ರಣಜಿ ಟ್ರೋಫಿ ಟೂರ್ನಿಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ; ತಂಡದಲ್ಲಿ ಮಹತ್ವದ ಬದಲಾವಣೆ!

Kannadaprabha News   | Kannada Prabha
Published : Oct 02, 2026, 10:47 AM IST
Karnataka Ranji Trophy

ಸಾರಾಂಶ

ಆಂಧ್ರಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಆರ್.ಸ್ಮರಣ್ ನಾಯಕತ್ವದ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಕೆ.ಎಲ್.ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕೆಪಿಟಿಸಿಎಲ್ ಕರ್ನಾಟಕ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಹೊಸ ಜೆರ್ಸಿ ಅನಾವರಣಗೊಳಿಸಲಾಗಿದೆ.

ಬೆಂಗಳೂರು: ಅ.11ರಿಂದ ವಿಜಯವಾಡದಲ್ಲಿ ಆಂಧ್ರಪ್ರದೇಶ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಕಾಯಂ ನಾಯಕ ದೇವದತ್‌ ಪಡಿಕ್ಕಲ್‌ ಅನುಪಸ್ಥಿತಿಯಲ್ಲಿ ಆರ್‌.ಸ್ಮರಣ್‌ ನಾಯಕತ್ವ ವಹಿಸಲಿದ್ದು, ತಾರಾ ಅಟಗಾರಾದ ಕೆ.ಎಲ್‌.ರಾಹುಲ್‌, ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಬಾರಿಯ ರನ್ನರ್‌ ಅಪ್ ಕರ್ನಾಟಕ ಈ ಸಲ ಹೊಸ ಕೋಚ್‌ ವಿನಯ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಆಡಲಿದೆ. ಅನುಭವಿ ವೈಶಾಖ್ ವಿಜಯ್‌ಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಗಾಯದಿಂದ ಹೊರಗುಳಿಯಲಿದ್ದಾರೆ.

ಕರ್ನಾಟಕ ತಂಡ: 

ಅರ್‌.ಸ್ಮರಣ್‌( ನಾಯಕ), ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌, ಎ.ಗೌತಮ್‌, ಕೆ.ವಿ.ಅನೀಶ್‌, ಶ್ರೇಯಸ್‌ ಗೋಪಾಲ್, ಕೃತಿಕ್‌ ಕೃಷ್ಣ, ಶಿಖರ್‌ ಶೆಟ್ಟಿ, ಪ್ರಸಿದ್ಧ್‌ ಕೃಷ್ಣ, ಅಭಿಲಾಷ್ ಶೆಟ್ಟಿ, ಮನ್ವಂತ್‌ ಕುಮಾರ್‌, ಎಲ್‌.ಆರ್‌.ಕುಮಾರ್‌, ರಿತೇಶ್‌ ಭಟ್ಕಳ, ಕೆ.ಎಲ್.ಶ್ರೀಜಿತ್‌.

ಇನ್ನು ಕ್ರಿಕೆಟ್ ಮೂಲಕ ದೇಶದೆಲ್ಲೆಡೆ ರಾಜ್ಯ ಪ್ರವಾಸೋದ್ಯಮದ ಪ್ರಚಾರ!

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಪಡೆದುಕೊಂಡಿದೆ. ಇದರೊಂದಿಗೆ ಕ್ರಿಕೆಟ್ ಮೂಲಕ ದೇಶದೆಲ್ಲೆಡೆ ರಾಜ್ಯದ ಪ್ರವಾಸೋದ್ಯಮವನ್ನು ಪ್ರಚಾರ ಮಾಡಲು ಇಲಾಖೆ ಸಜ್ಜಾಗಿದೆ.

ಗುರುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಈ ಪ್ರಾಯೋಜಕತ್ವವನ್ನು ಅಧಿಕೃತವಾಗಿ ಘೋಷಿಸಿ, ರಾಜ್ಯ ಕ್ರಿಕೆಟ್ ತಂಡಗಳ ಹೊಸ ಜೆರ್ಸಿ ಅನಾವರಣಗೊಳಿಸಲಾಯಿತು. ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್, ಕ್ರಿಕೆಟಿಗರಾದ ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್, ರಾಜೇಶ್ವರಿ ಗಾಯಕ್ವಾಡ್, ರಾಜ್ಯ ಕ್ರಿಕೆಟ್ ಸಂಸ್ಧೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್‌, ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ, ಉಪಾಧ್ಯಕ್ಷ ಸುಜಿತ್ ಸೋಮಸುಂದರ್ ಹಾಗೂ ಇತರ ಪದಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥ ಶ್ರೀನಿವಾಸ್‌ ಸೇರಿ ಪ್ರಮುಖರು ಹಾಜರಿದ್ದರು.

ಈ ವೇಳೆ ಮಾತನಾಡಿದ ಜಾರ್ಜ್, ‘ಕ್ರಿಕೆಟ್ ಮೂಲಕ ನಮ್ಮ ರಾಜ್ಯ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಚಾರ ಮಾಡುವ ಉದ್ದೇಶದಿಂದ ಈ ಪ್ರಾಯೋಜಕತ್ವ ವಹಿಸಲಾಗಿದೆ. ಇದಕ್ಕಾಗಿ ₹2 ಕೋಟಿ ನೀಡಲಾಗುತ್ತದೆ. ಆದರೆ ಹಣ ನಮಗೆ ಮುಖ್ಯವಲ್ಲ. ನಮ್ಮ ಪ್ರವಾಸೋದ್ಯಮ ದೇಶದೆಲ್ಲೆಡೆ ಪ್ರಚಾರ ಪಡೆಯಬೇಕು. ಇದರಿಂದ ನಮಗೂ ಲಾಭವಿದೆ’ ಎಂದರು.

ಇರಾನಿ ಕಪ್‌ ಫೈನಲ್: ರೆಸ್ಟ್‌ ಆಫ್‌ ಇಂಡಿಯಾ 237/10

ಶ್ರೀನಗರ: ರಣಜಿ ಚಾಂಪಿಯನ್‌ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಇರಾನಿ ಕಪ್‌ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರೆಸ್ಟ್‌ ಆಫ್‌ ಇಂಡಿಯಾ 237 ರನ್‌ಗೆ ಆಲೌಟಾಗಿದೆ. ಶಿಖರ್‌ ಮೋಹನ್‌ 60, ಕರ್ನಾಟಕದ ಆರ್‌.ಸ್ಮರಣ್‌ 68, ಸರ್ಫರಾಜ್‌ ಖಾನ್‌ 45 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ನಾಯಕ ರಿಷಭ್‌ ಪಂತ್‌(10), ಸನತ್‌ ಸಂಗ್ವಾನ್‌(1) ಸುದೀಪ್‌ ಘರಮಿ(8) ವಿಫಲರಾದರು. ರಿಷಭ್‌ ಕೆಟ್ಟ ಹೊಡೆತಕ್ಕೆ ಕೈಹಾಕಿ ಔಟಾದರು. ಸುನಿಲ್‌ ಕುಮಾರ್‌, ಲೋನೆ ನಾಸಿರ್‌ ತಲಾ 3 ವಿಕೆಟ್‌ ಕಿತ್ತರು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಜಮ್ಮು-ಕಾಶ್ಮೀರ ದಿನದಂತ್ಯಕ್ಕೆ 2 ವಿಕೆಟ್‌ಗೆ 21 ರನ್‌ ಗಳಿಸಿದ್ದು, ಇನ್ನು 216 ರನ್‌ ಹಿನ್ನಡೆಯಲ್ಲಿದೆ.

3ನೇ ಏಕದಿನ: ಪ್ರಸಿದ್ಧ್‌ ಹೊರಕ್ಕೆ, ವೇಗಿ ಅನ್ಶುಲ್ ಕಂಬೋಜ್‌ಗೆ ಅವಕಾಶ

ಗುವಾಹಟಿ: ವೆಸ್ಟ್‌ಇಂಡೀಸ್‌ ವಿರುದ್ಧ ಶನಿವಾರ ಮುಲ್ಲಾನ್‌ಪುರದಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯದಿಂದ ಗಾಯಾಳು ಪ್ರಸಿದ್ಧ್‌ ಕೃಷ್ಣ ಹೊರಬಿದ್ದಿದ್ದಾರೆ. ಅವರ ಬದಲು ಯುವ ವೇಗಿ ಅನ್ಶುಲ್‌ ಕಂಬೋಜ್‌ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇನ್ನು, ವಿಂಡೀಸ್‌ ವಿರುದ್ಧ ಅ.6ರಿಂದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯಿಂದ ವಾಷಿಂಗ್ಟನ್‌ ಸುಂದರ್‌ರನ್ನು ಹೊರಗಿಡಲಾಗಿದೆ. ರಣಜಿ, ನ್ಯೂಜಿಲೆಂಡ್‌ ಟೆಸ್ಟ್‌ ಸರಣಿ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರ ಬದಲು ನಮನ್‌ಧೀರ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; ಅದೇ ಅಂಗಳ, ಹಳೇ ಗಾಯ! 23 ವರ್ಷಗಳ ನಂತರ ಎದುರಾಳಿಗಳ ಮಣ್ಣು ಮುಕ್ಕಿಸಲು ಆ ಜೋಡಿ ರೆಡಿ!
ಎಡಗೈಯಲ್ಲಿ ಸಂಜು, ಬಲಗೈಯಲ್ಲಿ ದುಬೆ ಗಿರಗಿರ! ವಿಶ್ವದಾಖಲೆ ಬರೆದ ಲಂಕಾ ಸ್ಪಿನ್ನರ್‌