Ranji Trophy: ರಾಜಸ್ಥಾನ ಎದುರು ಕರ್ನಾಟಕ 10 ವಿಕೆಟ್‌ ಜಯಭೇರಿ

Published : Jan 13, 2023, 09:23 AM IST
Ranji Trophy: ರಾಜಸ್ಥಾನ ಎದುರು ಕರ್ನಾಟಕ 10 ವಿಕೆಟ್‌ ಜಯಭೇರಿ

ಸಾರಾಂಶ

* ಮುಂದುವರೆದ ಕರ್ನಾಟಕ ತಂಡದ ಜಯದ ನಾಗಾಲೋಟ * ರಾಜಸ್ಥಾನ ವಿರುದ್ದ 10 ವಿಕೆಟ್‌ಗಳ ಜಯ ಕಂಡ ಕರ್ನಾಟಕ ತಂಡ * ರಣಜಿ ಕ್ರಿಕೆಟ್‌ನಲ್ಲಿ 20ನೇ ಶತಕ ಸಿಡಿಸಿದ ಮನೀಶ್ ಪಾಂಡೆ

ಬೆಂಗಳೂರು(ಜ.13): 2022-23ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ 3ನೇ ಗೆಲುವು ಸಾಧಿಸಿದ್ದು, ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಟೂರ್ನಿಯ 5ನೇ ಪಂದ್ಯದಲ್ಲಿ ಗುರುವಾರ ರಾಜ್ಯ ತಂಡ ರಾಜಸ್ಥಾನ ವಿರುದ್ಧ 10 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಬೋನಸ್‌ ಸೇರಿ 7 ಅಂಕ ಸಂಪಾದಿಸಿದ ಕರ್ನಾಟಕ ಒಟ್ಟು 26 ಅಂಕಗಳನ್ನು ಹೊಂದಿದ್ದು, ಕ್ವಾರ್ಟರ್‌ಫೈನಲ್‌ ಸ್ಥಾನದತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ರಾಜಸ್ಥಾನ ಕೇವಲ 1 ಗೆಲುವಿನೊಂದಿಗೆ 14 ಅಂಕಗಳನ್ನಷ್ಟೇ ಹೊಂದಿದೆ.

ರಾಜ್ಯಕ್ಕೆ ಇನ್ನಿಂಗ್‌್ಸ ಜಯ ಕೈತಪ್ಪಿದರೂ, ಕೇವಲ 15 ರನ್‌ ಗುರಿ ಪಡೆದು 5 ಓವರಲ್ಲಿ ಬೆನ್ನತ್ತಿ ಜಯಗಳಿಸಿತು. ಇದಕ್ಕೂ ಮೊದಲು 2ನೇ ದಿನ 8 ವಿಕೆಟ್‌ಗೆ 380 ರನ್‌ ಕಲೆ ಹಾಕಿದ್ದ ರಾಜ್ಯ ತಂಡ ಗುರುವಾರ 445ಕ್ಕೆ ಆಲೌಟಾಯಿತು. 75 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಮನೀಶ್‌ ಪಾಂಡೆ(101) ರಣಜಿಯಲ್ಲಿ 20ನೇ ಶತಕ ಪೂರ್ತಿಗೊಳಿಸಿ ಔಟಾದರು. 316 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ರಾಜಸ್ಥಾನ 330ಕ್ಕೆ ಆಲೌಟಾಯಿತು.

ಸೋಲಿನಲ್ಲೂ ಭಾರತವನ್ನು ಹಿಂದಿಕ್ಕಿದ ಶ್ರೀಲಂಕಾ, ಏಕದಿನದಲ್ಲಿ ಸಿಂಹಳೀಯರಿಗೆ ಅಪಖ್ಯಾತಿ!

ಸ್ಕೋರ್‌: 
ರಾಜಸ್ಥಾನ 129/10, ಮತ್ತು 330/10(ಲೊಮ್ರೊರ್‌ 99, ವೈಶಾಖ್‌ 4-73, ಗೌತಮ್‌ 3-72), 
ಕರ್ನಾಟಕ 445/10 (ಪಾಂಡೆ 101, ಸುತಾರ್‌ 4-132) ಮತ್ತು 15/0

ಮನೀಶ್‌ 6000 ರನ್‌: ರಾಜ್ಯದ 3ನೇ ಬ್ಯಾಟರ್‌

ರಣಜಿ ಟ್ರೋಫಿಯಲ್ಲಿ 6,000 ರನ್‌ ಪೂರೈಸಿದ ಮನೀಶ್‌ ಪಾಂಡೆ ಈ ಸಾಧನೆ ಮಾಡಿದ ಕರ್ನಾಟಕದ 3ನೇ ಬ್ಯಾಟರ್‌ ಎನಿಸಿಕೊಂಡರು. ಅವರು 82 ಪಂದ್ಯಗಳ 131 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದರು. ಬ್ರಿಜೇಶ್‌ ಪಟೇಲ್‌(131 ಇನ್ನಿಂಗ್‌್ಸ), ರಾಬಿನ್‌ ಉತ್ತಪ್ಪ(147 ಇನ್ನಿಂಗ್‌್ಸ) ಸಹ 6000 ರನ್‌ ದಾಖಲಿಸಿದ್ದರು.

ಪೃಥ್ವಿ ಶಾ 379 ರನ್‌: ರಣಜಿಯಲ್ಲಿ 2ನೇ ಗರಿಷ್ಠ

ಮುಂಬೈ: ಮುಂಬೈನ ಯುವ ಬ್ಯಾಟರ್‌ ಪೃಥ್ವಿ ಶಾ ಬುಧವಾರ ರಣಜಿ ಟ್ರೋಫಿ ಕ್ರಿಕೆಟ್‌ ಇತಿಹಾಸದಲ್ಲಿ 2ನೇ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಅಸ್ಸಾಂ ವಿರುದ್ಧ 23 ವರ್ಷದ ಶಾ 383 ಎಸೆತಗಳಲ್ಲಿ 49 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 379 ರನ್‌ ಗಳಿಸಿ ಔಟಾದರು. ಇದು ರಣಜಿ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತೀಯರ ಪೈಕಿ 2ನೇ ಗರಿಷ್ಠ ಮೊತ್ತ. 1948ರಲ್ಲಿ ಮಹಾರಾಷ್ಟ್ರದ ಬಾವುಸಾಹೆಬ್‌ ನಿಂಬಾಳ್ಕರ್‌ ಅವರು ಕಾಥಿಯಾವಾಡ ವಿರುದ್ಧ 443 ರನ್‌ ಸಿಡಿಸಿದ್ದು ಈಗಲೂ ದಾಖಲೆಯಾಗಿ ಉಳಿದಿದೆ. ಸಂಜಯ್‌ ಮಾಂಜ್ರೇಕರ್‌ ಮುಂಬೈ ಪರ ಗಳಿಸಿದ್ದ 377 ರನ್‌ ದಾಖಲೆಯನ್ನು ಶಾ ಮುರಿದರು. ಅಲ್ಲದೆ ರಣಜಿ ಟ್ರೋಫಿಯ ಇನ್ನಿಂಗ್‌್ಸನಲ್ಲಿ 350ಕ್ಕೂ ಹೆಚ್ಚು ರನ್‌ ಸಿಡಿಸಿದ 9ನೇ ಬ್ಯಾಟರ್‌ ಎನಿಸಿಕೊಂಡರು.

ರೋಹಿತ್‌, ಸೆಹ್ವಾಗ್‌ ಸಾಲಿಗೆ ಶಾ: ಪೃಥ್ವಿ ಶಾ ಅವರು ರೋಹಿತ್‌ ಶರ್ಮಾ, ವೀರೇಂದ್ರ ಸೆಹ್ವಾಗ್‌ ಬಳಿಕ ಟಿ20ಯಲ್ಲಿ ಶತಕ, ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ದ್ವಿಶತಕ, ಪ್ರಥಮ ದರ್ಜೆಯಲ್ಲಿ ತ್ರಿಶತಕ ಸಿಡಿಸಿದ ಭಾರತೀಯ ಬ್ಯಾಟರ್‌ ಎಂಬ ಖ್ಯಾತಿಗೆ ಪಾತ್ರರಾದರು. ಅವರು 3ನೇ ವಿಕೆಟ್‌ಗೆ ಅಜಿಂಕ್ಯ ರಹಾನೆ(191) ಜೊತೆ 401 ರನ್‌ ಜೊತೆಯಾಟವಾಡಿದರು. ತಂಡ 4ಕ್ಕೆ 687 ರನ್‌ ಸಿಡಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಅಂಧ ಮಹಿಳೆಯರ ಟಿ20: ಕರ್ನಾಟಕ ಫೈನಲ್‌ಗೆ

ಬೆಂಗಳೂರು: 3ನೇ ಆವೃತ್ತಿಯ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 3ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಗುರುವಾರ ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಡೆಲ್ಲಿ ವಿರುದ್ಧ 10 ವಿಕೆಟ್‌ ಗೆಲುವು ದಾಖಲಿಸಿತು. ಡೆಲ್ಲಿ ನೀಡಿದ 99 ರನ್‌ ಗುರಿಯನ್ನು ಕರ್ನಾಟಕ 8 ಓವರಲ್ಲಿ ತಲುಪಿತು. ಶುಕ್ರವಾರ ಫೈನಲ್‌ನಲ್ಲಿ ರಾಜ್ಯ ತಂಡ ಒಡಿಶಾ ವಿರುದ್ಧ ಸೆಣಸಲಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ