Virat Kohli: ಚೇಸಿಂಗ್​ ಮಾಸ್ಟರ್ ಅಲ್ಲ ಈತ ಡಕ್​ ಮಾಸ್ಟರ್..!​

Published : May 09, 2022, 06:47 PM IST
Virat Kohli: ಚೇಸಿಂಗ್​ ಮಾಸ್ಟರ್ ಅಲ್ಲ ಈತ ಡಕ್​ ಮಾಸ್ಟರ್..!​

ಸಾರಾಂಶ

* ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದ ವಿರಾಟ್ ಕೊಹ್ಲಿ * ಚೇಸಿಂಗ್‌ನಲ್ಲಿ ರನ್‌ ಮಳೆ ಹರಿಸುತ್ತಿದ್ದ ಕೊಹ್ಲಿ ಈ ಬಾರಿ ಮೂರನೇ ಬಾರಿ ಶೂನ್ಯ ಸಂಪಾದನೆ * ಚೇಸಿಂಗ್ ಮಾಸ್ಟರ್‌ ಈಗ ಡಕ್ ಮಾಸ್ಟರ್‌ ಆಗಿ ಹೊರಹೊಮ್ಮುತ್ತಿದ್ದಾರೆ

ಮಂಬೈ(ಮೇ.09): ಎಲ್ಲಿ ಆ ಹಳೆಯ ಕಿಂಗ್ ಕೊಹ್ಲಿ ? ಎಲ್ಲಿ ಹೋಯ್ತು ಆ ವೀರಾವೇಶ ? ಎಲ್ಲಿ ಹೋಯ್ತು ಆ ಸೆಂಚುರಿ ವೈಭವ ?. ಪ್ರೀತಿಯ ವಿರಾಟ್ ಕೊಹ್ಲಿ (Virat Kohli) ನಿಮಗೇಕೆ ಇಂತಹ ದುಸ್ಥಿತಿ ? ನಿಮ್ಮ ಒಂದೊಂದು ಸೆಂಚುರಿ ಇನ್ನೂ ನಮ್ಮ ಕಣ್ಣಂಚಿನಲ್ಲಿವೆ. ನಿಮ್ಮ ವಿರಾಟ ರೂಪವಂತೂ ಇನ್ನೂ ರೋಮಾಂಚನ. ನೀವು ಶತಕ ಸಿಡಿಸಿ ಎದುರಾಳಿ ಮೇಲೆ ಸವಾರಿ ಮಾಡುತ್ತಿದ್ದೆ ನೋಡಿ, ಅದು ಕಿಲ್ಲಿಂಗ್​ ಇನ್ನಿಂಗ್ಸ್. ಇಂತಹ ದುಸ್ವಪ್ನಕಾರ, ಇಂತಹ ಜಗಮೆಚ್ಚಿದ ವೀರನಿಗೆ ಈಗೇನಾಯ್ತು ? ಪ್ಲೀಸ್​​ ವಿರಾಟ್ ನೀವು ನಿನ್ನ ಹಳೆಯ ವೈಭವವನ್ನ ಮತ್ತೆ ಮರುಕಳಿಸು. ಸದ್ಯ ಕೊಹ್ಲಿಯನ್ನ ಅಪ್ಪಿ, ಮನಸ್ಸಿನ ದೇಗುಲದಲ್ಲಿ ಪೂಜಿಸ್ತಿದ್ದ ಎಲ್ಲಾ ಭಕ್ತರ ಅಳಲು ಇದು.

ನಿಜ, ಕೊಹ್ಲಿಯನ್ನ ಇಂತಹ ಸಂಕಷ್ಟದಲ್ಲಿ ನೋಡಲಾಗುತ್ತಿಲ್ಲ. ಚೇಸಿಂಗ್​ ಮಾಸ್ಟರ್ ಅಲ್ಲ ಡಕ್​ ಮಾಸ್ಟರ್​​​​​, ಸೆಂಚುರಿ ಸ್ಪೆಶಲಿಸ್ಟ್ ಅಲ್ಲ ಡಕ್ ಸ್ಪೆಶಲಿಸ್ಟ್ ಅಂತ ಕರೆಸಿಕೊಳ್ಳುವಾಗಲೆಲ್ಲಾ ಮನಸ್ಸು ಘಾಸಿಗೊಳ್ತಿದೆ. ವಿರಾಟ್ ಅಂದ್ರೆ ಶೂನ್ಯ ಶೂರನಾ ? ಅಂತ ಕರೆಯುವಾಗಲಂತೂ ಹೃದಯ ನಿಜಕ್ಕೂ ಛಿದ್ರಗೊಳ್ತಿದೆ. ಇದಕ್ಕೆ ಕೊನೆ ಯಾವಾಗ ? ಎರಡು ಬಾರಿ ಡಕೌಟ್​​ ಆದಾಗಲೇ ಇದು ಕೊನೆ ಅಂದುಕೊಂಡಿದ್ವಿ. ಅದು ಸುಳ್ಳಾಯ್ತು. 

ಸೀಸನ್​ವೊಂದರಲ್ಲಿ 3 ಬಾರಿ ಶೂನ್ಯ ಸುತ್ತಿದ ವಿರಾಟ್:

ಇಡೀ ಆರ್​ಸಿಬಿ ಫ್ಯಾನ್ಸ್ (RCB Fans) ಗ್ರೀನ್​ ಜೆರ್ಸಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಆರ್ಭಟ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ರು.ಸ್ಟೇಡಿಯಂಗೆ ಜೋಶ್​​​ನಿಂದಲೇ ಕಾಲಿಟ್ಟ ಕೊಹ್ಲಿ ಕೊನೆಗೆ ಘರ್ಜಿಸಲೇ ಇಲ್ಲ. ಹೈದ್ರಾಬಾದ್​ ವಿರುದ್ಧ ಮೊದಲ ಎಸೆತದಲ್ಲೇ ಡಕೌಟ್ ಆಗಿಬಿಟ್ರು. ಅಲ್ಲಿಗೆ ವಿರಾಟ್ ಅನ್ನೋ ಸೆಂಚುರಿ ಸ್ಪೆಶಲಿಸ್ಟ್ ಕೊನೆಗೆ ಡಕೌಟ್​​​ನಿಂದ  ಹೊರಬರಲು ಸಾಧ್ಯವಾಗ್ಲಿಲ್ಲ.

Virat Kohli ವಿಕೆಟ್ ಕಬಳಿಸಿ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಬರೆದ ಕನ್ನಡಿಗ ಜೆ ಸುಚಿತ್..!

ಡುಪ್ಲೆಸಿಸ್​ ಜೊತೆ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ಸೊನ್ನೆ ಸುತ್ತುವ ಮೂಲಕ ಮತ್ತೊಮ್ಮೆ ಡಕಪ್ಪ ಅನ್ನಿಸಿಕೊಂಡ್ರು. ಇದು ಪ್ರಸಕ್ತ ಐಪಿಎಲ್​​ನಲ್ಲಿ ವಿರಾಟ್ ಆದ 3ನೇ ಡಕೌಟ್​​​. ದಿಗ್ಗಜ  ಕೊಹ್ಲಿ  ಹೀಗೆ ಸೊನ್ನೆ ಸುತ್ತಿ ಅತೀ ಬೇಸರದಿಂದ ಡಕೌಟ್​ ಸೇರಿದ್ದು ಇದೇ ಮೊದಲು. ಹೌದು, ಯಾವುದೇ ಟೂರ್ನಮೆಂಟ್​ ಅಥವಾ ಸಿರೀಸ್​​​ವೊಂದರಲ್ಲೇ ಕೊಹ್ಲಿ ಈವರೆಗೆ 3 ಬಾರಿ ಡಕೌಟ್ ಆಗಿರಲಿಲ್ಲ. ಕೊನೆಗೆ ಆ ಅಪಖ್ಯಾತಿಗೆ ಮಾಡ್ರನ್​ ಕ್ರಿಕೆಟ್ ದೊರೆ ಭಾಜನರಾಗಿಬಿಟ್ರು.  

ಕೊಹ್ಲಿಯನ್ನ ಉಳಿಸಿಕೊಂಡು ತಪ್ಪು ಮಾಡ್ತಾ ಮ್ಯಾನೇಜ್​​ಮೆಂಟ್​​?: 

ಮೂರು ಬಾರಿ ಡಕೌಟ್​​​, 21 ರ ಎವರೇಜ್​​ನಲ್ಲಿ 216 ರನ್​​ ಅಂದ್ರೆ ಯಾರಿಗೆ ತಾನೇ ಸಿಟ್ಟು ಬರಲ್ಲ ಹೇಳಿ ? ಕೊಹ್ಲಿ ಹೀಗೆ ಬ್ಯಾಕ್​​ ಟು ಬ್ಯಾಕ್​ ಶೂನ್ಯಕ್ಕೆ ಔಟಾಗ್ತಿರೋದಕ್ಕೆ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಕೊಹ್ಲಿ ಆರ್​ಸಿಬಿ ಸಂಕಷ್ಟ ತಂದೊಡ್ತಿದ್ದಾರೆ. ಇವರಿಂದ ತಂಡಕ್ಕೆ ನಯಾ ಪೈಸೆ ಲಾಭವಿಲ್ಲ. ಹಿಂದೆ ಮುಂದೆ ನೋಡದೇ ವಿರಾಟ್​​ರನ್ನ ತಂಡದಿಂದ ಹೊರಗಿಡಿ ಅಂತೆಲ್ಲಾ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರಂತೂ ಕೊಹ್ಲಿ ತಂಡಕ್ಕೆ ಭಾರ, ಅವರನ್ನ ಆಕ್ಷನ್​​ನಲ್ಲಿ ಟೀಂ​ ಮ್ಯಾನೇಜ್​​​ಮೆಂಟ್​ ಖರೀದಿಸಲೇಬಾರದಿತ್ತು ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ವಿರಾಟ್​​​ಗೂ ನಿಜಕ್ಕೂ ದೊಡ್ಡ ಮುಖಭಂಗ. ಈ ದಯನೀಯ ವೈಫಲ್ಯಕ್ಕೆ ಕೊಹ್ಲಿ ಆದಷ್ಟು ಬೇಗ ಸೆಲ್ಯೂಷನ್ ಕಂಡುಕೊಳ್ಳಬೇಕಿದೆ. ಇಲ್ಲವಾದ್ರೆ ಲವ್ ವಿರಾಟ್ ಕೊಹ್ಲಿ ಅಂತಿದ್ದವರೆಲ್ಲ, ಇನ್ಮುಂದೆ ಹೇಟ್​​ ಯು ಅನ್ನೋ ಮಾತು ಕೇಳಬೇಕಾದೀತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!