
ದುಬೈ(ಸೆ.01): ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತ ಪ್ರವೇಶಕ್ಕಾಗಿ ಹೋರಾಟ ತೀವ್ರಗೊಂಡಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಈ ಮೂಲಕ 7 ವಿಕೆಟ್ ನಷ್ಟಕ್ಕೆ193 ರನ್ ಸಿಡಿಸಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಆರಂಭದಲ್ಲೇ ಸಬ್ಬೀರ್ ರೆಹಮಾನ ವಿಕೆಟ್ ಕಳೆದುಕೊಂಡಿತು. ರೆಹಮಾನ್ 5 ರನ್ ಸಿಡಿಸಿ ಔಟಾದರು ಆದರೆ ಮೆಹದಿ ಹಸನ್ ಮಿರಾಜ್ ಹಾಗೂ ನಾಯಕ ಶಕೀಬ್ ಅಲ್ ಹಸನ್ ಜೊತೆಯಾಟದಿಂದ ಬಾಂಗ್ಲಾದೇಶ ಚೇತರಿಸಿಕೊಂಡಿತು. ಶಕೀಬ್ 22 ಎಸೆತದಲ್ಲಿ 24 ರನ್ ಸಿಡಿಸಿ ಔಟಾದರು. ಆದರೆ ಮೆಹದಿ ಹಸನ್ ಮಿರಾಜ್ ಹೋರಾಟ ಮುಂದುವರಿಸಿದರು. ಇತ್ತ ಮುಷ್ಫೀಕರ್ ರಹೀಮ್ 4 ರನ್ ಸಿಡಿಸಿ ನಿರ್ಗಮಿಸಿದರು. ಆಸಿಫ್ ಹೂಸೈನ್ ಹಾಗೂ ಮೆಹದಿ ಹಸನ್ ಮಿರಾಜ್ ಬಾಂಗ್ಲಾದೇಶಕ್ಕೆ ಆಸೆರೆಯಾದರು. ಮೆಹದಿ ಹಸನ್ ಮಿರಾಜ್ 26 ಎಸೆತದಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 38 ರನ್ ಸಿಡಿಸಿ ಔಟಾದರು.
ಆಸೀಫ್ ಹುಸೈನ್ ಹಾಗೂ ಮಹಮ್ಮುದುಲ್ಲಾ ಹೋರಾಟದಿಂದ ಬಾಂಗ್ಲಾದೇಶ(Bangladesh vs Sri Lanka) ಸ್ಪಾರ್ಧಾತ್ಮಕ ಮೊತ್ತದತ್ತ ದಾಪುಗಾಲಿಟ್ಟಿತು. 22 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 39 ರನ್ ಸಿಡಿಸಿ ಔಟಾದರು. ಇತ್ತ ಮೊಹಮ್ಮದುಲ್ಲಾ 22 ಎಸೆತದಲ್ಲಿ 27 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಮೊಸೆದೆಕ್ ಹುಸೈನ್ ಹೋರಾಟ(SL vs BAN) ಮುಂದುವರಿಸಿದರು ಇತ್ತ ಮೆಹೆದಿ ಹಸನ್ 1 ರನ್ ಸಿಡಿಸಿ ಔಟಾದರು.
ಕಿಂಗ್ ಕೊಹ್ಲಿಗೆ ಹಾಂಕಾಂಗ್ ತಂಡದ ಸ್ಪೆಷಲ್ ಗಿಫ್ಟ್ 'ಒಂದು ಯುಗದ ಕ್ರಿಕೆಟಿಗರ ಸ್ಫೂರ್ತಿ ನೀವು' ಎಂದ ಟೀಮ್
ಮೊಸಾದೆಕ್ ಹುಸೈನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು 9 ಎಸೆತದಲ್ಲಿ ಅಜೇಯ 24 ರನ್ ಸಿಡಿಸಿದರು. ತಸ್ಕಿನ್ ಅಹಮ್ಮದ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿತು. ಇದೀಗ ಶ್ರೀಲಂಕಾ ಗೆಲುವಿಗೆ 184 ರನ್ ಸಿಡಿಸಬೇಕಿದೆ. ಬೃಹತ್ ಮೊತ್ತ ಶ್ರೀಲಂಕಾಗೆ(Asia Cup 2022) ಸವಾಲಾಗಿ ಪರಿಣಮಿಸಲಿದೆ.
ಆಫ್ಘಾನ್ ವಿರುದ್ಧ ಹಿನ್ನಡೆ
ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ(Asia Cup T20 Cricket) ತಮ್ಮ ಮೊದಲ ಪಂದ್ಯವನ್ನು ಆಫ್ಘಾನಿಸ್ತಾನ ವಿರುದ್ಧ ಆಡಿತ್ತು. ಅತ್ಯುತ್ತಮ ಪ್ರದರ್ಶನ ನೀಡಿದ ಆಫ್ಘಾನಿಸ್ತಾನ ಭರ್ಜರಿ ಗೆಲುವು ದಾಖಲಿಸಿತ್ತು. ಇಷ್ಟೇ ಅಲ್ಲ ಆಫ್ಘಾನಿಸ್ತಾನ(Afghanistan) ಈಗಾಗಲೇ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಫ್ಘಾನಿಸ್ತಾನ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು.
Asia Cup ಹಾಂಕಾಂಗ್ ವಿರುದ್ದ ಭಾರತಕ್ಕೆ 40 ರನ್ ಗೆಲುವು, ಸೂಪರ್ 4 ಹಂತಕ್ಕೆ ಲಗ್ಗೆ!
ಬಿಗುಂಪಿನ ಅಂಕಪಟ್ಟಿಲ್ಲಿ ಆಫ್ಘಾನಿಸ್ತಾನ 2 ಪಂದ್ಯಗಳನ್ನು ಗೆದ್ದು 4 ಅಂಕ ಸಂಪಾದಿಸಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ. ಏಷ್ಯಾಕಪ್ ಸೂಪರ್ ಹಂತಕ್ಕೆ ಎ ಗುಂಪಿನಿಂದ ಭಾರತ ಲಗ್ಗೆ ಇಟ್ಟಿದ್ದರೆ, ಬಿ ಗುಂಪಿನಿಂದ ಆಫ್ಘಾನಿಸ್ತಾನ ಎಂಟ್ರಿಕೊಟ್ಟಿದೆ. ಉತ್ತಮ ನೆಟ್ ರೇಟ್ ಇರುವ ಆಫ್ಘಾನಿಸ್ತಾನ ಸೂಪರ್ 4 ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಟೀಂ ಇಂಡಿಯಾ 2ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.