
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್‍ಸಿಬಿ. ಅದೊಂದು ಬಿಗ್ ಬ್ರಾಂಡ್. ಜಾಗತಿಕ ಮಟ್ಟದಲ್ಲಿ ಬೃಹತ್ ಬ್ರ್ಯಾಂಡ್ ಆಗಿ ಬೆಳೆದಿರುವ ನಮ್ಮ ಆರ್‍ಸಿಬಿಗೆ ಇದೀಗ ಮತ್ತೊಂದು ಹೆಗ್ಗಳಿಕೆ ಸಿಕ್ಕಿದೆ. ವಿಶ್ವದ ಪ್ರತಿಷ್ಠಿತ ಫ್ಯಾಷನ್ ವೇದಿಕೆ ಇಟಲಿಯ ಮಿಲಾನ್‌ನಲ್ಲಿ ಮಿಂಚುವ ಮೂಲಕ ಸಂಚಲನ ಸೃಷ್ಟಿಸಿದೆ.
ಹೌದು, ನಮ್ಮ ಆರ್‍ಸಿಬಿ ಫ್ರಾಂಚೈಸಿಯು ಜನಪ್ರಿಯ ಸ್ಪೋರ್ಟ್ಸ್‌ವೇರ್ ಬ್ರ್ಯಾಂಡ್ ಪೂಮಾ ಮತ್ತು ಖ್ಯಾತ ಭಾರತೀಯ ಫ್ಯಾಷನ್ ಡಿಸೈನರ್ ಧ್ರುವ್ ಕಪೂರ್ ಜೊತೆ ಕೈಜೋಡಿಸಿದೆ. ಅಂದರೆ ಇವರ ಜೊತೆಗೂಡಿ ಜಾಗತಿಕ ಮಿಲಾನ್ ಫ್ಯಾಷನ್ ವೀಕ್ (Milan Fashion Week) ರ‍್ಯಾಂಪ್ ಮೇಲೆ ಹೊಸ ಹೆಜ್ಜೆಯನ್ನಿಟ್ಟಿದೆ. ಇದರೊಂದಿಗೆ ಈ ಸಾಧನೆ ಮಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಫ್ರಾಂಚೈಸಿ ಎಂಬ ಗೌರವಕ್ಕೆ ಪಾತ್ರವಾಗಿದೆ.
ಇನ್ನು, ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ನಡೆದ ಧ್ರುವ್ ಕಪೂರ್ ಅವರ ಸ್ಪ್ರಿಂಗ್/ಸಮ್ಮರ್ 2027 ಸಂಗ್ರಹದ Presence ಶೋನಲ್ಲಿ ವಿಶೇಷ ವಿನ್ಯಾಸಗಳನ್ನು ಅನಾವರಣ ಆಗಿದೆ. ಇಲ್ಲಿ ಕ್ರಿಕೆಟ್ ಸಂಸ್ಕೃತಿ, ಆರ್‌ಸಿಬಿಯ ವಿಶಿಷ್ಟ ಶೈಲಿ ಮತ್ತು Streetwearಗಳನ್ನು ಒಗ್ಗೂಡಿಸಿ ಸಿದ್ಧಪಡಿಸಲಾದ ಮೂರು ಲಿಮಿಟೆಡ್ ಎಡಿಷನ್ ಜಾಕೆಟ್‌ಗಳು ರ‍್ಯಾಂಪ್ ವಾಕ್‌ನಲ್ಲಿ ಗಮನ ಸೆಳೆಯಿತು. ಜಾಕೆಟ್‌ಗಳನ್ನು ಆಧುನಿಕ ಮತ್ತು ಅತ್ಯುನ್ನತ ಫ್ಯಾಷನ್‌ಗೆ ತಕ್ಕಂತೆ ಡಿಸೈನ್ ಮಾಡಲಾಗಿದೆ. ಇದು 2027ರ ಐಪಿಎಲ್ ವೇಳೆಗೆ ಮಾರುಕ್ಟೆಗೆ ಲಗ್ಗೆ ಇಡಲಿದೆ.
ಮಿಲಾನ್ ಫ್ಯಾಷನ್ ವೀಕ್‌ಗೆ ಜಾಗತಿಕ ಫ್ಯಾಷನ್ ಲೋಕದಲ್ಲಿ ಅಗ್ರಸ್ಥಾನ. ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ಮತ್ತು ಮಿಲಾನ್. ಇವುಗಳನ್ನು ಜಗತ್ತಿನ ನಾಲ್ಕು ಫ್ಯಾಷನ್ ರಾಜಧಾನಿಗಳು ಎಂದು ಕರೆಯಲಾಗುತ್ತದೆ. ಇಟಲಿಯ ಮಿಲಾನ್ ನಗರದಲ್ಲಿ ನಡೆಯುವ ವಾರ್ಷಿಕ ಫ್ಯಾಷನ್ ವೀಕ್ ಅತ್ಯಂತ ಫೇಮಸ್. ಇಲ್ಲಿ ಗುಸ್ಸಿ (Gucci), ಪ್ರಾಡಾ (Prada), ಅರ್ಮಾನಿ (Armani), ವರ್ಸಾಚೆ (Versace) ಯಂತಹ ಜನಪ್ರಿಯ ಲಕ್ಸುರಿ ಬ್ರ್ಯಾಂಡ್‌ಗಳು ಮತ್ತು ಉನ್ನತ ಮಾಡೆಲ್‌ಗಳು ಮಾತ್ರ ಟ್ರೆಂಡ್ ಸೃಷ್ಟಿಸುತ್ತವೆ. ಇಂತಹ ಎಲೈಟ್ ಹೈ-ಫ್ಯಾಷನ್ ವೇದಿಕೆಯಲ್ಲಿ ಸ್ಪೋರ್ಟ್ಸ್ ಫ್ರಾಂಚೈಸಿಗಳು ಕಾಣಿಸಿಕೊಳ್ಳುವುದೇ ಅಪರೂಪ. ಆದರೆ ನಮ್ಮ ಆರ್‍ಸಿಬಿಗೆ ವೇದಿಕೆ ಸಿಕ್ಕಿರೋದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ..
ಅಂದರೆ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಳಗುವ ಆರ್‌ಸಿಬಿ.. ಆರ್‌ಸಿಬಿ.. ಎಂಬ ಘೋಷಣೆಯ ಕೇವಲ ಕ್ರೀಡಾಂಗಣಕ್ಕೆ ಸೀಮಿತವಾಗಿಲ್ಲ. ಫ್ರಾಂಚೈಸಿಯ ಜೆರ್ಸಿ ಮತ್ತು ಮರ್ಚಂಡೈಸ್‌ಗಳನ್ನು ಅಭಿಮಾನಿಗಳು ಕೇವಲ ಮ್ಯಾಚ್ ದಿನಗಳಲ್ಲಿ ಮಾತ್ರವಲ್ಲದೆ, ದೈನಂದಿನ ಲೈಫ್‌ಸ್ಟೈಲ್ ಉಡುಪನ್ನಾಗಿ ಧರಿಸುವಂತೆ ರೂಪಿಸಲಾಗುತ್ತಿದೆ. ಒಂದು ಕಡೆ ಮೈದಾನದಲ್ಲಿ ಸತತವಾಗಿ ಎರಡನೇ ಬಾರಿಗೆ ಟ್ರೋಫಿ ಗೆದ್ದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಇನ್ನೊಂದು ಕಡೆ ಜಾಗತಿಕ ಮಟ್ಟದಲ್ಲಿ ತನ್ನ ಬ್ರ್ಯಾಂಡ್ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ತಿದೆ.
ಇನ್ನು ಈ ಸುದ್ದಿಯನ್ನು ಕೇಳಿದ ಆರ್‍ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ನಮ್ಮ ಆರ್‍ಸಿಬಿ, ನಮ್ಮ ಹೆಮ್ಮೆ ಎಂದು ಕೊಂಡಾಡುತ್ತಿದ್ದಾರೆ. ಮಿಲಾನ್‌ನ ಪ್ರತಿಷ್ಠಿತ ರ‍್ಯಾಂಪ್ ಮೇಲೆ ಕೆಂಪು-ಚಿನ್ನದ ಬಣ್ಣಗಳು ರಾರಾಜಿಸುವ ಮೂಲಕ ಆರ್‌ಸಿಬಿ ಕೇವಲ ಕ್ರಿಕೆಟ್ ತಂಡವಾಗಿ ಉಳಿಯದೆ.. ಗ್ಲೋಬಲ್ ಪಾಪ್ ಕಲ್ಚರ್ ಹಾಗೂ ಫ್ಯಾಷನ್ ಜಗತ್ತಿನ ಸೂಪರ್‌ಪವರ್ ಆಗಿ ಬೆಳೆದುನಿಂತಿದೆ.
🚨 RCB BECOMES THE FIRST IPL FRANCHISE TO DEBUT ON THE RUNWAY AT MILAN FASHION WEEK 🚨
- The Craze of RCB & King Kohli..!!! 🔥 pic.twitter.com/UhMiEseNSa— Tanuj (@ImTanujSingh) September 26, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.