
ಕೋಲ್ಕತಾ(ಫೆ.29): ಕರ್ನಾಟಕ- ಬಂಗಾಳ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ. ಇನ್ನು ಇದೇ ಮೊದಲ ಬಾರಿಗೆ ರಣಜಿ ಟೂರ್ನಿಯಲ್ಲಿ ಡಿಆರ್‌ಎಸ್ ಬಳಸುತ್ತಿದ್ದು, ಕರ್ನಾಟಕ ಡಿಆರ್‌ಎಸ್‌ನ ಮೂಲಕ ಮೊದಲ ವಿಕೆಟ್ ಗಳಿಸಿದೆ.
ರಣಜಿ ಟ್ರೋಫಿ: ಸೆಮಿಫೈನಲ್ ಫೈಟ್‌ಗೆ ಸಜ್ಜಾದ ಕರ್ನಾಟಕ
ಇಲ್ಲಿನ ಈಡನ್‌ಗಾರ್ಡನ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರುಣ್ ನಾಯರ್ ಫೀಲ್ಡಿಂಗ್ ಆಯ್ದುಕೊಂಡರು. ರಾಜ್ಯ ತಂಡ 7 ಜನ ಬ್ಯಾಟ್ಸ್‌ಮನ್ ಹಾಗೂ ನಾಲ್ಕು ಜನ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದೆ. ಇದೇ ಮೊದಲ ಬಾರಿಗೆ ಡಿಆರ್‌ಎಸ್ ಬಳಸುತ್ತಿದ್ದು, ಮಿಥುನ್ ಮೊದಲ ವಿಕೆಟ್ ಕಬಳಿಸಿದ್ದಾರೆ. ಮೂರನೇ ಓವರ್‌ನಲ್ಲಿ ಅಭಿಮನ್ಯು ಮಿಥುನ್ ಬೌಲಿಂಗ್‌ನಲ್ಲಿ ಅಭಿಷೇಕ್ ರಾಮನ್ ಬ್ಯಾಟ್ ಸವರಿದ ಚೆಂಡು ಶರತ್ ಕೈಸೇರಿತು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಬಳಿಕ ನಾಯಕ ಕರುಣ್ ನಾಯರ್ ಡಿಆರ್‌ಎಸ್ ಮೊರೆ ಹೋದರು. ಮೂರನೇ ಅಂಪೈರ್ ಔಟ್ ತೀರ್ಮಾನವಿತ್ತರು. ಈ ಮೂಲಕ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಡಿಆರ್‌ಎಸ್ ಬಳಸಿ ಯಶಸ್ವಿಯಾದ ತಂಡ ಎನ್ನುವ ಗೌರವಕ್ಕೆ ಕರ್ನಾಟಕ ಭಾಜನವಾಗಿದೆ.
ಕರ್ನಾಟಕ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜೆ ಸುಚಿತ್ ಬದಲಿಗೆ ಕೆ.ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಬಲಿಷ್ಠ ಏಳು ಜನ ಬ್ಯಾಟ್ಸ್‌ಮನ್‌ಗಳು, ಮೂವರು ವೇಗಿಗಳು ಹಾಗೂ ಒಬ್ಬರು ತಜ್ಞ ಸ್ಪಿನ್ನರ್‌ನೊಂದಿಗೆ ಕರ್ನಾಟಕ ಕಣಕ್ಕಿಳಿದಿದೆ.
ಕರ್ನಾಟಕ ತಂಡ ಹೀಗಿದೆ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.