ವಿಧಾನಸೌಧದ ಮೆಟ್ಟಿಲ ಮೇಲೆ ಕನ್ನಡಕ್ಕಷ್ಟೇ ಸ್ಥಾನ; ಉರ್ದು ಉತ್ಸವಕ್ಕೆ ಅನುಮತಿ ನೀಡದ ಸರ್ಕಾರ!

Published : Oct 01, 2026, 11:27 PM IST
Narayana Gowda

ಸಾರಾಂಶ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜಿಸುವ ಸರ್ಕಾರದ ಚಿಂತನೆಗೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ಉತ್ಸವವನ್ನು ರದ್ದುಗೊಳಿಸಿದೆ. ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ವಿಧಾನಸೌಧದಲ್ಲಿ ಕನ್ನಡೇತರ ಭಾಷೆಗಳ ವೈಭವೀಕರಣ ಸಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು; ಈ ಹಿಂದೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜಿಸುವ ಕುರಿತು ಸರ್ಕಾರ ಚಿಂತನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಈ ವಿಷಯ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಆದರೆ ಸರ್ಕಾರ ಈ ಉತ್ಸವವನ್ನು ರದ್ದುಗೊಳಿಸಿದೆ ಎಂದು ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕರವೇ ಟಿ.ಎ. ನಾರಾಯಣಗೌಡ ಸವಿವರವಾಗಿ ಹಂಚಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕರವೇ ನಾರಾಯಣಗೌಡ ಹೇಳಿದ್ದೇನು?

ಸರ್ಕಾರ ಕ್ಷಿಪ್ರಗತಿಯಲ್ಲಿ ಸ್ಪಷ್ಟನೆ ನೀಡಿ, ವಾತಾವರಣವನ್ನು ತಿಳಿಗೊಳಿಸಿರುವುದು ಒಳ್ಳೆಯದು. ಮುಂದೆಯೂ ಸಹ ಇಂಥ ವಿವಾದಗಳಿಗೆ ಅವಕಾಶ ನೀಡಬಾರದು. ಸಂಘರ್ಷದ ವಾತಾವರಣವನ್ನು ಸರ್ಕಾರವೇ ಸೃಷ್ಟಿಸಲು ಹೋಗಬಾರದು. ಅತಿಯಾದ ಉತ್ಸಾಹದಲ್ಲಿ ವಿವೇಕವು ಕಣ್ಮರೆಯಾಗುತ್ತದೆ. ಬಹುಶಃ ಈ ಉದ್ದೇಶಿತ ಕಾರ್ಯಕ್ರಮದ ಘೋಷಣೆ ಮಾಡಿದ್ದ ಆರೋಗ್ಯ ಸಚಿವರಾದ ಯು.ಟಿ.ಖಾದರ್‌ ಅವರಿಗೂ ಇದು ಅರ್ಥವಾಗಿದೆಯೆಂದು ಭಾವಿಸುತ್ತೇನೆ ಎಂದು ನಾರಾಯಣಗೌಡ ಹೇಳಿದ್ದಾರೆ.

ಉರ್ದು ಭಾಷೆಗೆ ವಿರೋಧವಿಲ್ಲ!

ನಮಗೆ ಉರ್ದು ಭಾಷೆ ಅಥವಾ ಉರ್ದು ಮಾತನಾಡುವ ಜನರ ವಿರುದ್ಧ ಯಾವುದೇ ವಿರೋಧವಿಲ್ಲ. ಉರ್ದು ಮಾತ್ರವಲ್ಲ ಇನ್ಯಾವುದೇ ಕನ್ನಡೇತರ ಭಾಷೆಯ ಕಾರ್ಯಕ್ರಮ ಮಾಡಲು ಹೊರಟಿದ್ದರೂ ನಾವು ಇಷ್ಟೇ ತೀವ್ರವಾಗಿ ವಿರೋಧಿಸುತ್ತಿದ್ದೆವು. ರಾಜ್ಯದ ಆಡಳಿತದ ಶಕ್ತಿಕೇಂದ್ರವಾಗಿರುವ ವಿಧಾನಸೌಧದ ಮೆಟ್ಟಿಲುಗಳನ್ನು ನಿರ್ದಿಷ್ಟ ಭಾಷಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಸುವ ಔಚಿತ್ಯವೇನು ಎಂಬುದು ನಮ್ಮ ಪ್ರಶ್ನೆ. ಇವತ್ತು ಒಂದು ಭಾಷೆಯ ಕಾರ್ಯಕ್ರಮ ನಡೆದರೆ ನಂತರ ಇತರ ಎಲ್ಲ ಭಾಷೆಗಳ ಕಾರ್ಯಕ್ರಮಗಳು ನಡೆಯುತ್ತವೆ. ಕರ್ನಾಟಕದ ಆಡಳಿತ ಭಾಷೆ ಕನ್ನಡ, ನೆಲದ ಭಾಷೆ ಕನ್ನಡ. ಹೀಗಿರುವಾಗ ವಿಧಾನಸೌಧದಲ್ಲಿ ಇತರ ಭಾಷೆಗಳ ವೈಭವೀಕರಣ ಸಲ್ಲದು ಎಂಬುದು ನಮ್ಮ ಸ್ಪಷ್ಟ ನಿಲುವು. ಈಗಾಗಲೇ ಕನ್ನಡ ನುಡಿ ಸಂಸ್ಕೃತಿಗಳು ಅನ್ಯಭಾಷೆಗಳಿಂದ ದಾಳಿಗೊಳಗಾಗಿವೆ. ಅನಿಯಂತ್ರಿತ ವಲಸೆಯಿಂದಾಗಿ ಕನ್ನಡಿಗರೇ ತಬ್ಬಲಿಗಳಾಗುವ ಸನ್ನಿವೇಶ ನಿರ್ಮಾಣವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರದ ಮಂತ್ರಿಗಳು ಇಂಥ ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದು ಕರವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಕರ್ನಾಟಕ ಎಂದೆಂದಿಗೂ ಸರ್ವ ಜನಾಂಗದ ಶಾಂತಿಯ ತೋಟ

1994ರಲ್ಲಿ ಬೆಂಗಳೂರಿನ ದೂರದರ್ಶನದಲ್ಲಿ ಉರ್ದು ಸುದ್ದಿ ಬುಲೆಟಿನ್ ಆರಂಭಿಸಿದ ವಿಚಾರ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಅಕ್ಟೋಬರ್ 7ರಂದು ಪರಿಸ್ಥಿತಿ ಕೋಮು ಹಿಂಸಾಚಾರಕ್ಕೆ ತಿರುಗಿ, ಪೊಲೀಸ್ ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ, ಆಸ್ತಿ ಹಾನಿ ಸೇರಿದಂತೆ ಗಂಭೀರ ಘಟನೆಗಳು ನಡೆದಿದ್ದವು. ಭಾಷಾ ಚಳವಳಿಯಾಗಿಯೇ ಆರಂಭವಾದ ಪ್ರತಿಭಟನೆ ನಂತರ ಧಾರ್ಮಿಕ-ಕೋಮು ಸ್ವರೂಪ ಪಡೆದುಕೊಂಡಿತ್ತು. ಕೆಲವು ಸಂಘಟನೆಗಳು ಮತ್ತು ರಾಜಕೀಯ ಶಕ್ತಿಗಳು ಉದ್ವಿಗ್ನ ವಾತಾವರಣವನ್ನು ಮತ್ತಷ್ಟು ತೀವ್ರಗೊಳಿಸಿದ್ದನ್ನು ಮರೆಯುವಂತಿಲ್ಲ. ಆ ದಿನಗಳಲ್ಲಿ ನಡೆದ ಹಿಂಸಾಚಾರ, ಸಾವುನೋವುಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಒಬ್ಬ ಪೊಲೀಸ್‌ ಪೇದೆಯ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ಸುಮಾರು 25 ಮಂದಿ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕರ್ನಾಟಕದ ಇತಿಹಾಸದಲ್ಲಿ ನಡೆದ ಅತ್ಯಂತ ಕರಾಳ ಕೋಮುಗಲಭೆ ಅದು. ಕರ್ನಾಟಕ ಎಂದೆಂದಿಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಇರಬೇಕು. ಸಹಬಾಳ್ವೆ, ಸೋದರತ್ವದ ಭಾವ ಹೆಚ್ಚಾಗುತ್ತಲೇ ಹೋಗಬೇಕು. ಕನ್ನಡಿಗರು ಸ್ವಭಾವತಃ ಶಾಂತಿಪ್ರಿಯರು. ಈ ಶಾಂತಿ, ಸಹಬಾಳ್ವೆಯನ್ನು ಕದಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಟಿ.ಎ. ನಾರಾಯಣಗೌಡ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ, 2027ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟಿಕೆಟ್ ಬುಕಿಂಗ್‌ಗೆ 'ಬ್ಯಾಲೆಟ್' ಪ್ರಕ್ರಿಯೆ ಆರಂಭ: ಅರ್ಜಿ ಸಲ್ಲಿಸುವುದು ಹೇಗೆ?
2027 ODI World Cup Schedule: ಫೈನಲ್, ಇಂಡೋ-ಪಾಕ್ ಕದನಕ್ಕೆ ವಾಂಡರರ್ಸ್ ವೇದಿಕೆ: ಕೇಪ್‌ಟೌನ್‌ನಲ್ಲಿ ಉದ್ಘಾಟನಾ ಪಂದ್ಯ