Ranji Trophy: ಕರ್ನಾ​ಟ​ಕದ ಫೈನಲ್‌ ಕನಸು ಭಗ್ನ?

Published : Feb 12, 2023, 08:37 AM ISTUpdated : Feb 12, 2023, 08:44 AM IST
Ranji Trophy: ಕರ್ನಾ​ಟ​ಕದ ಫೈನಲ್‌ ಕನಸು ಭಗ್ನ?

ಸಾರಾಂಶ

ರಣಜಿ ಟ್ರೋಫಿ ಸೆಮಿಫೈನಲ್‌: ಸೌರಾಷ್ಟ್ರ 527ಕ್ಕೆ ಆಲೌಟ್ ಮೊದಲ ಇನಿಂಗ್ಸ್‌ ಮುನ್ನಡೆ ಸಂಪಾದಿಸಿದ ಸೌರಾಷ್ಟ್ರ ಇಂದು ಕೊನೆ ದಿನ, ಡ್ರಾ ಆದ್ರೆ ಸೌರಾಷ್ಟ್ರ ಫೈನಲ್‌ಗೆ ಲಗ್ಗೆ

ಬೆಂಗ​ಳೂ​ರು(ಫೆ.12): ರಣಜಿ ಟ್ರೋಫಿ ಕ್ರಿಕೆ​ಟ್‌​ನಲ್ಲಿ ಫೈನಲ್‌ ಪ್ರವೇ​ಶಿ​ಸುವ ಕರ್ನಾ​ಟ​ಕದ ಕನಸು ಭಗ್ನಗೊ​ಳ್ಳುವ ಸಾಧ್ಯತೆ ಹೆಚ್ಚಿದೆ. ಸೆಮಿ​ಫೈ​ನ​ಲ್‌​ನಲ್ಲಿ ಕರ್ನಾ​ಟಕ ವಿರುದ್ಧ ಸೌರಾಷ್ಟ್ರ ಇನ್ನಿಂಗ್‌್ಸ ಮುನ್ನ​ಡೆ ಸಾಧಿಸಲು ಯಶ​ಸ್ವಿ​ಯಾ​ಗಿದ್ದು, 2019-20ರ ಬಳಿಕ ಮತ್ತೊಮ್ಮೆ ಫೈನಲ್‌ ಪ್ರವೇ​ಶಿ​ಸು​ವುದು ಬಹು​ತೇಕ ಖಚಿ​ತ​ಗೊಂಡಿದೆ. ಭಾನು​ವಾರ ಪಂದ್ಯದ ಕೊನೆ ದಿನ​ವಾ​ಗಿದ್ದು, ಅಸಾ​ಧಾ​ರಣ ಪ್ರದ​ರ್ಶನ ತೋರಿ ಗೆದ್ದರೆ ಮಾತ್ರ ಕರ್ನಾ​ಟ​ಕಕ್ಕೆ ಫೈನಲ್‌ ತಲು​ಪುವ ಅವ​ಕಾ​ಶ​ವಿದೆ. ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಅಧಾ​ರ​ದಲ್ಲಿ ಸೌರಾ​ಷ್ಟ್ರ ಫೈನ​ಲ್‌ಗೇರ​ಲಿ​ದೆ.

ಕರ್ನಾ​ಟ​ಕದ 407 ರನ್‌ಗೆ ಉತ್ತ​ರ​ವಾಗಿ 3ನೇ ದಿನ​ 4 ವಿಕೆ​ಟ್‌ಗೆ 364 ರನ್‌ ಗಳಿ​ಸಿದ್ದ ಸೌರಾಷ್ಟ್ರ ಶನಿ​ವಾ​ರ 527 ರನ್‌ಗೆ ಆಲೌ​ಟಾಗಿ 120 ರನ್‌ ಮುನ್ನಡೆ ಸಾಧಿ​ಸಿತು. 112 ರನ್‌ ಗಳಿಸಿ ಕ್ರೀಸ್‌​ನ​ಲ್ಲಿದ್ದ ನಾಯಕ ಅರ್ಪಿತ್‌ ವಸಾವ್ಡಾ, ಜಿರಾಗ್‌ ಜಾನಿ ಜೊತೆ​ಗೂಡಿ 5ನೇ ವಿಕೆ​ಟ್‌ಗೆ 142 ರನ್‌ ಜೊತೆ​ಯಾ​ಟ​ವಾ​ಡಿ​ದರು. ಚಿರಾಗ್‌ 72ಕ್ಕೆ ವಿಕೆಟ್‌ ಒಪ್ಪಿ​ಸಿ​ದರೂ ಅರ್ಪಿತ್‌ ಅಬ್ಬರ ಕಡಿ​ಮೆ​ಯಾ​ಗ​ಲಿಲ್ಲ. ಅವರು 406 ಎಸೆ​ತ​ಗ​ಳಲ್ಲಿ 21 ಬೌಂಡರಿ, 1 ಸಿಕ್ಸ​ರ್‌​ನೊಂದಿಗೆ 202 ರನ್‌ ಸಿಡಿಸಿ ನಿರ್ಗ​ಮಿ​ಸಿ​ದರು. ವಿದ್ವತ್‌ ಕಾವೇ​ರಪ್ಪ 5, ಶ್ರೇಯಸ್‌ ಗೋಪಾಲ್‌ 2 ವಿಕೆಟ್‌ ಪಡೆ​ದರು.

ರಾಜ್ಯಕ್ಕೆ ಶಾಕ್‌: ದೊಡ್ಡ ಹಿನ್ನ​ಡೆ​ಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿ​ಸಿ​ದ ಕರ್ನಾ​ಟಕ ವೇಗ​ವಾಗಿ ರನ್‌ ಕಲೆ​ಹಾ​ಕುವ ನಿರೀ​ಕ್ಷೆ​ಯ​ಲ್ಲಿ​ದ್ದರೂ ಸೌರಾಷ್ಟ್ರ ಬೌಲ​ರ್‌​ಗಳು ಅದಕ್ಕೆ ಅವ​ಕಾಶ ನೀಡ​ಲಿಲ್ಲ. ಸಮ​ರ್ಥ್‌​(00), ಪಡಿ​ಕ್ಕ​ಲ್‌​(07), ಮನೀಶ್‌ ಪಾಂಡೆ​(04) ಬೇಗನೇ ನಿರ್ಗ​ಮಿ​ಸಿ​ದರು. ಆದರೆ ಮಯಾಂಕ್‌ ಅಗ​ರ್‌​ವಾಲ್‌ 55, ನಿಕಿನ್‌ ಜೋಸ್‌ ಔಟಾ​ಗದೆ 54 ರನ್‌ ಗಳಿ​ಸಿ ತಂಡಕ್ಕೆ ಆಸ​ರೆ​ಯಾ​ದರು. ತಂಡ ಸದ್ಯ 4ಕ್ಕೆ 123 ರನ್‌ ಗಳಿ​ಸಿದ್ದು, ಕೇವಲ 3 ರನ್‌ ಮುನ್ನ​ಡೆ​ಯ​ಲ್ಲಿದೆ. ಭಾನು​ವಾರ ಮತ್ತಷ್ಟುರನ್‌ ಸೇರಿಸಿ, ಸೌರಾ​ಷ್ಟ್ರ​ವನ್ನು ಬೇಗನೇ ಆಲೌಟ್‌ ಮಾಡಲು ರಾಜ್ಯ ತಂಡ ಕಾಯು​ತ್ತಿದೆ.

Ranji Trophy: ಕರ್ನಾಟಕಕ್ಕೆ ಮತ್ತೆ ಸೌರಾಷ್ಟ್ರ ಕಂಟಕ; ಇನಿಂಗ್ಸ್‌ ಹಿನ್ನಡೆ ಭೀತಿ..!

ಸ್ಕೋರ್‌: ಸ್ಕೋರ್‌: ಕರ್ನಾ​ಟಕ 407/10, 
ಸೌರಾಷ್ಟ್ರ 527/10 (ಅ​ರ್ಪಿತ್‌ 202, ಚಿರಾಗ್‌ 72, ವಿದ್ವತ್‌ 5-83)
ಕರ್ನಾಟಕ 2ನೇ ಇನ್ನಿಂಗ್‌್ಸ 123/4(ಮ​ಯಾಂಕ್‌ 55, ನಿಕಿನ್‌ 54*, ಸಕಾ​ರಿಯಾ 2-24)

ಮಧ್ಯಪ್ರದೇಶ ಎದುರು ಬಂಗಾಳ ಬಿಗಿ ಹಿಡಿತ..!

ಇಂದೋ​ರ್‌​: ರಣಜಿ ಟ್ರೋಫಿ ಸೆಮಿ​ಫೈ​ನ​ಲ್‌​ನಲ್ಲಿ ಹಾಲಿ ಚಾಂಪಿ​ಯನ್‌ ಮಧ್ಯ​ಪ್ರ​ದೇ​ಶ ವಿರುದ್ಧ ಬಂಗಾಳ ಬಿಗಿ​ಹಿ​ಡಿತ ಸಾಧಿ​ಸಿದ್ದು, ಫೈನ​ಲ್‌​ಗೇ​ರು​ವುದು ಬಹು​ತೇಕ ಖಚಿ​ತ​ಗೊಂಡಿದೆ. 2ನೇ ಇನ್ನಿಂಗ್‌್ಸ​ನಲ್ಲಿ ಬಂಗಾಳ ತಂಡ ಅನು​ಸ್ತು​ಪ್‌​(80), ಪ್ರದಿಪ್ತಾ ಪ್ರಮಾ​ಣಿ​ಕ್‌​(ಔಟಾ​ಗದೆ 60) ನೆರ​ವಿ​ನಿಂದ 4ನೇ ದಿನ​ದಂತ್ಯಕ್ಕೆ 9 ವಿಕೆ​ಟ್‌ಗೆ 279 ರನ್‌ ಗಳಿ​ಸಿದ್ದು, ಬರೋ​ಬ್ಬರಿ 547 ರನ್‌ ಮುನ್ನಡೆ ಪಡೆ​ದಿದೆ. 

ಪಂದ್ಯ ಡ್ರಾಗೊ​ಂಡರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾ​ರ​ದಲ್ಲಿ ಬಂಗಾಳ ಫೈನಲ್‌ ತಲು​ಪ​ಲಿದೆ. ಮೊದಲ ಇನ್ನಿಂಗ್‌್ಸ​ನಲ್ಲಿ ಬಂಗಾಳದ 438 ರನ್‌ಗೆ ಉತ್ತರವಾಗಿ ಮಧ್ಯ​ಪ್ರ​ದೇಶ ಕೇವಲ 170 ರನ್‌ಗೆ ಸರ್ವ​ಪ​ತನ ಕಂಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!