ಐಪಿಎಲ್ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಸಾಹಸಿಕ ಇನ್ನಿಂಗ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದರೊಂದಿಗೆ ಅವರ ಪತ್ನಿ ರಿವಾಬಾ ಜಡೇಜಾ ಕಣ್ಣೀರಿಟ್ಟಿದ್ದು ಹಾಗೂ ಪತಿ ಜಡೇಜಾರನ್ನು ಅಭಿನಂದಿಸಿದ ವಿಡಿಯೋ ಕೂಡ ವೈರಲ್ ಆಗಿವೆ.
ಬೆಂಗಳೂರು (ಮೇ.30): ಚೆನ್ನೈ ಸೂಪರ್ ಕಿಂಗ್ಸ್, ಎಂಎಸ್ ಧೋನಿ, ರವೀಂದ್ರ ಜಡೇಜಾರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇನ್ನೊಬ್ಬರೆಂದರೆ ಅದು ಜಡೇಜಾ ಪತ್ನಿ ರಿವಾಬಾ ಜಡೇಜಾ. ಗುಜರಾತ್‌ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ರಿವಾಬಾ ಜಡೇಜಾ ಪಂದ್ಯ ಗೆದ್ದ ಬಳಿಕ ತೀರಾ ಭಾವುಕರಾಗಿದ್ದರು. ಹಸಿರು ಬಣ್ಣದ ಸೀರೆಯುಟ್ಟು ಸ್ಟೇಡಿಯಂಗೆ ಬಂದಿದ್ದ ರಿವಾಬಾ ಜಡೇಜಾ ಪಂದ್ಯ ಎಲ್ಲಾ ಮುಗಿದ ಬಳಿಕ ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ರವೀಂದ್ರ ಜಡೇಜಾ ಅವರ ಕಾಲಿಗೆ ಬಿದ್ದು ಅಶೀರ್ವಾದ ಪಡೆದುಕೊಂಡ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಒಬ್ಬರು ಶೇರ್ ಮಾಡಿಕೊಂಡಿದ್ದರು. ರಜಪೂತರಾಗಿರುವ ರಿವಾಬಾ ಜಡೇಜಾ ಶಾಸಕಿಯಾಗಿದ್ದರೂ, ಅಷ್ಟು ಜನರ ಸಮ್ಮುಖದಲ್ಲಿ ಪತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವ ಮೂಲಕ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ಆಕೆ ಆತನ ಪತ್ನಿ, ಕೆಲಸದವಳಲ್ಲ ಎಂದು ಟೀಕಿಸಿದ್ದಾರೆ.
ಆಗಿದ್ದೇನು: ಪಂದ್ಯ ಮುಗಿದ ಬಳಿಕ ರವೀಂದ್ರ ಜಡೇಜಾ, ಪತ್ನಿ ರಿವಾಬಾ ಜಡೇಜಾ ಅವರತ್ತ ಆಗಮಿಸುತ್ತಾರೆ. ತಬ್ಬಿಕೊಳ್ಳಲು ಎರಡೂ ಕೈಗಳನ್ನು ಮುಂದೆ ಮಾಡಿದಾಗ, ಅವರ ಸಮೀಪ ಬರುವ ರಿವಾಬಾ ಜಡೇಜಾ ನೇರವಾಗಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಆ ಬಳಿಕ ಅವರಿಬ್ಬರೂ ತಬ್ಬಿಕೊಳ್ಳುತ್ತಾರೆ. ಇವಿಷ್ಟು ವಿಡಿಯೋದಲ್ಲಿ ದಾಖಲಾಗಿದೆ. ಇದು ನಮ್ಮ ಸಂಸ್ಕೃತಿ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವರು, 'ಏನಿದು ಸಂಸ್ಕೃತಿ. ಇದು ಶೋ ಆಫ್ ಮಾಡುವ ಸರ್ಕಸ್ ಅಷ್ಟೇ' ಎಂದು ಬರೆದಿದ್ದಾರೆ. 'ಈ ಮೂರ್ಖರಿಗೆ ಪುರುಷ ಪಿತೃಪ್ರಧಾನ ಸಂಸ್ಕೃತಿ. ನಾವು "ಬೇಟಿ ಬಚಾವೋ ಬೇಟಿ ಪಢಾವೋ" ದಂತಹ ಅಭಿಯಾನಗಳನ್ನು ಹೊಂದಲು ಕಾರಣ ಇಂಥವರು ಮಹಿಳೆಯರನ್ನು ಕೆಳವರ್ಗದ ನಾಗರಿಕರು ಮತ್ತು ಪುರುಷರನ್ನು ದೇವರು ಎಂದು ಪರಿಗಣಿಸದು' ಎಂದು ಬರೆದಿದ್ದಾರೆ.
'ರಾಜಕಾರಣ ವ್ಯಕ್ತಿಯನ್ನು ಹೇಗೆ ಬದಲಾಯಿಸುತ್ತದೆ ಅನ್ನೋದನ್ನ ಇಲ್ಲಿ ನೋಡಬಹುದು' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. 'ಅದ್ಭುತ. ಜಡೇಜಾಗೆ ಎಂಥಾ ಪ್ರೀತಿಯ ಪತ್ನಿ ಸಿಕ್ಕಿದ್ದಾರೆ. ನಮ್ಮ ಸಂಸ್ಕೃತಿ ನಮ್ಮ ಸಂಸ್ಕಾರ' ಎಂದು ರಿವಾಬಾ ಪರವಾಗಿ ಟ್ವೀಟ್ ಮಾಡಿದ್ದಾರೆ. ಬುಹುಶಃ ಈ ವಿಡಿಯೋ ನೋಡಿ ಫೆಮಿನಿಸ್ಟ್‌ಗಳು ಅಳುತ್ತಿರಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ.
WOW! OUR CULTURE 👌🏻♥️
pic.twitter.com/3f4RpCzzb8
ಸೋಶಿಯಲ್ ಮೀಡಿಯಾ 'ಕ್ರೋಮಿಂಗ್' ಟ್ರೆಂಡ್‌ಗೆ ಬಲಿಯಾದ 13 ವರ್ಷದ ಬಾಲಕಿ
ರಿವಾಬಾ ಕಾಲಿಗೆ ಬಿದ್ದು ಅಶೀರ್ವಾದ ಪಡೆದುಕೊಂಡಿದ್ದನ್ನು ಸಂಸ್ಕಾರ ಎನ್ನುತ್ತೀರಿ. ಹಾಗಾದರೆ, ರವೀಂದ್ರ ಜಡೇಜಾ, ರಿವಾಬಾರ ಕಾಲಿಗೆ ಬಿದ್ದು ಯಾಕೆ ಆಶೀರ್ವಾದ ಪಡೆದುಕೊಂಡಿಲ್ಲ. ಬರೀ ಪತ್ನಿಯೇ ಪತಿಯ ಕಾಲಿಗೆ ಬಿದ್ದು ನಮಸ್ಕರಿಸಬೇಕು ಅನ್ನೋದು ಎಂಥಾ ಸಂಸ್ಕೃತಿ' ಎಂದು ಇನ್ನೊಬ್ಬರು ಪ್ರಶ್ನೆ ಮಾಡಿ ಕಾಮೆಂಟ್ ಮಾಡಿದ್ದಾರೆ.
'ಮಹಿ ಬಾಯ್, ನಿಮಗಾಗಿ ಏನು ಬೇಕಾದರೂ ಮಾಡ್ತೇನೆ': ಕಪ್ ಗೆಲ್ಲಿಸಿದ ಜಡ್ಡು ಟ್ವೀಟ್ ವೈರಲ್..!
ಮೊಹಮದ್ ಸಲೀಂ ಎನ್ನುವ ವ್ಯಕ್ತಿ ಈ ವಿಚಾರವನ್ನೂ ಹಿಜಾಬ್‌ಗೂ ಲಿಂಕ್ ಮಾಡಿದ್ದಾರೆ. 'ಈ ಜನಗಳಿಗೆ ಹಿಜಾಬ್ ವಿರುದ್ಧ ಮಾತ್ರವೇ ಸಮಸ್ಯೆ ಇರುವುದಾಗಿ ಕಾಣುತ್ತದೆ. ಮೂಲ ವಿಚಾರವೇನೆಂದರೆ, ಹಿಜಾಬ್ ಎಂದಿಗೂ ಸಮಸ್ಯೆಯಲ್ಲ. ಮುಸ್ಲಿಮರ ಮೇಲಿನ ದ್ವೇಷವೇ ಎಲ್ಲದಕ್ಕೂ ಕಾರಣ' ಎಂದು ಕಾಮೆಂಟ್ ಮಾಡಿದ್ದಾರೆ.. 'ರಿವಾಬಾ ನಿಜವಾಗಿಯೂ ಸಶಕ್ತ ರಜಪೂತನಿ. ಆಕೆ ಮೆಕ್ಯಾನಿಕಲ್ ಇಂಜಿನಿಯರ್. ಆಕೆ ಕರ್ಣಿ ಸೇನಾ ನಾಯಕಿ ಅವರು ಶಾಸಕಿ ಮತ್ತು ಗುಜರಾತ್ ಬಿಜೆಪಿಯ ಅತ್ಯಂತ ಪ್ರಸಿದ್ಧ ಮುಖ. ಅವರು ಹೆಮ್ಮೆಯ ರಾಜಮನೆತನದವರು ಮತ್ತು ಅವರು ನಿಜವಾಗಿಯೂ ಸಂಪ್ರದಾಯವನ್ನು ಇಲ್ಲಿ ಪ್ರದರ್ಶನ ಮಾಡಿದ್ದಾರೆ' ಎಂದು ರಿವಾಬಾ ಪರವಾಗಿ ಟ್ವೀಟ್ ಮಾಡಿದ್ದಾರೆ.