ಏಕದಿನ ವಿಶ್ವ​ಕಪ್‌ ಬಹಿ​ಷ್ಕರಿ​ಸಲು ಪಾಕ್‌​ಗೆ ಅಸಾ​ಧ್ಯ: ರವಿಚಂದ್ರನ್‌ ಅಶ್ವಿನ್‌

By Kannadaprabha NewsFirst Published Feb 8, 2023, 11:41 AM IST
Highlights

* ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
* ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಹಿಷ್ಕರಿಸಲು ಪಾಕ್ ನಿರ್ಧಾರ
* ಪಾಕ್‌ನಿಂದ ಈ ನಿರ್ಧಾರ ಕೈಗೊಳ್ಳಲು ಅಸಾಧ್ಯವೆಂದ ರವಿಚಂದ್ರನ್ ಅಶ್ವಿನ್

ನವ​ದೆ​ಹ​ಲಿ(ಫೆ.08): ಏಷ್ಯಾ​ಕ​ಪ್‌ಗೆ ಭಾರತ ತಂಡ ಪಾಕಿ​ಸ್ತಾ​ನಕ್ಕೆ ಬಾರದಿ​ದ್ದ​ರೆ ಪಾಕಿಸ್ತಾನ ತಂಡ ಏಕ​ದಿನ ವಿಶ್ವ​ಕ​ಪ್‌ ​ಅನ್ನು ಬಹಿ​ಷ್ಕ​ರಿ​ಸ​ಲಿದೆ ಎಂಬ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ಬೆದ​ರಿ​ಕೆಗೆ ಆರ್‌.​ಅ​ಶ್ವಿನ್‌ ವ್ಯಂಗ್ಯ​ವಾ​ಡಿದ್ದು, ವಿಶ್ವ​ಕಪ್‌ ಬಹಿ​ಷ್ಕ​ರಿ​ಸಲು ಪಾಕಿ​ಸ್ತಾ​ನಕ್ಕೆ ಸಾಧ್ಯ​ವಿಲ್ಲ ಎಂದಿ​ದ್ದಾರೆ. ಅಲ್ಲದೇ ಏಷ್ಯಾ​ಕಪ್‌ ಯುಎಇ ಬದಲು ಶ್ರೀಲಂಕಾ​ದಲ್ಲಿ ನಡೆ​ದರೆ ಉತ್ತಮ ಎಂದು ಅವರು ಅಭಿಪ್ರಾಯಿಸಿದ್ದಾರೆ. 

‘ಭಾ​ರತ ಎಲ್ಲಿ​ಗಾ​ದರೂ ಹೋಗಲ್ಲ ಎಂದರೆ ಅವರೂ ಭಾರ​ತಕ್ಕೆ ಬರಲ್ಲ ಎನ್ನು​ವುದು ಸಾಮಾನ್ಯ. ಅದೇ ರೀತಿ ಪಾಕ್‌ ಕೂಡಾ ಹೇಳಿದೆ. ಆದರೆ ಅದು ಸಾಧ್ಯವಿಲ್ಲ. ಏಷ್ಯಾ​ಕ​ಪ್‌​ನಲ್ಲಿ ಆಡಲ್ಲ ಎಂದು ಭಾರತ ಈಗಾ​ಗಲೇ ಘೋಷಿ​ಸಿದೆ. ಭಾರತ ಆಡ​ಬೇ​ಕಿ​ದ್ದರೆ ಏಷ್ಯಾ​ಕಪನ್ನು ದುಬೈ ಅಥವಾ ಬೇರೆ ಕಡೆ ನಡೆ​ಸಲಿ’ ಎಂದಿ​ದ್ದಾರೆ.

2023ರ ಏಷ್ಯಾಕಪ್ ಟೂರ್ನಿಯ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡಮಟ್ಟದ ಚರ್ಚೆ ಚಾಲ್ತಿಯಲ್ಲಿದೆ. 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯವನ್ನು ವಹಿಸಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆದರೇ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯಲಿದೆ. ಇದರ ಬದಲು, ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ನಡೆದರೆ ಮಾತ್ರ, ಟೀಂ ಇಂಡಿಯಾ ಆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ಬಿಸಿಸಿಐ ಖಚಿತ ನಿಲುವನ್ನು ಪ್ರಕಟಿಸಿದೆ.

ಜೂನಿಯರ್ ಅಶ್ವಿನ್‌ ಬಳಿ ಆಸೀಸ್‌ ಅಭ್ಯಾಸದ ಬಗ್ಗೆ ಮಾಹಿತಿ ಪಡೆದ ಆರ್‌.ಅಶ್ವಿನ್‌!

ನಾಗ್ಪು​ರ: ಭಾರತ ವಿರುದ್ಧದ ಸರಣಿಗೆ ಆಸ್ಪ್ರೇಲಿಯಾ ಆಟಗಾರರು ಹೇಗೆ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಆಸೀಸ್‌ ತಂಡಕ್ಕೆ ನೆರವು ನೀಡುತ್ತಿರುವ ಬರೋಡಾದ ಸ್ಪಿನ್ನರ್‌, ‘ಜೂನಿಯರ್‌ ಅಶ್ವಿನ್‌’ ಎಂದೇ ಖ್ಯಾತಿ ಪಡೆದಿರುವ ಮಹೇಶ್‌ ಪಥಿನಾ ಬಳಿ ಭಾರತದ ಅಗ್ರ ಸ್ಪಿನ್ನರ್‌ ಆರ್‌.ಅಶ್ವಿನ್‌ ಮಾಹಿತಿ ಪಡೆದಿದ್ದಾರೆ. 

'ಭಾರತ ನರಕಕ್ಕೆ ಹೋಗಲಿ' ಎಂದ ಜಾವೇದ್ ಮಿಯಾಂದಾದ್‌ ಸೊಕ್ಕಡಗಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್..!

ಮಂಗಳವಾರ ನೆಟ್ಸ್‌ ಅಭ್ಯಾಸದ ವೇಳೆ ಮಹೇಶ್‌ ಜೊತೆ ದೀರ್ಘಕಾಲ ಮಾತುಕತೆ ನಡೆಸಿದ ಅಶ್ವಿನ್‌, ಅಗತ್ಯ ಮಾಹಿತಿ ಕಲೆಹಾಕಿದರು. ಇದೇ ವೇಳೆ ನೆಟ್ಸ್‌​ನಲ್ಲಿ ಸ್ಟೀವ್‌ ಸ್ಮಿತ್‌​ರನ್ನು ಕನಿಷ್ಠ 6 ಬಾರಿ ಔಟ್‌ ಮಾಡಿ​ದ್ದಾಗಿ ಅಶ್ವಿನ್‌ಗೆ ಮಹೇಶ್‌ ಹೇಳಿದರು.

ಅಂತಾರಾಷ್ಟ್ರೀಯ ಕ್ರಿಕೆ​ಟ್‌ಗೆ ಆ್ಯರೋನ್‌ ಫಿಂಚ್‌ ಗುಡ್‌​ಬೈ

ಮೆಲ್ಬ​ರ್ನ್‌: ಆಸ್ಪ್ರೇ​ಲಿಯಾದ ತಾರಾ ಬ್ಯಾಟ​ರ್‌​, ಟಿ20 ವಿಶ್ವಕಪ್‌ ವಿಜೇತ ನಾಯಕ ಆ್ಯರೋನ್‌ ಫಿಂಚ್‌ ಮಂಗ​ಳ​ವಾರ ಅಂತಾ​ರಾ​ಷ್ಟ್ರೀಯ ಕ್ರಿಕೆ​ಟ್‌ಗೆ ನಿವೃತ್ತಿ ಘೋಷಿ​ಸಿ​ದ್ದಾರೆ. 2021ರ ಟಿ20 ವಿಶ್ವ​ಕಪ್‌ನಲ್ಲಿ ಆಸ್ಪ್ರೇಲಿಯಾ ಆ್ಯರೋನ್ ಫಿಂಚ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿತ್ತು. ಕಳೆದ ವರ್ಷವೇ ಏಕ​ದಿನ ಕ್ರಿಕೆ​ಟ್‌ಗೆ ವಿದಾಯ ಹೇಳಿದ್ದ ಆ್ಯರೋನ್ ಫಿಂಚ್‌, 2024ರ ಟಿ20 ವಿಶ್ವಕಪ್‌ ವರೆಗೂ ತಂಡದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ವಿದಾಯ ಘೋಷಿಸಿದ್ದಾರೆ. 

2011ರಲ್ಲಿ ಅಂತಾ​ರಾ​ಷ್ಟ್ರೀಯ ಪಾದಾ​ರ್ಪಣೆ ಮಾಡಿದ್ದ ಆ್ಯರೋನ್ ಫಿಂಚ್‌ 5 ಟೆಸ್ಟ್‌, 102 ಟಿ20 ಹಾಗೂ 146 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿ​ದ್ದಾರೆ. ಕಳೆದ ಟಿ20 ವಿಶ್ವ​ಕ​ಪ್‌​ನಲ್ಲಿ ಕೊನೆ ಬಾರಿ ಅವರು ತಂಡದ ಪರ ಆಡಿ​ದ್ದ​ರು. ಅವರು 76 ಟಿ20, 55 ಏಕ​ದಿನ ಪಂದ್ಯ​ಗ​ಳಲ್ಲಿ ಆಸೀಸ್‌ ತಂಡ​ವನ್ನು ಮುನ್ನ​ಡೆ​ಸಿ​ದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯ​ದಲ್ಲಿ ಅತಿ​ಹೆಚ್ಚು ರನ್‌ ಸಿಡಿಸಿ ದಾಖಲೆ ಫಿಂಚ್‌ ಹೆಸ​ರ​ಲ್ಲಿದೆ. 2018ರಲ್ಲಿ ಜಿಂಬಾಬ್ವೆ ವಿರುದ್ಧ ಅವರು 172 ರನ್‌ ಗಳಿ​ಸಿ​ದ್ದರು.

click me!