ಎರಡು ಕಾರಣಕ್ಕೆ ಬೆಂಗಳೂರಿನ IND vs WI ಪಂದ್ಯಕ್ಕೆ ಕಾದು ಕುಳಿತ ಆರ್‌ಸಿಬಿ ಫ್ಯಾನ್ಸ್, ಮಳೆಯಿಂದ ನಿರಾಸೆ

Published : Oct 17, 2026, 08:46 PM IST
ndia vs West Indies in Bengaluru

ಸಾರಾಂಶ

ಭಾರತ ವೆಸ್ಟ್ ಇಂಡೀಸ್ ಟಿ20 ಪಂದ್ಯಕ್ಕ ಮಳೆ ಅಡ್ಡಿಯಾಗಿದೆ. ಇತ್ತ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾದು ಕುಶಳಿತಿದ್ದಾರೆ. ಇತ್ತ ಆರ್‌ಸಿಬಿ ಅಭಿಮಾನಿಗಳು ಪಂದ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದಕ್ಕೆ ಎರಡು ಕಾರಣಗಳಿವೆ.

ಬೆಂಗಳೂರು (ಅ.17) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕೊನೆಯ ಹಾಗೂ 5ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಇನ್ನೂ ಶುರುವಾಗಿಲ್ಲ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಪಂದ್ಯ ಆರಂಭ ವಿಳಂಬವಾಗಿದೆ. ಜಿಟಿಜಿಟಿ ಮಳೆಯಿಂದ ಈಗಾಗಲೇ ಸಮಯ ಮೀರಿದೆ. ಹೀಗಾಗಿ ಪಂದ್ಯದ ಓವರ್ ಕಡಿತದ ಸಮಯ ಆರಂಭಗೊಂಡಿದೆ. ಸದ್ಯ ಮಳೆಯಾಗುತ್ತಿರುವ ಕಾರಣ ಅಭಿಮಾನಿಗಳಿಂದ ಹಿಡಿದು ಆಟದಾರರು ಕಾದು ಕುಳಿತಿದ್ದಾರೆ. ಇದರ ನಡುವೆ ಆರ್‌ಸಿಬಿ ಅಭಿಮಾನಿಗಳಿಗೆ ನಿರ್ಣಾಯ ಪಂದ್ಯದ ಜೊತೆಗೆ ಮತ್ತೆರೆಡು ಕಾರಣಗಳಿಂದ ಪಂದ್ಯ ಆರಂಭಕ್ಕೆ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ.

ಡೆಬ್ಯೂ ಮೈದಾನದಲ್ಲಿ ಕಮ್‌ಬ್ಯಾಕ್, ಭುವಿಗಾಗಿ ಪ್ರಾರ್ಥನೆ

ಭುವನೇಶ್ವರ್ ಕುಮಾರ್ ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿಕೊಟ್ಟ ಬೌಲರ್. ಇದೀಗ ಟೀಂ ಇಂಡಿಯಾಗೂ ಕಮ್‌ಬ್ಯಾಕ್ ಮಾಡಿರುವ ಭುವನೇಶ್ವರ್ ಕುಮಾರ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇತ್ತು. ಆದರೆ ಮಳೆಯಿಂದ ಪಂದ್ಯ ವಿಳಂಭವಾಗಿದೆ. ವಿಶೇಷ ಅಂದರೆ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಗೆ ಪದಾರ್ಪೆ ಮಾಡಿದ್ದು ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಪಾಕಿಸ್ತಾನ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ ಬೌಲರ್. ಬಳಿಕ ಅದ್ಬುತ ಸ್ವಿಂಗ್ ಮೂಲಕ ಭಾರತದ ಕೀ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಆದರೆ ಇಂಜುರಿ ಸಮಸ್ಯೆಯಿಂದ ತಂಡದಿಂದ ಹಲವು ಬಾರಿ ಹೊರಬಿದ್ದ ಭುವನೇಶ್ವರ್ ಕುಮಾರ್‌ ಇದೀಗ ಬೆಂಗಳೂರಿನಲ್ಲೇ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದರು. ಆದರೆ ಮಳೆಯಿಂದ ಪಂದ್ಯ ಭಾರಿ ವಿಳಂಭವಾಗಿದೆ. ಇದು ಆರ್‌ಸಿಬಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಕಾಲ್ತುಳಿತ ಬಳಿಕ ಬ್ಲಾಕ್‌ಲಿಸ್ಟ್‌ನಲ್ಲಿದ್ದ ಚಿನ್ನಸ್ವಾಮಿ

2025ರ ಐಪಿಎಲ್ ಗೆಲುವಿನ ಸಂಭ್ರಮಾಚರಣಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಪರಿಣಾಮ ಐತಿಹಾಸಿಕ ಚಿನ್ನಸ್ವಾಮಿ ಕ್ರೀಡಾಂಗಣ ಕಪ್ಪು ಪಟ್ಟಿಗೆ ಸೇರಿಕೊಂಡಿತ್ತು. 2026ರ ಐಪಿಎಲ್ ಪಂದ್ಯಗಳು ದೂರವಾಗಿತ್ತು. ಆದರೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಸೀಮಿತ ಪಂದ್ಯಗಳು ಮರಳಿತ್ತು. ಕಾಲ್ತುಳಿತ ಬಳಿಕ ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ದೂರವಾಗಿತ್ತು. ಆದರೆ ಸತತ ಪ್ರಯತ್ನದಿಂದ ಇದೀಗ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಆದರೆ ಈ ಪಂದ್ಯ ಮಳೆಯಿಂದ ರದ್ದಾಗುವ ಆತಂಕವೂ ಎದುರಾಗಿದೆ.

ಟೀಂ ಇಂಡಿಯಾ ಗೆಲುವಿನ ಜೊತೆಗೆ ಆರ್‌ಸಿಬಿ ಅಭಿಮಾನಿಗಳಿಗೆ ಪ್ರಮುಖ ಎರಡು ಕಾರಣಕ್ಕಾಗಿ ಇಂದಿನ ಪಂದ್ಯ ಪ್ರಮುಖವಾಗಿತ್ತು. ಆದರೆ ಮಳೆ ಕೊಂಚ ಬಿಡುವು ಕೊಟ್ಟರೂ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂದ್ಯ ಆರಂಭಗೊಳ್ಳಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅವರಿಗೆ ಅದು ಅರ್ಥವಾಗತ್ತೆ..' ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ ಬಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ..!
ತಂದೆಗೆ ತಕ್ಕ ಮಗ..! 23 ಬೌಂಡರಿ ಸಹಿತ 151 ರನ್‌ ಚಚ್ಚಿದ ಅನ್ವಯ್ ದ್ರಾವಿಡ್..! ಗುಜರಾತ್ ಎದುರು ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ಕರ್ನಾಟಕ