Asia Cup: ಏಷ್ಯಾಕಪ್‌ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಅಕ್ಸರ್‌ ಪಟೇಲ್‌ಗೆ ಬುಲಾವ್‌!

By Santosh Naik  |  First Published Sep 2, 2022, 5:49 PM IST

ಮೊಣಕಾಲು ಗಾಯದ ಕಾರಣದಿಂದಾಗಿ ರವೀಂದ್ರ ಜಡೇಜಾ ಏಷ್ಯಾಕಪ್‌ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಅಕ್ಸರ್‌ ಪಟೇಲ್‌ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.


ದುಬೈ (ಸೆ.2): ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸೂಪರ್‌-4 ಹಂತಕ್ಕೇರಿರುವ ಭಾರತ ತಂಡಕ್ಕೆ ಆಘಾತ ಕಾಡಿದೆ.  ಮೊಣಕಾಲು ಗಾಯಕ್ಕೆ ತುತ್ತಾಗಿರುವ ತಂಡದ ಅಗ್ರ ಆಲ್ರೌಂಡರ್‌ ರವೀಂದ್ರ ಜಡೇಜಾ ಏಷ್ಯಾಕಪ್‌ ಕಪ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಹಾಗೂ ಮೀಸಲು ತಂಡದಲ್ಲಿದ್ದ ಅಕ್ಸರ್‌ ಪಟೇಲ್‌ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ರವೀಂದ್ರ ಜಡೇಜಾ ಅವರ ಗಾಯ ಎಷ್ಟು ಪ್ರಮಾಣದಲ್ಲಿ ಗಂಭೀರ ಎನ್ನುವುದನ್ನು ಬಿಸಿಸಿಯ ಮಾಹಿತಿ ನೀಡಿಲ್ಲ. ಇದರ ಬೆನ್ನಲ್ಲಿಯೇ ಮುಂಬರುವ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರವೀಂದ್ರ ಜಡೇಜಾ ಅವರಿಗೆ ಮೊಣಕಾಲು ಗಾಯ ಸಮಸ್ಯೆ ನೀಡುತ್ತಿರುವುದು ಇದೇ ಮೊದಲಲೇನಲ್ಲ. ಜುಲೈನಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸ ಮಾಡಿದ್ದ ಸಮಯದಲಲ್ಲೂ ರವೀಂದ್ರ ಜಡೇಜಾ ಅವರಿಗೆ ಮೊಣಕಾಲು ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಪ್ರಸ್ತುತ ಬಿಸಿಸಿಐ ಪ್ರಕಟಣೆಯಲ್ಲಿ ರವೀಂದ್ರ ಜಡೇಜಾ ಗಾಯಗೊಂಡಿರುವ ಬಗ್ಗೆ ಮಾತ್ರವೇ ಮಾಹಿತಿ ನೀಡಿದ್ದು, ಅವರ ಗಾಯ ಎಷ್ಟು ಪ್ರಮಾಣದಲ್ಲಿ ಗಂಭೀರ ಹಾಗೂ ಗುಣಮುಖರಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವ ಮಾಹಿತಿಯನ್ನು ನೀಡಿಲ್ಲ.

ರವೀಂದ್ರ ಜಡೇಜಾ ಆದಷ್ಟು ಬೇಗ ಚೇತರಿಕೆಯಾಗಲಿದ್ದಾರೆ ಎನ್ನುವ ವಿಶ್ವಾಸದಲ್ಲಿ ಟೀಮ್‌ ಇಂಡಿಯಾವಿದೆ. ಅದಕ್ಕದೆ ಕಾರಣ, ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ (T20 World Cup) ಇನ್ನು ಕೇವಲ ಎರಡೇ ತಿಂಗಳಿವೆ. ಅದಕ್ಕೂ ಮುನ್ನ ಭಾರತ ತಂಡ ಏಷ್ಯಾಕಪ್‌ ಮಾತ್ರವಲ್ಲದೆ, ಆಸ್ಟ್ರೇಲಿಯಾ (Australia) ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ದಿಪಕ್ಷೀಯ ತವರಿನ ಸರಣಿಯನ್ನೂ ಭಾರತ ಆಡಲಿದೆ. 

Tap to resize

Latest Videos

ಏಷ್ಯಾಕಪ್‌ನಲ್ಲಿ (Asia Cup) ಭಾರತ (Team India) ಆಡಿದ ಎರಡೂ ಪಂದ್ಯಗಳಲ್ಲಿ ಜಡೇಜಾ (Ravindra Jadeja) ಪ್ರಮುಖ ಉತ್ತಮವಾಗಿ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ಎರಡು ಓವರ್‌ಗಳಲ್ಲಿ ನಿಯಂತ್ರಿತ ದಾಳಿ ನಡೆಸಿದ್ದ ರವೀಂದ್ರ ಜಡೇಜಾ ಪಾಕಿಸ್ತಾನದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ್ದರು. ಅದಲ್ಲದೆ, ಬ್ಯಾಟಿಂಗ್‌ನಲ್ಲೂ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯುವ ಮೂಲಕ ಉತ್ತಮ ನಿರ್ವಹಣೆ ತೋರಿದ್ದರು. ಅದಲ್ಲದೆ, ಭಾರತದ ಅಗ್ರ 7 ಬ್ಯಾಟಿಂಗ್‌ ಕ್ರಮಾಂಕದಲ್ಲಿದ್ದ ಏಕೈಕ  ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದರು. 29 ಎಸೆತಗಳಲ್ಲಿ 35 ರನ್‌ ಸಿಡಿಸುವ ಮೂಲಕ ಪಾಕಿಸ್ತಾನವನ್ನು ಬೆಂಡೆತ್ತಿದ್ದರು. ಇದರಿಂದಾಗಿ ಪಾಕಿಸ್ತಾನ ತಂಡ ತನ್ನ ಎಡಗೈ ಸ್ಪಿನ್ನರ್‌ ಮೊಹಮದ್‌ ನವಾಜ್‌ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇನ್ನು ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ಅಗ್ರ ಸ್ಕೋರರ್‌ ಆಗಿದ್ದ ಬಾಬರ್‌ ಹಯಾಟ್‌ರ ವಿಕೆಟ್‌ಅನ್ನು ಜಡೇಜಾ ಉರುಳಿಸಿದ್ದರು. ಅಲ್ಲದೆ, ತಮ್ಮ 4 ಓವರ್‌ಗಳ ದಾಳಿಯಲ್ಲಿ ಕೇವಲ 15 ರನ್‌ ನೀಡಿದ್ದರು. 

ಕಿಂಗ್‌ ಕೊಹ್ಲಿಗೆ ಹಾಂಕಾಂಗ್‌ ತಂಡದ ಸ್ಪೆಷಲ್‌ ಗಿಫ್ಟ್‌ 'ಒಂದು ಯುಗದ ಕ್ರಿಕೆಟಿಗರ ಸ್ಫೂರ್ತಿ ನೀವು' ಎಂದ ಟೀಮ್‌

ಅಕ್ಸರ್‌ ಪಟೇಲ್‌ (axar patel) ಕೂಡ ಬಹುತೇಕ ರವೀಂದ್ರ ಜಡೇಜಾ ಶೈಲಿಯ ಆಟಗಾರರಾ ಆಗಿದ್ದಾರೆ. ಎಡಗೈ ಬ್ಯಾಟ್ಸ್‌ ಮನ್‌ ಆಗಿರುವ ಅಕ್ಸರ್‌ ಪಟೇಲ್‌, ಎಡಗೈ ಸ್ಪಿನ್‌ ಬೌಲರ್‌ ಕೂಡ ಆಗಿದ್ದಾರೆ. ಹಲವಾರು ಸಂದರ್ಭಗಳಲ್ಲಿ ರವೀಂದ್ರ ಜಡೇಜಾ ಅವರಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ. ಜಡೇಜಾ ಟೀಮ್‌ ಇಂಡಿಯಾದ ಪ್ರಮುಖ ಆಟಗಾರನಾಗಿದ್ದು, ಸೂಪರ್‌-4 ಹಂತ ಹಾಗೂ ಏಷ್ಯಾಕಪ್‌ನ ಮುಂದಿನ ಪಂದ್ಯಗಳಲ್ಲಿ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಸರ್‌ ಪಟೇಲ್‌ ಮೇಲೆ ಮಹತ್ವದ ಜವಾಬ್ದಾರಿ ಇರಲಿದೆ.

Ind vs Pak ಬಾಬರ್ ಅಜಂ ಮಾಡಿದ ಒಂದು ತಪ್ಪನ್ನು ಗುರುತಿಸಿದ ಪಾಕ್ ಮಾಜಿ ಕ್ರಿಕೆಟ್..!

ಹಾರ್ದಿಕ್‌ ಪಟೇಲ್‌ರಿಂದ ಮಾತ್ರ ಅಭ್ಯಾಸ: ಹಾಂಕಾಂಗ್‌ ವಿರುದ್ಧದ ಪಂದ್ಯದ ಬಳಿಕ ಟೀಮ್‌ ಇಂಡಿಯಾದ ಆಟಗಾರರ ಪೈಕಿ ಹಾರ್ದಿಕ್‌ ಪಾಂಡ್ಯ ಒಬ್ಬರೇ ಗುರುವಾರ ಅಭ್ಯಾಸ ನಡೆಸಿದರು. ಐಸಿಸಿ ಅಕಾಡೆಮಿ ಮೈದಾನದಲ್ಲಿ ಹಾರ್ದಿಕ್‌ ಅಭ್ಯಾಸ ನಡೆಸಿದರೆ, ತಂಡದ ಉಳಿದ ಎಲ್ಲಾ ಆಟಗಾರರು ವಿಶ್ರಾಂತಿ ಪಡೆದರು. ಹಾರ್ದಿಕ್‌ ಪಾಂಡ್ಯಗೆ ಟ್ರೇನರ್‌ ಸೋಹಮ್‌ ದೇಸಾಯಿ ಹಾಗೂ ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರೆ ಸಾಥ್‌ ನೀಡಿದರು.

click me!