ಆರ್‌ಸಿಬಿ ಮಾರಾಟ ಫಿಕ್ಸ್? ಡಿಯಾಜಿಯೋ ಸಂಸ್ಥೆಯಲ್ಲಿ ಭಿನ್ನಮತ!

Published : Oct 18, 2025, 09:27 AM IST
RCB Instagram

ಸಾರಾಂಶ

ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಲೀಕ ಸಂಸ್ಥೆ ಡಿಯಾಜಿಯೋದಲ್ಲಿ ಭಿನ್ನಮತವಿದ್ದು, ಅದಾರ್ ಪೂನಾವಾಲಾ ಮತ್ತು ಜೆಎಸ್‌ಡಬ್ಲ್ಯು ಸಮೂಹ ಸೇರಿದಂತೆ 6 ಸಂಸ್ಥೆಗಳು ತಂಡವನ್ನು ಖರೀದಿಸಲು ಆಸಕ್ತಿ ತೋರಿವೆ ಎಂದು ವರದಿಯಾಗಿದೆ.

ನವದೆಹಲಿ: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮಾರಾಟಕ್ಕಿದೆ ಎನ್ನುವ ಸುದ್ದಿ ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಸೀರಮ್ ಇನ್‌ಸ್ಟಿಟ್ಯೂಟ್‌ ಅದಾರ್ ಪೂನಾವಾಲಾ ಒಳ್ಳೆಯ ಮೊತ್ತಕ್ಕೆ ಸಿಕ್ಕರೆ ಆರ್‌ಸಿಬಿ ಖರೀದಿಗೆ ಸಿದ್ದ ಎನ್ನುವ ಅರ್ಥದಲ್ಲಿ ಮಾಡಿದ ಟ್ವೀಟ್  ಭಾರೀ ವೈರಲ್ ಆಗಿತ್ತು. 

ಇದೀಗ, ಆರ್‌ಸಿಬಿ ಖರೀದಿಗೆ ಬರೀ ಪೂನಾವಾಲಾ ಮಾತ್ರವಲ್ಲ, ಅವರನ್ನೂ ಸೇರಿ ಒಟ್ಟು 6 ಸಂಸ್ಥೆಗಳು ಆಸಕ್ತಿ ತೋರಿದೆ ಎಂದು ಮಾಧ್ಯಮ ವೊಂದು ವರದಿ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶೇ.50 1 ರಷ್ಟು ಪಾಲುದಾರಿಕೆ ಹೊಂದಿರುವ ಜೆಎಸ್‌ ಡಬ್ಲ್ಯು ಸಮೂಹದ ಪಾರ್ಥ್ ಜಿಂದಾಲ್ ದಿಲ್ಲಿಯ ಬಹುಕೋಟಿ ವ್ಯಾಪಾರೋದ್ಯಮಿ, ಅಮೆರಿಕದ ಎರಡು ಖಾಸಗಿ ಈಕ್ವಿಟಿ ಕಂಪನಿಗಳು ಆ‌ರ್ ಸಿಬಿಯನ್ನು ಖರೀದಿಸಲು ಸಿದ್ಧವಿರುವುದಾಗಿ ಸುದ್ದಿಯಾಗಿದೆ. 

ಡಿಯಾಜಿಯೋದಲ್ಲಿ ಭಿನ್ನಮತ? 

ಆರ್‌ಸಿಬಿ ತಂಡದ ಮಾಲಿಕತ್ವ ಹೊಂದಿರುವ ಡಿಯಾಜಿಯೋ ಸಂಸ್ಥೆಯ ಬ್ರಿಟನ್ ಕಚೇರಿ ತಂಡವನ್ನು ಮಾರಾಟ ಮಾಡಲು ಆಸಕ್ತಿ ಹೊಂದಿದೆ. ವ್ಯಾಪಾರದಲ್ಲಿ ತನ್ನ ಸಲಹೆ, ಮಾರ್ಗದರ್ಶನ ನೀಡಲು ಸಿಟಿ ಬ್ಯಾಂಕನ್ನು ನೇಮಕ ಮಾಡಿಕೊಂಡಿದೆ ಎನ್ನಲಾಗಿದೆ. ವಿಶ್ವದ ಹಲವು ದುಬಾರಿ ಮದ್ಯ ಬ್ಯಾಂಡ್‌ಗಳ ಮಾಲಿಕ ಡಿಯಾಜಿಯೋ ಐಪಿಎಲ್ ತಂಡದ ಮಾಲಿಕತ್ವವನ್ನು ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ. ಆದರೆ ಸಂಸ್ಥೆಯ ಭಾರತೀಯ ಕಚೇರಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆರ್‌ಸಿಬಿ ತಂಡವನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಚ್ಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಪೂನಾವಾಲಾ, ಅದಾನಿಗೆ ಈ ಬಾರಿ ಲಕ್?

ಅದಾರ್ ಪೂನಾವಾಲಾರ ತಂದೆ ಸೈರಸ್ 2010ರಲ್ಲಿ ಐಪಿಎಲ್ ತಂಡಗಳನ್ನು 12ಕ್ಕೆ ಹೆಚ್ಚಳ ಮಾಡುವ ಸಂದರ್ಭದಲ್ಲಿ ಟೆಂಡರ್ ಪ್ರತಿ ಪಡೆದಿದ್ದರು. ಆದರೆ ಪುಣೆ, ಕೊಚ್ಚಿ ತಂಡಗಳು ಕ್ರಮವಾಗಿ ಸಹರಾ ಹಾಗೂ ರೆಂಡೆಜ್ವೊಸ್ ಸ್ಪೋರ್ಟ್ಸ್ ಪಾಲಾಗಿದ್ದವು. ಇನ್ನು, 2022ರಲ್ಲಿ ಅಹಮದಾಬಾದ್ ಫ್ರಾಂಚೈಸಿಯು ಸಣ್ಣ ಅಂತರದಲ್ಲಿ ಅದಾನಿ ಕೈತಪ್ಪಿತ್ತು. ಈಗೇನಾದರೂ ಆರ್‌ಸಿಬಿ ತಂಡ ಖದೀರಿಗೆ ಸಿಕ್ಕರೆ ಈ ಇಬ್ಬರು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ. ಇನ್ನು, ಒಂದು ವೇಳೆ ಜೆಎಸ್‌ ಡಬ್ಲ್ಯು, ಆರ್‌ಸಿಬಿ ಮಾಲಿಕರಾಗಲು ಇಚ್ಛಿಸಿದರೆ ಡೆಲ್ಲಿ ತಂಡದಲ್ಲಿರುವ ಪಾಲುದಾರಿಕೆ ಯನ್ನು ಬೇರೊಬ್ಬರಿಗೆ ಮಾರಾಟ ಮಾಡಬೇಕಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್