Ranji Trophy: ಮೊದಲ ದಿನ ಜಾರ್ಖಂಡ್ ಎದುರು ಕರ್ನಾಟಕ ಮೇಲುಗೈ

By Naveen KodaseFirst Published Jan 25, 2023, 9:05 AM IST
Highlights

ರಣಜಿ ಟ್ರೋಫಿ ಟೂರ್ನಿಯಲ್ಲಿ ಮತ್ತೊಮ್ಮೆ ಉತ್ತಮ ಆರಂಭ ಪಡೆದ ಕರ್ನಾಟಕ
ಜಾರ್ಖಂಡ್ ತಂಡವನ್ನು ಮೊದಲ ದಿನವೇ ಆಲೌಟ್ ಮಾಡಿದ ರಾಜ್ಯ ತಂಡ
ಕ್ವಾರ್ಟರ್‌ ಫೈನಲ್ ಪ್ರವೇಶದ ಹೊಸ್ತಿಲಲ್ಲಿದೆ ಮಯಾಂಕ್‌ ಅಗರ್‌ವಾಲ್ ಪಡೆ

ಜಮ್ಶೆಡ್‌ಪುರ(ಜ.25): ರಣಜಿ ಟ್ರೋಫಿ ಗುಂಪು ಹಂತದ ಕೊನೆ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ ಕರ್ನಾಟಕ ಮೊದಲ ದಿನವೇ ಮೇಲುಗೈ ಸಾಧಿಸಿದ್ದು, ಇನ್ನಿಂಗ್‌್ಸ ಮುನ್ನಡೆ ನಿರೀಕ್ಷೆಯಲ್ಲಿದೆ. ಆತಿಥೇಯ ತಂಡವನ್ನು 164ಕ್ಕೆ ನಿಯಂತ್ರಿಸಿದ ರಾಜ್ಯ ತಂಡ ಮೊದಲ ದಿನದಂದತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 80 ರನ್‌ ಗಳಿಸಿದ್ದು, ಇನ್ನು 84 ರನ್‌ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆದರೆ ಸಾಕು ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದೆ.

ಜಾರ್ಖಂಡ್‌ ರಾಜ್ಯದ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿ ಆರಂಭಿಕ ಕುಸಿತಕ್ಕೊಳಗಾಯಿತು. ವಿಕೆಟ್‌ ನಷ್ಟವಿಲ್ಲದೆ 30 ರನ್‌ ಗಳಿಸಿದ್ದ ತಂಡ 95ಕ್ಕೆ 6 ವಿಕೆಟ್‌ ಕಳೆದುಕೊಂಡಿತು. ಕೆಳ ಕ್ರಮಾಂಕದ ಅಲ್ಪಸ್ವಲ್ಪ ಹೋರಾಟ ತಂಡದ ಮೊತ್ತ 150ರ ಗಡಿ ದಾಟಿಸಿತು. ರಾಜ್ಯದ ಪರ ಕೆ.ಗೌತಮ್‌ 4, ಶ್ರೇಯಸ್‌ ಗೋಪಾಲ್‌ 3 ವಿಕೆಟ್‌ ಕಿತ್ತರು. ಬಳಿಕ ಇನ್ನಿಂಗ್‌್ಸ ಆರಂಭಿಸಿದ ರಾಜ್ಯ ತಂಡವೂ ಆರಂಭಿಕರನ್ನು ಬೇಗನೇ ಕಳೆದುಕೊಂಡಿತು. ಈ ಋುತುವಿನಲ್ಲಿ ತಲಾ 500 ರನ್‌ ಸಿಡಿಸಿರುವ ನಾಯಕ ಮಯಾಂಕ್‌ ಅಗರ್‌ವಾಲ್‌(20), ಆರ್‌.ಸಮರ್ಥ್(31) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದೇವದತ್‌ ಪಡಿಕ್ಕಲ್‌(20), ನಿಕಿನ್‌ ಜೋಸ್‌(08) 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: 
ಜಾರ್ಖಂಡ್‌ 164/10(ಕುಶಾಗ್ರ 37, ಗೌತಮ್‌ 4-61, ಶ್ರೇಯಸ್‌ 3-18) 
ಕರ್ನಾಟಕ 80/2(ಸಮರ್ಥ್ 31, ಮಯಾಂಕ್‌ 20, ಪಡಿಕ್ಕಲ್‌ 20*, ಅಂಕುಲ್‌ 1-12)

ಕೇದಾರ್ ಜಾಧವ್ ಶತಕ, ಬೃಹತ್ ಮೊತ್ತದತ್ತ ಮಹಾರಾಷ್ಟ್ರ

ಮುಂಬೈ: ಖಾತೆ ತೆರೆಯುವ ಮುನ್ನವೇ ಪವನ್ ಶಾ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಮಹಾರಾಷ್ಟ್ರ ತಂಡವು ಮುಂಬೈ ಎದುರು ಮೊದಲ ಇನಿಂಗ್ಸ್‌ನ ಮೊದಲ ದಿನದಾಟದ ಅಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 314 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. 

Ranji Trophy: ಕರ್ನಾಟಕ ಎದುರು ಟಾಸ್ ಗೆದ್ದ ಜಾರ್ಖಂಡ್ ಬ್ಯಾಟಿಂಗ್ ಆಯ್ಕೆ

ಅನುಭವಿ ಕ್ರಿಕೆಟಿಗ ಕೇದಾರ್ ಜಾಧವನ್ ಬಾರಿಸಿದ ಸಮಯೋಚಿತ ಶತಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ಸೌರಭ್ ನವಾಲೆ ಬಾರಿಸಿದ ಅಜೇಯ ಅರ್ಧಶತಕದ(56) ನೆರವಿನಿಂದ ತಂಡ ಮುನ್ನೂರರ ಗಡಿ ದಾಟಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಕೇದಾರ್ ಜಾಧವ್ 168 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 128 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಆರಂಭಿಕ ಬ್ಯಾಟರ್ ಸಿದ್ದೇಶ್ ವೀರ್ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಸೌರಭ್ ನವಾಲೆ ಅಜೇಯ 56 ರನ್ ಹಾಗೂ ಅಕ್ಷಯ್ ಪಾಲ್ಕರ್ 32 ರನ್ ಬಾರಿಸಿದ್ದು, ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 

ನಾಗಾಲ್ಯಾಂಡ್ ಎದುರು ಬರೋಡಾ ಬೃಹತ್ ಮೊತ್ತ: 

ವಡೋದರಾ: ರಣಜಿ ಟ್ರೋಫಿ ಟೂರ್ನಿಯ ಎಲೈಟ್ 'ಎ' ಗುಂಪಿನಲ್ಲಿ ನಾಯಕ ವಿಷ್ಣು ಸೋಲಂಕಿ(161*) ಬಾರಿಸಿದ ಅಜೇಯ ಶತಕ ಹಾಗೂ ನಿನಾದ್ ರತ್ವಾ ಬಾರಿಸಿದ ಸ್ಪೋಟಕ ಶತಕ(143)ದ ನೆರವಿನಿಂದ ನಾಗಾಲ್ಯಾಂಡ್ ಎದುರು ಬರೋಡಾ ತಂಡವು ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ. ಮೊದಲ ದಿನದಾಟದಂತ್ಯದ ವೇಳೆಗೆ ಬರೋಡಾ ತಂಡವು 5 ವಿಕೆಟ್ ಕಳೆದುಕೊಂಡು 420 ರನ್ ಬಾರಿಸಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಡುತ್ತಿದೆ.

ಬರೋಡಾ ತಂಡದ ಪರ ನಾಯಕ ವಿಷ್ಣು ಸೋಲಂಕಿ 236 ಎಸೆತಗಳನ್ನು ಎದುರಿಸಿ 18 ಬೌಂಡರಿ ಸಹಿತ ಅಜೇಯ 161 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಅತೀತ್ ಸೇಠ್ 72 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 61 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
 

click me!