ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ: ಹರ್ಮನ್‌ಪ್ರೀತ್ ಕೌರ್ ತಲೆದಂಡ?

By Naveen KodaseFirst Published Oct 17, 2024, 10:38 AM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗ್ರೂಪ್ ಹಂತದಲ್ಲೇ ಹೊರಬಿದ್ದ ಬೆನ್ನಲ್ಲೇ ಹರ್ಮನ್‌ಪ್ರೀತ್ ತಲೆದಂಡಕ್ಕೆ ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದ ಭಾರತ ಮಹಿಳಾ ತಂಡದ ಪ್ರದರ್ಶನದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದ್ದು, ಸದ್ಯದಲ್ಲೇ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಬಿಸಿಸಿಐ, ಆಯ್ಕೆ ಸಮಿತಿ ಸದಸ್ಯರು ಹಾಗೂ ಪ್ರಧಾನ ಕೋಚ್‌ ಅಮೋಲ್‌ ಮಜುಂದಾರ್‌ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಭಾರತ ನಾಕೌಟ್‌ ಹಂತ ಪ್ರವೇಶಿಸಲು ವಿಫಲವಾಗಿದ್ದು, ಟ್ರೋಫಿ ಬರ ಈ ಸಲವೂ ನೀಗಲಿಲ್ಲ. ಇತ್ತೀಚೆಗೆ ಏಷ್ಯಾಕಪ್‌ನಲ್ಲೂ ಭಾರತ ಎಡವಿತ್ತು. ಹೀಗಾಗಿ, ಹರ್ಮನ್‌ಪ್ರೀತ್‌ರ ನಾಯಕತ್ವದ ಬಗ್ಗೆ ಕೆಲ ಪ್ರಶ್ನೆಗಳು ಮೂಡಿದ್ದು, ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಭಾರತೀಯ ಕ್ರಿಕೆಟ್‌ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Latest Videos

ಬೆಂಗಳೂರು ಟೆಸ್ಟ್‌: ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ತಂಡದಲ್ಲಿ 2 ಮೇಜರ್ ಚೇಂಜ್

ರಾಷ್ಟ್ರೀಯ ತಂಡದ ಉಪನಾಯಕಿ, ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಸ್ಮೃತಿ ಮಂಧನಾಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚು.

ಆಸೀಸ್‌ಗೆ 8ನೇ ಫೈನಲ್ ಗುರಿ!

ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿದ್ದು, ಗುರುವಾರ ಮೊದಲ ಸೆಮಿಫೈನಲ್‌ನಲ್ಲಿ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. 2009ರ ಉದ್ಘಾಟನಾ ಆವೃತ್ತಿಯಿಂದ ಈ ವರೆಗೂ ಎಲ್ಲಾ 9 ಆವೃತ್ತಿಗಳಲ್ಲೂ ಆಸ್ಟ್ರೇಲಿಯಾ ಸೆಮಿಫೈನಲ್ ವರೆಗೂ ಸಾಗಿ ಬಂದಿದ್ದು, ಇದೀಗ 8ನೇ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

2023ರ ಟಿ20 ವಿಶ್ವಕಪ್‌ನ ಸೆಮೀಸ್‌ನಲ್ಲೂ ಆಸ್ಟ್ರೇಲಿಯಾಕ್ಕೆ ದಕ್ಷಿಣ ಆಫ್ರಿಕಾವೇ ಎದುರಾಗಿತ್ತು. ಆ ಪಂದ್ಯವನ್ನು ಆಸೀಸ್ 19 ರನ್‌ಗಳಿಂದ ಗೆದ್ದು ಫೈನಲ್‌ಗೇರಿತ್ತು. ಅಂಕಿ-ಅಂಶಗಳನ್ನು ಗಮನಿಸಿದಾಗ, ಉಭಯ ತಂಡಗಳ ನಡುವಿನ ಮುಖಾಮುಖಿ ಯಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 10 ಪಂದ್ಯಗಳಲ್ಲಿ 9ರಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. 

2024ರ ಮೊದಲ ಟೆಸ್ಟ್ ಫಿಫ್ಟಿ ಮೇಲೆ ಕೊಹ್ಲಿ ಕಣ್ಣು; ಅಪರೂಪದ ರೆಕಾರ್ಡ್ ಹೊಸ್ತಿಲಲ್ಲಿ ವಿರಾಟ್!

ಇನ್ನು ಟಿ20 ವಿಶ್ವಕಪ್‌ಗಳಲ್ಲಿ ಉಭಯ ತಂಡಗಳು 7 ಪಂದ್ಯಗಳಲ್ಲಿ ಪರಸ್ಪರ ಸೆಣಸಿದ್ದು, ಎಲ್ಲಾ 7ರಲ್ಲೂ ಆಸೀಸ್ ಜಯಭೇರಿ ಬಾರಿಸಿದೆ. ಮೇಲ್ನೋಟಕ್ಕೆ ಆಸ್ಟ್ರೇಲಿಯಾ ತಂಡವೇ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸುತ್ತಿದ್ದರೂ, ದಕ್ಷಿಣ ಆಫ್ರಿಕಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಪಂದ್ಯ ಆರಂಭ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

2ನೇ ಟೆಸ್ಟ್: ಇಂಗ್ಲೆಂಡ್‌ ಬೆನ್ ಡಕೆಟ್ ಶತಕದ ಆಸರೆ

ಮುಲ್ತಾನ್: ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಡಕೆಟ್‌ರ ಶತಕ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದೆ. ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 259 ರನ್ ಗಳಿಸಿದ್ದ ಪಾಕಿಸ್ತಾನ, ಮೊದಲ ಇನ್ನಿಂಗ್ಸ್‌ಲ್ಲಿ 366 ರನ್‌ಗೆ ಆಲೌಟ್ ಆಯಿತು.

ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದ್ದು, ಇನ್ನೂ 127 ರನ್ ಹಿನ್ನಡೆಯಲ್ಲಿದೆ. 211 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ದಿಢೀರನೆ ಕುಸಿತ ಕಂಡು 28 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ಡಕೆಟ್ 129 ಎಸೆತದಲ್ಲಿ 119 ರನ್ ಗಳಿಸಿ ಔಟಾದರು.
 

click me!