IPL 2022: RCB ವಿಕ್ಟರಿ ಸಾಂಗ್​​ ತಯಾರಾಗಿದ್ದೇಗೆ ಗೊತ್ತಾ..?

Published : Apr 11, 2022, 05:12 PM IST
IPL 2022: RCB ವಿಕ್ಟರಿ ಸಾಂಗ್​​ ತಯಾರಾಗಿದ್ದೇಗೆ ಗೊತ್ತಾ..?

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಆರ್‌ಸಿಬಿ * ಹ್ಯಾಟ್ರಿಕ್‌ ಗೆಲುವು ಸಾಧಿಸಿ ಬೀಗುತ್ತಿದೆ ಫಾಫ್ ಡು ಪ್ಲೆಸಿಸ್ * ರೆಡ್​ ಆರ್ಮಿ ಸಾಂಗ್ ವಿಡಿಯೋ ವೈರಲ್

ಬೆಂಗಳೂರು(ಏ.11): 15ನೇ ಐಪಿಎಲ್​​​ನಲ್ಲಿ (IPL 2022) ಆರ್​ಸಿಬಿ ಸಿಂಹಘರ್ಜನೆ ಹಿಂದೆಂಗಿತ ಜೋರಾಗಿದೆ. ಅದು ಸಮುದ್ರಲ್ಲಿ ಅಪ್ಪಳಿಸುವ  ಚಂಡಮಾರುತದಂತೆ. ಕೆಂಪಂಗಿ ಸೈನ್ಯದ ತೂಫಾನ್​ಗೆ ಸಿಲುಕಿ ಎದುರಾಳಿ ಟೀಮ್ಸ್  ದಿಕ್ಕು ತಪ್ಪಿವೆ. ಮೊದಲ ಪಂದ್ಯ ಸೋತ್ರು, ಬಳಿಕ ಫಿನಿಕ್ಸ್​​ನಂತೆ ​ಪುಟಿದೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಅದ್ರಲ್ಲೂ ರಾಜಸ್ಥಾನ ರಾಯಲ್ಸ್ (Rajasthan Royals) ಮೇಲೆ ನಡೆಸಿದ ಸವಾರಿಯಂತೂ ಕನ್ನಡಿಗರಿಗೆ ಸಖತ್​ ಖುಷಿ ಕೊಟ್ಟಿತ್ತು. ಕಾರಣ ಆರ್​ಸಿಬಿಯ ಟೀಮ್​ ಸಾಂಗ್​. ಹೌದು, ರಾಜಸ್ಥಾನ ಬಗ್ಗುಬಡಿದ ಬಳಿಕ  ಆರ್​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲೂ ಸಂಭ್ರಮ ಮನೆಮಾಡಿತ್ತು. ರೆಡ್​ ಆರ್ಮಿ ಸಾಂಗ್​ ಹೇಳಿ ಖುಷಿ ಪಟ್ಟಿತ್ತು. ಈ ಹಾಡು ಫ್ಯಾನ್ಸ್​​ಗೂ ಸಖತ್ ಇಷ್ಟ ಆಗಿತ್ತು. ಸದ್ಯ ಈ ಸಾಂಗ್​​​ಗ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

ವಿಲ್ಲಿ ಸಾಹಿತ್ಯ, ಡುಪ್ಲೆಸಿ ಕೊರಿಯೋಗ್ರಾಫ್​​​ ಹೇಗಿತ್ತು..? :

ಟೀಂ​ ಮೀಟಿಂಗ್​ ಸಂದರ್ಭದಲ್ಲಿ ಆರ್​ಸಿಬಿಯ ಈ ವಿಕ್ಟರಿ ಸಾಂಗ್​ ತಯಾರಾಗಿತ್ತು. ಕ್ಯಾಪ್ಟನ್​ ಫಾಫ್ ಡು ಪ್ಲೆಸಿಸ್ (Faf du Plessis)​ ನೀಡಿದ ಟಾಸ್ಕ್ ಅನ್ನ ಚಾಲೆಂಜ್ ಆಗಿ ತೆಗೆದುಕೊಂಡ ವೇಗಿ ಡೇವಿಡ್​ ವಿಲ್ಲೆ ಲಿರಿಕ್ಸ್​  ಬರೆದ್ರು. ಇನ್ನು ವಿಲ್ಲಿ ಲಿರಿಕ್ಸ್​ ಬರೆಯುತ್ತಿದ್ದಂತೆ  ಡುಪ್ಲೆಸಿಸ್​​​ ಕೊರಿಯೋಗ್ರಾಫ್​​ ಮಾಡಿಯೇ ಬಿಟ್ರು. ಇದಕ್ಕೆ ಕಿಂಗ್​ ಕೊಹ್ಲಿ, ಮ್ಯಾಕ್ಸಿ ಹಾಗೂ ಡಿಕೆ ಸಾಥ್​ ನೀಡಿದ್ರು.

ಕೊನೆಗೂ ಪ್ರಶಸ್ತಿ ಬರ ನೀಗಿಸುತ್ತಾ ಆರ್‌ಸಿಬಿ...?

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಕಳೆದ 14 ಅವೃತ್ತಿಗಳಿಂದಲೂ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆಯಾದರೂ, ಒಮ್ಮೆಯೂ ಕಪ್‌ ಗೆಲ್ಲಲು ಯಶಸ್ವಿಯಾಗಿಲ್ಲ. 2009, 2011 ಹಾಗೂ 2016ರಲ್ಲಿ ಆರ್‌ಸಿಬಿ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ಕಪ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಆರ್‌ಸಿಬಿ ತಂಡದಲ್ಲಿ ರಾಸ್ ಟೇಲರ್, ಕ್ರಿಸ್ ಗೇಲ್, ಶೇನ್ ವಾಟ್ಸನ್, ಕೆ.ಎಲ್, ರಾಹುಲ್, ಎಬಿ ಡಿವಿಲಿಯರ್ಸ್‌ ಅಷ್ಟೇ ಏಕೆ ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರು ಸಹಾ ಆರ್‌ಸಿಬಿಗೆ ಒಂದು ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ.

ಆದರೆ ಇದೀಗ ಫಾಫ್ ಡು ಪ್ಲೆಸಿಸ್‌ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರ್‌ಸಿಬಿ ತನ್ನ ಪಾಲಿನ ಮೊದಲ ಪಂದ್ಯದಲ್ಲೇ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್‌ ಎದುರು 5 ವಿಕೆಟ್‌ಗಳ ರೋಚಕ ಸೋಲು ಕಂಡಿತ್ತು. ಇದಾದ ಬಳಿಕ ಕೋಲ್ಕತಾ ನೈಟ್ ರೈಡರ್ಸ್‌, ರಾಜಸ್ಥಾನ ರಾಯಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಫಾಫ್ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಆಡಿದ 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ ಒಂದು ಸೋಲಿನೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಆರ್‌ಸಿಬಿ ತಂಡದ ಪರ ಫಾಫ್ ಡು ಪ್ಲೆಸಿಸ್‌, ಅನೂಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್‌ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಕಳೆದ 14 ವರ್ಷಗಳಿಂದ ಕಪ್‌ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ ತಂಡವು ಈ ಬಾರಿಯಾದರೂ ಕಪ್‌ ಗೆಲ್ಲಲು ಸಾಧ್ಯವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!