಂದ ಮಾಧ್ಯಮ ಪ್ರಸಾರ ಹಕ್ಕು ಮೌಲ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇತ್ತೀಚೆಗೆ ಜಿಯೋಸ್ಟಾರ್ ತನ್ನ ಚಂದಾದಾರರ ಸಂಖ್ಯೆ 50 ಕೋಟಿ ದಾಟಿದೆ ಎಂದು ಹೇಳಿಕೊಂಡಿತ್ತು. ಅದರ ಪ್ರಕಾರ, ಐಪಿಎಲ್‌ ವೀಕ್ಷಣೆಗೆ ಪ್ರತಿ ತಿಂಗಳಿಗೆ 100 ಶುಲ್ಕದಿಟ್ಟರೂ ತಿಂಗಳಿಗೆ ಅಂದಾಜು 5000 ಕೋಟಿ ರು. ಆದಾಯ ಸಿಗಲಿದೆ. 

ಐಪಿಎಲ್ ಪಂದ್ಯಗಳ ಸಂಖ್ಯೆ 96ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇರುವ ಕಾರಣ, ಟೂರ್ನಿ ಮಾರ್ಚ್‌ನಿಂದ ಜೂನ್‌ವರೆಗೂ ₹5000 ಒಟ್ಟು 4 ತಿಂಗಳ ಕಾಲ ನಡೆಯಲಿದೆ. ಪ್ರತಿ ತಿಂಗಳಿಗೆ 25000 ಕೋಟಿ ಅಂದರೆ 4 ತಿಂಗಳಿಗೆ 20,000 ಕೋಟಿ. ಜೊತೆಗೆ ನಿರೀಕ್ಷಿಸಬಹುದು. ಹೀಗಾಗಿ, 2027ರಲ್ಲಿ 5 ವರ್ಷಗಳ ಅವಧಿಗೆ ಮಾಧ್ಯಮ ಪ್ರಸಾರ ಹಕ್ಕು ಮಾರಾಟವಾಗುವಾಗ ಈಗಿರುವ ಮೊತ್ತಕ್ಕಿಂತ ಇನ್ನೂ ದೊಡ್ಡಮೊತ್ತ ನಿರೀಕ್ಷಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಮಾಧ್ಯಮ ಪ್ರಸಾರ ಹಕ್ಕಿನಿಂದ ಬರುವ ಒಟ್ಟು ಮೊತ್ತದಲ್ಲಿ ಶೇ. 50ರಷ್ಟನ್ನು ಬಿಸಿಸಿಐ ಎಲ್ಲಾ 10 ತಂಡಗಳಿಗೆ ಸಮನಾಗಿ ಹಂಚಲಿದೆ. ಹೀಗಾಗಿ, ಆರ್‌ಸಿಬಿ ಮಾಲಿಕರು ಕೇಳುತ್ತಿರುವ 2 ಬಿಲಿಯನ್ ಡಾಲರ್ ಸರಿಯಾಗಿದೆ ಎಂದು ವಿಶ್ಲೇಷಣೆ ನಡೆಯುತ್ತಿದೆ.

ತಂಡ ಖರೀದಿಸುವವರ ಮುಂದಿದೆ ದೊಡ್ಡ ಸವಾಲು

ಆದರೆ, ಇಷ್ಟು ವರ್ಷ ಆರ್‌ಸಿಬಿ ಕಪ್ ಗೆದ್ದಿಲ್ಲ ಎನ್ನುವ ಕಾರಣಕ್ಕೆ ಆ ಪಾಟಿ ಕ್ರೇಜ್ ಇತ್ತು. ಈಗ ಕಪ್ ಗೆದ್ದಾಯಿತು. ವಿರಾಟ್ ಕೊಹ್ಲಿ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಕ್ರೇಜ್ ಕಡಿಮೆಯಾಗಲಿದೆ ಎನ್ನುವುದು ಕೆಲವರ ವಾದ. ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತ ಪ್ರಕರಣದಿಂದಾಗಿ ತಂಡಕ್ಕೆ ಬೆಂಗಳೂರಿನಲ್ಲಿ ಕ್ರೀಡಾಂಗಣ ಸಿಗುವ ಬಗ್ಗೆಯೂ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಆರ್‌ಸಿಬಿ ತಂಡವನ್ನು ಡಿಯಾಜಿಯೋ ಸಂಸ್ಥೆ ಮಾರಾಟಕ್ಕಿಟ್ಟರೆ ಈ ಎಲ್ಲಾ ಅಂಶಗಳೂ ಪರಿಗಣನೆಗೆ ಬರಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌