
2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ (ICC Men's ODI World Cup 2027) ಮೆಗಾ ಟೂರ್ನಿಯ ವೇಳಾಪಟ್ಟಿ ಕೊನೆಗೂ ಪ್ರಕಟಗೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಹೈ-ವೋಲ್ಟೇಜ್ ಕೌಂಟ್‌ಡೌನ್ ಶುರುವಾಗಿದೆ. ಮುಂದಿನ ವರ್ಷದ ಅಕ್ಟೋಬರ್ 2 ರಿಂದ ನವೆಂಬರ್ 2027 ರವರೆಗೆ ನಡೆಯಲಿರುವ ಈ ಕ್ರಿಕೆಟ್ ಮಹಾಕುಂಭಕ್ಕೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಲಿವೆ.
ಈ ಬಾರಿಯ ಮೆಗಾ ಈವೆಂಟ್‌ನಲ್ಲಿ ಒಟ್ಟು 12 ಜಾಗತಿಕ ತಂಡಗಳು ಭಾಗವಹಿಸುತ್ತಿದ್ದು, ತಲಾ ಆರು ತಂಡಗಳಂತೆ ಗ್ರೂಪ್-ಎ (Group A) ಮತ್ತು ಗ್ರೂಪ್-ಬಿ (Group B) ಎಂಬ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಗ್ರೂಪ್-ಎ; ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಅರ್ಹತಾ ಸುತ್ತಿನಿಂದ ಬರಲಿರುವ ಒಂದು ತಂಡ.
ಗ್ರೂಪ್-ಬಿ; ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅರ್ಹತಾ ಸುತ್ತಿನಿಂದ ಆಯ್ಕೆಯಾಗಲಿರುವ ಇನ್ನೊಂದು ತಂಡ.
ಅಕ್ಟೋಬರ್ 10; ಜೋಹಾನ್ಸ್‌ಬರ್ಗ್‌ನಲ್ಲಿ ಇಂಡಿಯಾ ವರ್ಸಸ್ ಪಾಕಿಸ್ತಾನ ಹೈ-ಟೆನ್ಷನ್ ಫೈಟ್!
ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ತಕ್ಷಣವೇ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಕಣ್ಣು ಬಿದ್ದಿದ್ದು ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ. ಗ್ರೂಪ್ ಹಂತದ ಈ ಬ್ಲಾಕ್‌ಬಸ್ಟರ್ ಕಾಳಗವು **ಅಕ್ಟೋಬರ್ 10, 2027** ರಂದು ದಕ್ಷಿಣ ಆಫ್ರಿಕಾದ ಐತಿಹಾಸಿಕ ಜೋಹಾನ್ಸ್‌ಬರ್ಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಟೂರ್ನಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಎರಡನೇ ಗ್ರೂಪ್ ಹಂತದ ಪಂದ್ಯವಾಗಲಿದೆ.
ಜೋಹಾನ್ಸ್‌ಬರ್ಗ್ ಅಂಗಳದಲ್ಲಿ ಭಾರತ-ಪಾಕ್ ಪಂದ್ಯ ಎಂದ ತಕ್ಷಣ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೆ ನೆನಪಾಗುವುದು 2003ರ ಏಕದಿನ ವಿಶ್ವಕಪ್‌ನ ಆ ಐತಿಹಾಸಿಕ ಪಂದ್ಯ! ಅಂದು ಪಾಕಿಸ್ತಾನ ನೀಡಿದ್ದ 274 ರನ್‌ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿದ ಆಕ್ರಮಣಕಾರಿ ಓಪನಿಂಗ್ ಸ್ಟಾರ್ಟ್ ಇಂದಿಗೂ ಅಮರ.
ಪಾಕ್ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್ ಎಸೆದ ಇನ್ನಿಂಗ್ಸ್‌ನ 2ನೇ ಓವರ್‌ನಲ್ಲೇ ಬ್ಯಾಕ್‌ವರ್ಡ್ ಪಾಯಿಂಟ್ (Backward Point) ಮೇಲೆ ಸಚಿನ್ ಬಾರಿಸಿದ ಆ ಐಕಾನಿಕ್ ಸಿಕ್ಸರ್ ಕ್ರಿಕೆಟ್ ಚರಿತ್ರೆಯ ಪುಟ ಸೇರಿತು. ಆ ಒಂದೇ ಓವರ್‌ನಲ್ಲಿ 1 ಸಿಕ್ಸ್, 2 ಬೌಂಡರಿಗಳೊಂದಿಗೆ 18 ರನ್ ಚಚ್ಚಿದ ಸಚಿನ್, ಅಖ್ತರ್ ಪೇಸ್ ಅಟ್ಯಾಕ್ ಅನ್ನು ಧೂಳೀಪಟ ಮಾಡಿದರು. ಕೇವಲ 75 ಎಸೆತಗಳಲ್ಲಿ 98 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ ಸಚಿನ್, ಶತಕಕ್ಕೆ 2 ರನ್ ಬಾಕಿ ಇರುವಾಗ ಅಖ್ತರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರೂ, ಭಾರತಕ್ಕೆ 6 ವಿಕೆಟ್‌ಗಳ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.
ಅಂದು ಸಚಿನ್ ತೆಂಡೂಲ್ಕರ್ ಶೋಯೆಬ್ ಅಖ್ತರ್ ಮತ್ತು ಪಾಕ್ ಬೌಲಿಂಗ್ ಲೈನ್‌ಅಪ್ ಮೇಲೆ ಸವಾರಿ ಮಾಡಿ ಎದುರಾಳಿಗಳ ಎದೆಯಲ್ಲಿ ಗಾಯ ಮಾಡಿದ್ದ ಅದೇ ಜೋಹಾನ್ಸ್‌ಬರ್ಗ್ ಗ್ರೌಂಡ್‌ನಲ್ಲಿ, ಭರ್ಜರಿ 23 ವರ್ಷಗಳ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಡೆ ಅಂಗಳಕ್ಕಿಳಿಯುತ್ತಿದೆ!
ವೈಭವಕ್ಕೆ ಸಾಕ್ಷಿಯಾಗಲಿದೆ ಜೋಹಾನ್ಸ್‌ಬರ್ಗ್ ಪಿಚ್!
ಆಧುನಿಕ ಕ್ರಿಕೆಟ್‌ನ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅವರ ಶಾರ್ಟ್-ಪಿಚ್ (Short-pitch) ಪುಲ್ ಶಾಟ್‌ಗಳು ಹಾಗೂ ವಿರಾಟ್ ಕೊಹ್ಲಿ ಅವರ ಕ್ಲಾಸಿಕ್ ಕವರ್ ಡ್ರೈವ್‌ಗಳ (Cover Drive) ಬ್ಯಾಟಿಂಗ್ ವೈಭವಕ್ಕೆ ಜೋಹಾನ್ಸ್‌ಬರ್ಗ್ ಪಿಚ್ ಸಾಕ್ಷಿಯಾಗಲಿದೆ. ಪಾಕಿಸ್ತಾನದ ಬೌಲಿಂಗ್ ಆಕ್ರಮಣದ ವಿರುದ್ಧ ಟೀಮ್ ಇಂಡಿಯಾದ ಈ ಅನುಭವೀ ಬ್ಯಾಟಿಂಗ್ ಜೋಡಿ ಅಂದು ಸಚಿನ್ ನೀಡಿದ್ದ ಗಾಯಕ್ಕೆ ಮತ್ತೆ ಉಪ್ಪು-ಖಾರ ಸವರಲಿದೆಯಾ ಎಂಬುದನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.