ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರಂತೆ ಅನ್ನೋ ಗಾದೆ ಮಾತು ನಿಮಗೆಲ್ಲಾ ಗೊತ್ತಿರಬೇಕಲ್ವಾ..? ಈಗ ಕ್ರಿಕೆಟ್ನಲ್ಲೂ ಹಾಗೆ ಆಗಿದೆ. ಟೀಂ ಇಂಡಿಯಾ ಓಪನರ್ ಋತುರಾಜ್ ಗಾಯಕ್ವಾಡ್ ಇಂಜುರಿಯಾಗಿದ್ದಾರೆ. ಆದ್ರೆ ಇದರಿಂದ ನಷ್ಟವಾಗಿರೋದು ಆರ್ಸಿಬಿಗೆ. ಅದು ಹೇಗೆ ಅಂತ ಹೇಳೋಕು ಮುನ್ನ ಮಹಾರಾಷ್ಟ್ರ ಬ್ಯಾಟರ್‌ಗೆ ಏನ್ ಆಗಿದೆ ಅನ್ನೋದನ್ನ ಹೇಳ್ತಿವಿ ಕೇಳಿ.
ಬೆಂಗಳೂರು(ಡಿ.24): ಋತುರಾಜ್ ಗಾಯಕ್ವಾಡ್ ಇಂಜುರಿ. ರಜತ್ ಪಾಟೀದಾರ್ ಡಬಲ್ ಧಮಾಕ. ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಡೆಬ್ಯು ಮಾಡಿದ್ರು. ಜೊತೆಗೆ 30 ಲಕ್ಷ ರೂಪಾಯಿ ಬಂಪರ್ ಪ್ರೈಜ್ ಬಂತು. ಅದು ಆರ್ಸಿಬಿಯಿಂದ. ಅಯ್ಯೋ. ಒಂದಕ್ಕೊಂದು ಲಿಂಕೇ ಇಲ್ಲ. ಇವರು ಏನ್ ಹೇಳ್ತಿದ್ದಾರೆ ಅಂತ ಕನ್‌ಫ್ಯೂಸ್ ಆಗ್ಬೇಡಿ. ರಿಯಲ್ ಸ್ಟೋರಿ ಹೇಳ್ತಿವಿ ಕೇಳಿ.
ಋತುರಾಜ್ ಗಾಯಾಳುವಾಗಿದಕ್ಕೆ ಆರ್ಸಿಬಿಗೆ 30 ಲಕ್ಷ ನಷ್ಟ..!
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರಂತೆ ಅನ್ನೋ ಗಾದೆ ಮಾತು ನಿಮಗೆಲ್ಲಾ ಗೊತ್ತಿರಬೇಕಲ್ವಾ..? ಈಗ ಕ್ರಿಕೆಟ್ನಲ್ಲೂ ಹಾಗೆ ಆಗಿದೆ. ಟೀಂ ಇಂಡಿಯಾ ಓಪನರ್ ಋತುರಾಜ್ ಗಾಯಕ್ವಾಡ್ ಇಂಜುರಿಯಾಗಿದ್ದಾರೆ. ಆದ್ರೆ ಇದರಿಂದ ನಷ್ಟವಾಗಿರೋದು ಆರ್ಸಿಬಿಗೆ. ಅದು ಹೇಗೆ ಅಂತ ಹೇಳೋಕು ಮುನ್ನ ಮಹಾರಾಷ್ಟ್ರ ಬ್ಯಾಟರ್‌ಗೆ ಏನ್ ಆಗಿದೆ ಅನ್ನೋದನ್ನ ಹೇಳ್ತಿವಿ ಕೇಳಿ.
ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಪಾಂಡ್ಯ: ಯಾರಾಗ್ತಾರೆ ಮುಂಬೈ ಇಂಡಿಯನ್ಸ್ ನಾಯಕ..?
ಸೌತ್ ಆಫ್ರಿಕಾ ಸರಣಿಗೆ ಸೆಲೆಕ್ಟ್ ಆಗಿದ್ದ ಋತುರಾಜ್ ಗಾಯಕ್ವಾಡ್, ಟಿ20 ಸರಣಿ ಪೂರ್ತಿ ಆಡಿ, ಮೊದಲೆರಡು ಒನ್ಡೇ ಮ್ಯಾಚ್ಗಳನ್ನೂ ಆಡಿದ್ದರು. ಆದ್ರೆ ಕೈ ಬೆರಳು ಗಾಯಾಳುವಾಗಿ 3ನೇ ಹಾಗೂ ಕೊನೆ ಪಂದ್ಯದಿಂದ ಹೊರಗುಳಿದರು. ಆದ್ರೀಗ ಅವರು ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಹೌದು, ಡಿಸೆಂಬರ್ 26ರಿಂದ ಸೌತ್ ಆಫ್ರಿಕಾ ವಿರುದ್ಧ ಆರಂಭವಾಗುವ ಟೆಸ್ಟ್ ಸಿರೀಸ್ ಆಡ್ತಿಲ್ಲ. ಋತುರಾಜ್ ಬದಲಿಗೆ ಅಭಿಮನ್ಯು ಈಶ್ವರನ್ ಆಯ್ಕೆಯಾಗಿದ್ದಾರೆ.
ಹಾಗೆ ನೋಡಿದ್ರೆ ಋತುರಾಜ್ ಟೆಸ್ಟ್ ಟೀಮ್ನಲ್ಲಿ ರಿಸರ್ವ್ ಓಪನರ್. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈಶ್ವರನ್ ಆಯ್ಕೆಯಾಗಿದ್ದರೂ ಮೀಸಲು ಆರಂಭಿಕನಾಗಿ ತಂಡದಲ್ಲಿ ಇರಬೇಕಾಗುತ್ತೆ ಅಷ್ಟೆ. ಋತುರಾಜ್ ಸೌತ್ ಆಫ್ರಿಕಾದಿಂದ ನೇರ ಬೆಂಗಳೂರಿಗೆ ಬಂದಿದ್ದಾರೆ. ಎನ್‌ಸಿಎನಲ್ಲಿ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಲಿದ್ದು, ಶೀಘ್ರ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ.
ಇವತ್ ನನ್ ಮದ್ವೆ, ಈಗಲೇ ಬಂದು ಬಿಡು, ಧೋನಿ ವಿವಾಹ ಆಮಂತ್ರಣ ಸೀಕ್ರೆಟ್ ಬಹಿರಂಗಪಡಿಸಿದ ರೈನಾ!
ಋತುರಾಜ್ ಅನುಪಸ್ಥಿತಿಯಲ್ಲಿ ಒನ್ಡೇಗೆ ಡೆಬ್ಯು ಮಾಡಿದ ರಜತ್
ಋತುರಾಜ್ ಗಾಯಕ್ವಾಡ್ ಇಂಜುರಿಯಾಗಿದ್ದರಿಂದ ರಜತ್ ಪಾಟಿದರ್, 3ನೇ ಪಂದ್ಯ ಆಡಿದ್ರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಜತ್, 16 ಬಾಲ್ನಲ್ಲಿ 3 ಬೌಂಡ್ರಿ, 1 ಸಿಕ್ಸರ್ ಸಹಿತ 22 ರನ್ ಬಾರಿಸಿ ಔಟಾದ್ರು.
20 ಲಕ್ಷದಿಂದ 50 ಲಕ್ಷಕ್ಕೆ ಏರಿದ ಪಾಟಿದರ್ ಐಪಿಎಲ್ ಸಂಭಾವನೆ..!
ಮಧ್ಯಪ್ರದೇಶದ ಓಪನರ್ ರಜತ್ ಪಾಟಿದರ್, ಐಪಿಎಲ್‌ನಲ್ಲಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಆರ್ಸಿಬಿಗೆ ಬಿಕರಿಯಾಗಿದ್ದರು. ಆದ್ರೀಗ ಅವರು ಇಂಟರ್ ನ್ಯಾಷನಲ್ ಮ್ಯಾಚ್ ಆಡಿರೋದ್ರಿಂದ ಅವರ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಏರಿದೆ. ಹೌದು, ಐಪಿಎಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಮೂಲ ಬೆಲೆ 50 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಅದರಂತೆ 2024ರ ಐಪಿಎಲ್‌ನಲ್ಲಿ ಪಾಟೀದಾರ್‌ಗೆ ಆರ್ಸಿಬಿ 20 ಲಕ್ಷಕ್ಕೆ ಬದಲು 50 ಲಕ್ಷ ಸಂಭಾವನೆ ಕೊಡಬೇಕಿದೆ. ಋತುರಾಜ್ ಇಂಜುರಿಯಾಗಿದ್ದರಿಂದ ಆರ್ಸಿಬಿಗೆ 30 ಲಕ್ಷ ನಷ್ಟ. ರಜತ್‌ಗೆ ಬಂಪರ್.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್