ಹೈದರಾಬಾದ್ ಟಿ20ಯಲ್ಲಿ ರೋಚಕ ತಿರುವು: ಬೆಂಗಳೂರಿನತ್ತ ಎಲ್ಲರ ಚಿತ್ತ!

Kannadaprabha News   | Kannada Prabha
Published : Oct 15, 2026, 10:09 AM IST
Sanju Samson

ಸಾರಾಂಶ

ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ ಟಿ20 ಪಂದ್ಯದಲ್ಲಿ ರನ್ ಮಳೆ ಹರಿದಿದ್ದು, ಪ್ರವಾಸಿ ತಂಡ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿ 2-2 ಅಂತರದಲ್ಲಿ ಸಮಬಲಗೊಂಡಿದೆ. ಸರಣಿಯ ನಿರ್ಣಾಯಕ ಫೈನಲ್ ಪಂದ್ಯ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹೈದರಾಬಾದ್‌: ಭಾರತ-ವೆಸ್ಟ್‌ಇಂಡೀಸ್‌ ನಡುವಿನ ಟಿ20 ಸರಣಿಯಲ್ಲಿ ಮತ್ತೊಮ್ಮೆ ರನ್‌ ಮಳೆ ಹರಿದಿದೆ. ಆದರೆ ಈ ಬಾರಿ ಗೆಲುವನ್ನು ಪ್ರವಾಸಿ ವಿಂಡೀಸ್‌ ತಂಡ ಕಸಿದುಕೊಂಡಿದ್ದು, ಇದರೊಂದಿಗೆ ಸರಣಿಯ ‘ಫೈನಲ್‌’ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ(ಆ.17, ಶನಿವಾರ) ಸಜ್ಜಾಗಬೇಕಿದೆ.

ಬುಧವಾರ ನಡೆದ ಪಂದ್ಯದಲ್ಲಿ ಭಾರತ 24 ರನ್‌ ಸೋಲನುಭವಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು ವಿಂಡೀಸ್‌ 2-2 ಅಂತರದಲ್ಲಿ ಸಮಬಲಗೊಳಿಸಿತು.

ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ವಿಂಡೀಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 247 ರನ್‌ ಕಲೆಹಾಕಿತು. ಆರಂಭಿಕ ಆಟಗಾರ ಶಾಯ್‌ ಹೋಪ್‌ ಹಾಗೂ ಜೆವೆಲ್‌ ಆ್ಯಂಡ್ರ್ಯೂ 4.2 ಓವರ್‌ಗಳಲ್ಲಿ 52 ರನ್‌ ಜೊತೆಯಾಟವಾಡಿದರು. ಜೆವೆಲ್‌ 21 ರನ್‌ಗೆ ಔಟಾದ ಬಳಿಕ ಹೋಪ್‌ಗೆ ಶಿಮ್ರೋನ್ ಹೆಟ್ಮೇಯರ್‌ ಜೊತೆಯಾದರು. ಈ ಜೋಡಿ 2ನೇ ವಿಕೆಟ್‌ಗೆ 58 ರನ್‌ ಸೇರಿಸಿತು. ಹೆಟ್ಮೇಯರ್‌ 12 ಎಸೆತಗಳಲ್ಲಿ 33 ರನ್‌ ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ರೋವ್ಮನ್ ಪೊವೆಲ್‌ 24 ರನ್‌ ಗಳಿಸಿದರು. 12.5 ಓವರ್‌ಗಳಲ್ಲಿ 156 ರನ್‌ಗೆ 3 ವಿಕೆಟ್‌ ಉರುಳಿತು. ಬಳಿಕ ಮುರಿಯದ 4ನೇ ವಿಕೆಟ್‌ಗೆ ಜೊತೆಯಾದ ರುಥರ್‌ಫೋರ್ಡ್‌ ಹಾಗೂ ಹೋಪ್‌, 43 ಎಸೆತಗಳಲ್ಲಿ 91 ರನ್‌ ಜೊತೆಯಾಟವಾಡಿದರು. ರುಥರ್‌ಫೊರ್ಡ್‌ 26 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 49 ರನ್‌ ಸಿಡಿಸಿದರೆ, ಹೋಪ್‌ ಸರಣಿಯಲ್ಲಿ 2ನೇ ಶತಕ ಬಾರಿಸಿದರು. ಕೊನೆ 2 ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ ಅವರು 50 ಎಸೆತಗಳಲ್ಲಿ 4 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 102 ರನ್‌ ಗಳಿಸಿ ಔಟಾಗದೆ ಉಳಿದರು.

ಸಂಜು ಅಬ್ಬರ:

ಭಾರತಕ್ಕೆ ಅಗತ್ಯವಿದ್ದ ಭರ್ಜರಿ ಆರಂಭವನ್ನು ಸಂಜು ಸ್ಯಾಮ್ಸನ್‌ ಒದಗಿಸಿಕೊಟ್ಟರು. ಅವರು ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಆದರೆ 23 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ನೊಂದಿಗೆ 56 ರನ್‌ ಸಿಡಿಸಿದ ಸಂಜು, ಪೌಲ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಆ ಬಳಿಕ ತಂಡದ ರನ್‌ ವೇಗಕ್ಕೆ ಕಡಿವಾಣ ಬಿತ್ತು. ಅಭಿಷೇಕ್‌ ಶರ್ಮಾ 29 ರನ್‌ ಗಳಿಸಲು 24 ಎಸೆತ ತೆಗೆದುಕೊಂಡರು. ಇಶಾನ್‌ ಕಿಶನ್‌ 6, ಶ್ರೇಯಸ್‌ ಅಯ್ಯರ್‌ 16 ರನ್‌ಗೆ ಔಟಾದರು. ಬಳಿಕ ತಿಲಕ್‌ ವರ್ಮಾ(25 ಎಸೆತಗಳಲ್ಲಿ 43) ಹಾಗೂ ನಿತೀಶ್‌ ಕುಮಾರ್‌(20 ಎಸೆತಗಳಲ್ಲಿ 41) ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಕೊನೆಯಲ್ಲಿ ಸತತ ವಿಕೆಟ್‌ ಕಳೆದುಕೊಂಡ ತಂಡ 19.3 ಓವರ್‌ಗಳಲ್ಲಿ 223 ರನ್‌ಗೆ ಆಲೌಟಾಯಿತು.

ಸ್ಕೋರ್: ವೆಸ್ಟ್‌ಇಂಡೀಸ್‌ 20 ಓವರಲ್ಲಿ 247/3 (ಹೋಪ್‌ ಔಟಾಗದೆ 102, ರುಥರ್‌ಫೋರ್ಡ್‌ ಔಟಾಗದೆ 49, ಹೆಟ್ಮೇಯರ್‌ 33, ಪ್ರಿನ್ಸ್‌ ಯಾದವ್‌ 1-36, ಅಕ್ಷರ್ 1-45), ಭಾರತ 19.3 ಓವರಲ್ಲಿ 223/10 (ಸಂಜು ಸ್ಯಾಮ್ಸನ್‌ 56, ತಿಲಕ್‌ 43, ನಿತೀಶ್‌ 41, ಕೀಮೊ ಪೌಲ್‌ 5-41)

ಚೇಸಿಂಗ್‌ನಲ್ಲಿ ಭಾರತ 2ನೇ ಗರಿಷ್ಠ ಸ್ಕೋರ್‌

ಭಾರತ ಈ ಪಂದ್ಯದಲ್ಲಿ 223 ರನ್‌ಗೆ ಆಲೌಟಾಯಿತು. ಇದು ಚೇಸಿಂಗ್‌ ವೇಳೆ ಭಾರತ ತಂಡ 2ನೇ ಗರಿಷ್ಠ ಸ್ಕೋರ್‌ ಎನಿಸಿಕೊಂಡಿತು. 2016ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಲಾಡೆರ್‌ಹಿಲ್‌ನಲ್ಲಿ ನಡೆದ ಪಂದ್ಯದ ವೇಳೆ ಭಾರತ ತಂಡ 244 ರನ್‌ ಗಳಿಸಿ 1 ರನ್‌ ಅಂತರದಲ್ಲಿ ಸೋತಿತ್ತು.

ಇನ್ನಿಂಗ್ಸ್‌ನ 3.4 ಓವರಲ್ಲೇ ಅರ್ಧಶತಕ: ಸ್ಯಾಮ್ಸನ್‌ ಈಗ ಜಂಟಿ ಅಗ್ರಸ್ಥಾನಕ್ಕೆ

ಭಾರತದ ಇನ್ನಿಂಗ್ಸ್‌ನ 3.4 ಓವರ್‌ಗಳಲ್ಲೇ ಸಂಜು ಸ್ಯಾಮ್ಸನ್‌ ಅರ್ಧಶತಕ ಪೂರೈಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಟಗಾರನ ಜಂಟಿ ವೇಗದ ಅರ್ಧಶತಕ ಎನಿಸಿಕೊಂಡಿತು. 2025ರಲ್ಲಿ ಜಿಂಬಾಬ್ವೆ ವಿರುದ್ಧ ನಮೀಬಿಯಾ ತಂಡ ಜಾನ್‌ ಫ್ರೈಲಿಂಕ್‌ ಕೂಡಾ ಇನ್ನಿಂಗ್ಸ್‌ನ 3.4 ಓವರ್‌ಗಳಲ್ಲೇ ಅರ್ಧಶತಕ ಬಾರಿಸಿದ್ದರು.

56 ರನ್‌: ಸಂಜು ಸ್ಯಾಮ್ಸನ್‌ ಅಂ.ರಾ. ಟಿ20ಯ ಪವರ್‌ಪ್ಲೇ ಓವರ್‌ಗಳಲ್ಲಿ 56 ರನ್‌ ಗಳಿಸಿದ್ದು ಭಾರತದ ಪರ 3ನೇ ಜಂಟಿ ಗರಿಷ್ಠ.

01 ಬಾರಿ: ಭಾರತ ತಂಡ ಭಾರತದಲ್ಲಿ ವಿಂಡೀಸ್‌ ವಿರುದ್ಧ ಟಿ20ಯಲ್ಲಿ ಚೇಸಿಂಗ್‌ ವೇಳೆ ಸೋತಿದ್ದು ಇದು ಮೊದಲ ಬಾರಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಎಸೆತದಲ್ಲಿ 12 ರನ್ ಬಿಟ್ಟುಕೊಟ್ಟ ಗಂಭೀರ್ ಶಿಷ್ಯ, ಬರ್ತ್‌ಡೇ ದಿನವೇ ಉಗಿದು ಉಪ್ಪಿನಕಾಯಿ ಹಾಕಿದ ಫ್ಯಾನ್ಸ್
W, W, W, W, W.. ಡಬಲ್ ಹ್ಯಾಟ್ರಿಕ್, ಒಂದೇ ಓವರ್‌ನಲ್ಲಿ 5 ವಿಕೆಟ್‌ಗಳು! ಆದರೂ ತಂಡಕ್ಕೆ ಅದೃಷ್ಟ ಇರಲಿಲ್ಲ