
ವಿಜಯವಾಡ: ಕಳೆದ ಬಾರಿ ರನ್ನರ್-ಅಪ್ ಕರ್ನಾಟಕ ತಂಡ ಈ ಬಾರಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಂಧ್ರ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ಅಂಧ್ರ 3 ಅಂಕ ಗಳಿಸಿದರೆ, ಕರ್ನಾಟಕ ಕೇವಲ 1 ಅಂಕ ಪಡೆಯಿತು.
ಮೊದಲ ಇನ್ನಿಂಗ್ಸ್ನಲ್ಲಿ 144 ರನ್ ಹಿನ್ನಡೆ ಅನುಭವಿಸಿದ್ದ ರಾಜ್ಯ ತಂಡ 2ನೇ ಇನ್ನಿಂಗ್ಸ್ನಲ್ಲಿ 9 ವಿಕೆಟ್ಗೆ 337 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಕರುಣ್ ನಾಯರ್ ಔಟಾಗದೆ 155 ರನ್ ಗಳಿಸಿ ತಂಡಕ್ಕೆ ಆಪತ್ಬಾಂಧವರಾದರು. ಗೆಲುವಿಗೆ 194 ರನ್ ಗುರಿ ಪಡೆದ ಆಂಧ್ರ, 26 ಓವರಲ್ಲಿ 53 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಚೇತರಿಸಿಕೊಂಡ ತಂಡ ಡ್ರಾ ಸಾಧಿಸಿತು. 44 ಓವರ್ಗಳಲ್ಲಿ 4 ವಿಕೆಟ್ಗೆ 104 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. ಶಿಖರ್ ಶೆಟ್ಟಿ 2 ವಿಕೆಟ್ ಕಿತ್ತರು.
ಸ್ಕೋರ್: ಕರ್ನಾಟಕ 274/10 ಮತ್ತು 337/9 ಡಿಕ್ಲೇರ್(ಕರುಣ್ ಔಟಾಗದೆ 155, ರಿತೇಶ್ 23, ಲಲಿತ್ ಮೋಹನ್ 5-117), ಆಂಧ್ರ 418/10 ಮತ್ತು 104/4(ರಾಹುಲ್ ಔಟಾಗದೆ 35, ಶಿಖರ್ 2-32)
ಬೆಂಗಾಲ್, ಹರ್ಯಾಣ ಗುಜರಾತ್, ಬರೋಡಾ, ಮಹಾರಾಷ್ಟ್ರಕ್ಕೆ ಗೆಲುವು
ಈ ಬಾರಿ ರಣಜಿಯ ಆರಂಭಿಕ ಪಂದ್ಯದಲ್ಲಿ ಬೆಂಗಾಲ್ ತಂಡ ಡೆಲ್ಲಿ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಗೋವಾ ವಿರುದ್ಧ ಬರೋಡಾ ಇನ್ನಿಂಗ್ಸ್ ಹಾಗೂ 135 ರನ್ಗಳಿಂದ ಗೆದ್ದರೆ, ಒಡಿಶಾ ವಿರುದ್ಧ ಗುಜರಾತ್ 10 ವಿಕೆಟ್ ಅಂತರದಲ್ಲಿ ಜಯಗಳಿಸಿತು. ಹಿಮಾಚಲ ಪ್ರದೇಶ ವಿರುದ್ಧ ಹರ್ಯಾಣಕ್ಕೆ 7 ವಿಕೆಟ್ ಗೆಲುವು ಲಭಿಸಿತು. ಪುದುಚೇರಿ ವಿರುದ್ಧ ವಿದರ್ಭ 160 ರನ್ಗಳಿಂದ, ಸರ್ವಿಸಸ್ ವಿರುದ್ಧ ಮಹಾರಾಷ್ಟ್ರ 127 ರನ್ಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ಇದೇ ವೇಳೆ ರಾಜಸ್ಥಾನ-ತಮಿಳುನಾಡು, ಹಾಲಿ ಚಾಂಪಿಯನ್ ಜಮ್ಮು-ಕಾಶ್ಮೀರ ಹಾಗೂ ಮಧ್ಯಪ್ರದೇಶ ಪಂದ್ಯ ಡ್ರಾಗೊಂಡವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.