ರಣಜಿ ಫೈನಲ್: ಮಯಾಂಕ್ ಅಗರ್‌ವಾಲ್ ಕೆಚ್ಚೆದೆಯ ಶತಕ, ಜಮ್ಮು ಎದುರು ಮುಂದುವರೆದ ರಾಜ್ಯದ ಹೋರಾಟ

Kannadaprabha News   | Kannada Prabha
Published : Feb 27, 2026, 05:32 AM IST
Mayank Agarwal

ಸಾರಾಂಶ

ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಕರ್ನಾಟಕ ತಂಡವು ಸಂಕಷ್ಟಕ್ಕೆ ಸಿಲುಕಿದೆ. ಜಮ್ಮು 584 ರನ್‌ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ, ಮಯಾಂಕ್ ಅಗರ್ವಾಲ್ ಅವರ ಅಜೇಯ ಶತಕದ ಹೊರತಾಗಿಯೂ ಕರ್ನಾಟಕ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 220 ರನ್ ಗಳಿಸಿ 364 ರನ್‌ಗಳ ಹಿನ್ನಡೆಯಲ್ಲಿದೆ.

ಅಜೀಜಅಹ್ಮದ ಬಳಗಾನೂರ, ಕನ್ನಡಪ್ರಭ

ಹುಬ್ಬಳ್ಳಿ: 11 ವರ್ಷಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ನನಸಾಗುವ ಸಾಧ್ಯತೆ ಕ್ಷೀಣಿಸಿದೆ. ಜಮ್ಮು-ಕಾಶ್ಮೀರ ವಿರುದ್ಧ ಫೈನಲ್‌ನಲ್ಲಿ ಕರ್ನಾಟಕ ಕುಸಿದಿದ್ದು, ಇನ್ನಿಂಗ್ಸ್‌ ಮುನ್ನಡೆಗಾಗಿ ತೀವ್ರ ಹೋರಾಟ ನಡೆಸುತ್ತಿದೆ. ಕರ್ನಾಟಕ 3ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 220 ರನ್‌ ಕಲೆಹಾಕಿದೆ. ತಂಡ ಇನ್ನೂ 364 ರನ್‌ ಹಿನ್ನಡೆಯಲ್ಲಿದೆ.

ಜಮ್ಮು-ಕಾಶ್ಮೀರ 527ಕ್ಕೆ ಆಲೌಟ್

2ನೇ ದಿನ 6 ವಿಕೆಟ್‌ಗೆ 527 ರನ್‌ ಗಳಿಸಿದ್ದ ಜಮ್ಮು-ಕಾಶ್ಮೀರ ಗುರುವಾರ 584 ರನ್‌ಗೆ ಆಲೌಟಾಯಿತು. ಪ್ರಸಿದ್ಧ್‌ ಕೃಷ್ಣ 5 ವಿಕೆಟ್‌ ಕಿತ್ತರು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕ ಎದುರಾಳಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮುಗ್ಗರಿಸಿತು. ಕೆ.ಎಲ್‌.ರಾಹುಲ್‌ 13 ರನ್‌ ಗಳಿಸಿ ಅಕಿಬ್‌ ನಬಿ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕನ್ಹಯ್ಯಗೆ ಕ್ಯಾಚ್‌ ನೀಡಿದರು. ನಾಯಕ ದೇವದತ್‌ ಪಡಿಕ್ಕಲ್‌ 10 ರನ್‌ ಗಳಿಸಿ ಸುನೀಲ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು.

ಈ ವೇಳೆ ತಂಡಕ್ಕೆ ಆಸರೆಯಾಗುವ ನಿರೀಕ್ಷೆ ಮೂಡಿಸಿದ್ದ ಕರುಣ್‌ ನಾಯರ್‌ ಹಾಗೂ ಆರ್‌.ಸ್ಮರಣ್‌ಗೆ ಅಕಿಬ್‌ ನಬಿ ಪೆವಿಲಿಯನ್‌ ಹಾರಿ ತೋರಿದರು. ಇವರಿಬ್ಬರನ್ನು ಸತತ 2 ಎಸೆತಗಳಲ್ಲಿ ಔಟ್‌ ಮಾಡಿದ ನಬಿ, ಕರ್ನಾಟಕಕ್ಕೆ ಚೇತರಿಸಲಾಗದ ಪೆಟ್ಟು ನೀಡಿದರು. ಒಂದು ಹಂತದಲ್ಲಿ ತಂಡ 4 ವಿಕೆಟ್‌ಗೆ ಕೇವಲ 57 ರನ್‌ ಗಳಿಸಿತ್ತು.

ಶ್ರೇಯಸ್-ಮಯಾಂಕ್ ಶತಕದ ಜತೆಯಾಟ

ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ಶ್ರೇಯಸ್‌ ಗೋಪಾಲ್‌ ಮತ್ತು ಮಯಾಂಕ್‌. ಈ ಜೋಡಿ 5ನೇ ವಿಕೆಟ್‌ಗೆ 105 ರನ್‌ ಜತೆಯಾಟವಾಡಿತು. ಆದರೆ 49ನೇ ಓವರ್‌ನಲ್ಲಿ ತಂಡದ ಮೊತ್ತ 162 ಆಗಿದ್ದಾಗ, 27ರನ್‌ ಗಳಿಸಿದ್ದ ಶ್ರೇಯಸ್‌ ಔಟಾದರು. ನಂತರ ಮಯಾಂಕ್‌ ಜತೆಗೂಡಿದ ಕೃತಿಕ್‌ ಕೃಷ್ಟ, ಮುರಿಯದ 6ನೇ ವಿಕೆಟ್‌ಗೆ 68 ರನ್‌ ಸೇರಿಸಿದ್ದಾರೆ. 130 ರನ್‌ ಗಳಿಸಿದ ಮಯಾಂಕ್‌ ಹಾಗೂ 27 ರನ್‌ ಗಳಿಸಿರುವ ಕೃತಿಕ್‌ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಜಮ್ಮು-ಕಾಶ್ಮೀರ 173.1 ಓವರ್‌ಗಳಲ್ಲಿ 584/10 (ಸಾಹಿಲ್‌ 72, ಪ್ರಸಿದ್ಧ್‌ 5-98), ಕರ್ನಾಟಕ 69 ಓವರ್‌ಗಳಲ್ಲಿ 220/5 (3ನೇ ದಿನದಂತ್ಯಕ್ಕೆ) (ಮಯಾಂಕ್‌ 130*, ಕೃತಿಕ್ 27*, ಶ್ರೇಯಸ್‌ 27, ಆಕಿಬ್ 3-32)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL ಡೀಲ್‌ಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ವೆಸ್ಟ್‌ ಇಂಡೀಸ್‌? ಪಾಕ್‌ ಮಾಜಿ ಸ್ಪಿನ್ನರ್‌ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪ!
IND vs ZIM: T20 ವಿಶ್ವಕಪ್‌ನಲ್ಲಿ ಭಾರತದ ವಿಶ್ವರೂಪ; ಜಿಂಬಾಬ್ವೆ ಈ ಸೋಲನ್ನು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತದೆ!