ಐಪಿಎಲ್‌ಗೆ RCB ಸ್ಟಾರ್‌ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌ ಡೌಟ್?

By Naveen KodaseFirst Published Dec 28, 2022, 2:19 PM IST
Highlights

2023ರ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ
ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಆಘಾತ?
ತಮ್ಮ ಕಾಲಿನ ಗಾಯದ ಬಗ್ಗೆ ತುಟಿಬಿಚ್ಚಿದ ಆರ್‌ಸಿಬಿ ಆಲ್ರೌಂಡರ್‌

ಮೆಲ್ಬರ್ನ್‌(ಡಿ.28): ಪಾರ್ಟಿ ವೇಳೆ ಉಂಟಾದ ಕಾಲಿನ ಗಾಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ದೀರ್ಘ ಸಮಯ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆ ಇದ್ದು, ಮುಂಬರುವ ಐಪಿಎಲ್‌ಗೂ ಅಲಭ್ಯರಾಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಆರ್‌ಸಿಬಿಯ ಪ್ರಮುಖ ಆಟಗಾರನಾಗಿರುವ ಮ್ಯಾಕ್ಸ್‌ವೆಲ್‌ ಟೂರ್ನಿಗೆ ಗೈರಾದರೆ ತಂಡಕ್ಕೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ತಮ್ಮ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ವೇಳೆ ಮ್ಯಾಕ್ಸ್‌ವೆಲ್‌ ಕಾಲಿನ ಮೇಲೆ ಸ್ನೇಹಿತ ಆಕಸ್ಮಿಕವಾಗಿ ಬಿದ್ದಿದ್ದರಿಂದ ಮ್ಯಾಕ್ಸ್‌ವೆಲ್‌ ಗಾಯಗೊಂಡಿದ್ದರು. ಕಾಲು ಮುರಿತಕ್ಕೊಳಗಾಗಿದ್ದು, ಕಾಲನ್ನೇ ಕಳೆದುಕೊಳ್ಳುವ ಸಮಯ ದೂರವಿರಲಿಲ್ಲ ಎಂದು ಸ್ವತಃ ಮ್ಯಾಕ್ಸ್‌ವೆಲ್‌ ಪ್ರತಿಕ್ರಿಯಿಸಿದ್ದರು. ಆದರೆ ಇದೀಗ ಅಲ್ಪ ಚೇತರಿಸಿಕೊಂಡಿದ್ದು, ನಡೆಯಲು ಆರಂಭಿಸಿದ್ದೇನೆ ಎಂದಿದ್ದಾರೆ.

ಏಪ್ರಿಲ್ ಒಂದರಿಂದ ಮೇ 31ರ ವರೆಗೆ 16ನೇ ಐಪಿಎಲ್‌ ಟಿ20?

ನವದೆಹಲಿ: 16ನೇ ಆವೃತ್ತಿಯ ಐಪಿಎಲ್‌ ಟಿ20 ಟೂರ್ನಿ ಏಪ್ರಿಲ್ 1ರಿಂದ ಮೇ 31ರ ವರೆಗೂ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೊದಲು ಎರಡೂವರೆ ತಿಂಗಳು ಅಂದರೆ 74 ದಿನಗಳ ಕಾಲ ಐಪಿಎಲ್‌ ನಡೆಯಲಿದೆ ಎಂದು ಹೇಳಲಾಗಿತ್ತು.

ಆದರೆ ಮಾರ್ಚ್‌ನಲ್ಲಿ ಚೊಚ್ಚಲ ಮಹಿಳಾ ಐಪಿಎಲ್‌ ನಿಗದಿಯಾಗಿದ್ದು, ಬಳಿಕ ಜೂನ್‌ ಮೊದಲ ವಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನಡೆಯಲಿದೆ. ಹೀಗಾಗಿ ಬಿಸಿಸಿಐಗೆ 2 ತಿಂಗಳ ಕಾಲಾವಕಾಶ ಮಾತ್ರ ಸಿಗಲಿದೆ. ಇದರಿಂದಾಗಿ 74 ದಿನಗಳ ಬದಲು 2 ತಿಂಗಳಲ್ಲೇ ಟೂರ್ನಿ ಮುಗಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಈ ಮೊದಲು ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ‘ಐಪಿಎಲ್‌ಗಾಗಿ ಐಸಿಸಿ ಎರಡೂವರೆ ತಿಂಗಳ ಕಾಲಾವಕಾಶ ನೀಡಲಿದೆ’ ಎಂದು ಹೇಳಿದ್ದರು.

ಮಾ.3ರಿಂದ ಚೊಚ್ಚಲ ಮಹಿಳಾ ಐಪಿಎಲ್‌?

ಮುಂಬೈ: ಚೊಚ್ಚಲ ಮಹಿಳಾ ಐಪಿಎಲ್‌ ನಡೆಸಲು ಸಿದ್ಧತೆ ಆರಂಭಿಸಿರುವ ಬಿಸಿಸಿಐ ಪಂದ್ಯಾವಳಿಯನ್ನು ಮಾ.3ರಿಂದ 26ರ ವರೆಗೂ ನಡೆಸಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಟೂರ್ನಿಯಲ್ಲಿ 5 ತಂಡಗಳು ಸ್ಪರ್ಧಿಸಲಿವೆ. ಮಹಿಳಾ ಐಪಿಎಲ್‌ನಿಂದಾಗಿ ಪುರುಷರ ಐಪಿಎಲ್‌ 1 ವಾರ ತಡವಾಗಿ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ ಏ.1ರಿಂದ 16ನೇ ಆವೃತ್ತಿ ಆರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಆರ್‌ಸಿಬಿ ಸೇರಿದ ಮನೋಜ್‌: ಬೈಕ್‌ ರ‍್ಯಾಲಿ ನಡೆಸಿ ಸಂಭ್ರಮ

ಸಿಂಧನೂರು: ಉದಯೋನ್ಮುಖ ಕ್ರಿಕೆಟಿಗ, ರಾಯಚೂರಿನ ಮನೋಜ್‌ ಭಾಂಡ್ಗೆ ಐಪಿಎಲ್‌ ಮಿನಿ ಹರಾಜಿನಲ್ಲಿ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದು, ಶನಿವಾರ ಸಿಂಧನೂರಿನಲ್ಲಿ ಅವರ ಸ್ನೇಹಿತರು, ಕ್ರಿಕೆಟಿಗರು ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿ ಗಾಂಧಿ ವೃತ್ತದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಾಚರಣೆ ನಡೆಸಿದರು. 

ನನಗೆ ಆಘಾತ ಹಾಗೂ ಆಶ್ಚರ್ಯವಾಯ್ತು: ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್ ಆದ ವೇಗಿಯ ಮನದಾಳದ ಮಾತು..!

ಮಿನಿ ಹರಾಜಿನಲ್ಲಿ ಅವರನ್ನು ಮೂಲ ಬೆಲೆ 20 ಲಕ್ಷ ರುಪಾಯಿಗೆ ಆರ್‌ಸಿಬಿ ತಂಡ ಖರೀದಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಮನೋಜ್‌ ತಂದೆ ಶಿವರಾಮ, ‘ಹಿರಿಯರಾದ ರಾಜಶೇಖರ ಪಾಟೀಲ್‌, ಪ್ರಭುರಾಜ್‌, ಚಂದ್ರಶೇಖರ ಮೈಲಾರ ಸೇರಿದಂತೆ ಅನೇಕ ಆಟಗಾರರ ಆಶೀರ್ವಾದದಿಂದ ಮನೋಜ್‌ ಆರ್‌ಸಿಬಿಗೆ ಆಯ್ಕೆಯಾಗಿದ್ದಾನೆ. ಆತನ ಸಾಧನೆ ಇಡೀ ಕುಟುಂಬಕ್ಕೆ ಸಂತಸ ತಂದಿದೆ. ಕ್ರಿಕೆಟ್‌ ರಂಗದಲ್ಲಿ ಇನ್ನಷ್ಟುಎತ್ತರಕ್ಕೆ ಬೆಳೆಯಲಿ ಎಂಬುದು ಎಲ್ಲರ ಹಾರೈಕೆ’ ಎಂದರು.

click me!