ರಣಜಿ ಟ್ರೋಫಿ: ಕರ್ನಾಟಕದ 3ನೇ ಪಂದ್ಯಕ್ಕೂ ಮಳೆ ಕಾಟ!

By Kannadaprabha News  |  First Published Oct 28, 2024, 8:54 AM IST

ಕರ್ನಾಟಕ ಹಾಗೂ ಬಿಹಾರ ನಡುವಿನ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗುವ ಲಕ್ಷಣ ಕಾಣುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಪಾಟ್ನಾ: ದಶಕಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ನನಸಾಗಲು ಮಳೆರಾಯ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಕರ್ನಾಟಕ ಹಾಗೂ ಬಿಹಾರ ನಡುವೆ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಭಾನುವಾರದ ಎರಡನೇ ದಿನದಾಟ ನಡೆಯಲಿಲ್ಲ.ನಗರದಲ್ಲಿ ಶನಿವಾರ ರಾತ್ರಿ ಮಳೆ ಸುರಿದಿತ್ತು. ಇದರಿಂದಾಗಿ ಪಾಟ್ನಾ ಕ್ರೀಡಾಂಗಣದಲ್ಲಿ ನೀರು ನಿಂತಿತ್ತು. ಭಾನುವಾರ ಮಳೆ ಇಲ್ಲದಿದ್ದರೂ ಮೈದಾನ ಒದ್ದೆಯಾಗಿದ್ದ ಕಾರಣ ಒಂದೂ ಎಸೆತ ಕಾಣದೆ ದಿನದಾಟ ರದ್ದುಗೊಂಡಿದೆ.

ಮೈದಾನದಲ್ಲಿನ ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಆಟ ಸಾಧ್ಯವಾಗಲಿಲ್ಲ. ಬೆಂಕಿ ಹಾಕಿ ಮೈದಾನ ಒಣಗಿಸುವ ಸಿಬ್ಬಂದಿಯ ಯತ್ನವೂ ವಿಫಲವಾಯಿತು. ಬಿಹಾರ 143ಕ್ಕೆ ಆಲೌಟಾಗಿದ್ದರೆ, ಕರ್ನಾಟಕ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿತ್ತು. ಈಗಾಗಲೇ ಕರ್ನಾಟಕದ ಮೊದಲೆರಡು ಪಂದ್ಯ ಮಳೆಯಿಂದಾಗಿ ಮೊದಲ ಇನ್ನಿಂಗ್ಸ್ ಕೂಡಾ ಮುಕ್ತಾಯಗೊಳ್ಳದೆ ಡ್ರಾ ಗೊಂಡಿದ್ದವು. ಸದ್ಯ ರಾಜ್ಯ ತಂಡ ಕೇವಲ 2 ಅಂಕ ಗಳಿಸಿ, 'ಸಿ' ಗುಂಪಿನಲ್ಲಿ 6ನೇ ಸ್ಥಾನದಲ್ಲಿದೆ.

Latest Videos

undefined

ಮಹಿಳಾ ಏಕದಿನ: ಕಿವೀಸ್ ವಿರುದ್ಧ ಭಾರತಕ್ಕೆ ಸೋಲು

ಅಹಮದಾಬಾದ್‌: ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 76 ರನ್ ಸೋಲನುಭವಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಕಿವೀಸ್ 1-1ರಲ್ಲಿ ಸಮಬಲ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಕಿವೀಸ್ 9 ವಿಕೆಟ್ ನಷ್ಟದಲ್ಲಿ 260 ರನ್ ಕಲೆಹಾಕಿತು. ಸುಜೀ ಬೇಟ್ಸ್ 58, ಜಾರ್ಜಿಯಾ ಫಿಮ್ಮರ್ 41, ನಾಯಕಿ ಸೋಫಿ ಡಿವೈನ್ 79, ಮ್ಯಾಡ್ರಿ ಗ್ರೀನ್ 42 ರನ್ ಕಲೆಹಾಕಿದರು. ಭಾರತದ ರಾಧಾ ಯಾದವ್ 4, ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರು.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ರೀಟೈನ್ ಆಟಗಾರರ ಲಿಸ್ಟ್ ಔಟ್?

ದೊಡ್ಡ ಗುರಿ ಬೆನ್ನತ್ತಿದ ಭಾರತ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ 47.1 ಓವರ್‌ಗಳಲ್ಲಿ 183 ರನ್‌ಗೆ ಆಲೌಟಾಯಿತು. ಅಗ್ರ -8 ಬ್ಯಾಟರ್‌ಗಳ ಪೈಕಿ ಯಾರೊಬ್ಬರೂ 25ರ ಗಡಿ ದಾಟಲಿಲ್ಲ. 108ಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದ ರಾಧಾ ಯಾದವ್ (48), ಸೈಮಾ ಠಾಕೂರ್ (29) ಸೋಲಿನ ಅಂತರ ತಗ್ಗಿಸಿದರು.

ಸ್ಕೋರ್: 
ನ್ಯೂಜಿಲೆಂಡ್ 50 ಓವರಲ್ಲಿ 259/9 (ಸೋಫಿ 79, ಸುಜೀ 58, ರಾಧಾ 4-69)
ಭಾರತ 47.1 ಓವರಲ್ಲಿ 183/10 (ರಾಧಾ 48, ಸೈಮಾ 29, ಸೋಫಿ 3/27)

17ನೇ ಐಪಿಎಲ್‌ನಲ್ಲಿ ಆಡುವ ಬಗ್ಗೆ ಸುಳಿವು ನೀಡಿದ ಧೋನಿ

ನವದೆಹಲಿ: ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ 2025ರ ಐಪಿಎಲ್‌ನಲ್ಲಿ ಆಡುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ 43 ವರ್ಷದ ಧೋನಿ, ‘ನನಗೆ ಸಾಮರ್ಥ್ಯವಿರುವಷ್ಟು ಕೆಲ ವರ್ಷಗಳ ಕ್ರಿಕೆಟ್‌ಅನ್ನು ಆನಂದಿಸಲು ಬಯಸುತ್ತೇನೆ. ಬಾಲ್ಯದಲ್ಲಿ ಸಂಜೆ 4 ಗಂಟೆಗೆ ಆಟವಾಡಲು ಹೋಗುತ್ತಿದ್ದೆವು ಮತ್ತು ಆಟವನ್ನು ಆನಂದಿಸುತ್ತಿದ್ದೆವು. ಆದರೆ ವೃತ್ತಿಪರ ಕ್ರೀಡೆಯಲ್ಲಿದ್ದಾಗ ಕ್ರಿಕೆಟ್‌ಅನ್ನು ಆನಂದಿಸಲು ಕಷ್ಟವಾಗುತ್ತದೆ. ಈಗ ನಾನು ಅದನ್ನೇ ಮಾಡಲು ಬಯಸುತ್ತೇನೆ’ ಎಂದಿದ್ದಾರೆ. 

ಮೊಹಮ್ಮದ್ ಶಮಿಗೆ ಈಗಲೂ ಬಾರ್ಡರ್-ಗವಾಸ್ಕರ್‌ ಸರಣಿಗೆ ಭಾರತ ತಂಡ ಕೂಡಿಕೊಳ್ಳಬಹುದು, ಆದ್ರೆ ಒಂದು ಕಂಡೀಷನ್!

ಇನ್ನು ಫಿಟ್‌ನೆಸ್‌ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿರುವ ಅವರು, ಎರಡೂವರೆ ತಿಂಗಳು ಐಪಿಎಲ್‌ ಆಡಲು 9 ತಿಂಗಳು ಫಿಟ್ನೆಸ್‌ ಕಾಯ್ದುಕೊಳ್ಳಬೇಕಾಗುತ್ತೆ’ ಎಂದು ಹೇಳಿದ್ದಾರೆ.
 

click me!