IND vs ZIM: T20 ವಿಶ್ವಕಪ್‌ನಲ್ಲಿ ಭಾರತದ ವಿಶ್ವರೂಪ; ಜಿಂಬಾಬ್ವೆ ಈ ಸೋಲನ್ನು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತದೆ!

Published : Feb 26, 2026, 10:54 PM ISTUpdated : Feb 26, 2026, 10:58 PM IST
IND vs ZIM T20 2026

ಸಾರಾಂಶ

ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಅಭಿಷೇಕ್ ಶರ್ಮಾ ಅವರ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ, ಟಿ20 ವಿಶ್ವಕಪ್ ಇತಿಹಾಸದ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿತು.

ಭಾರತವು ಜಿಂಬಾಬ್ವೆಯನ್ನು 72 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಟೀಮ್ ಇಂಡಿಯಾ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಭಾರತದ ಗೆಲುವು ದಕ್ಷಿಣ ಆಫ್ರಿಕಾವನ್ನು ಸೆಮಿಫೈನಲ್‌ಗೆ ಅರ್ಹತೆ ಪಡೆಯುವಂತೆ ಮಾಡಿತು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 256 ರನ್‌ಗಳ ಐತಿಹಾಸಿಕ ಸ್ಕೋರ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಜಿಂಬಾಬ್ವೆ ಕೇವಲ 184 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಬ್ರಿಯಾನ್ ಬೆನೆಟ್ ಶತಕ ಗಳಿಸಿದರು ಆದರೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ

ಜಿಂಬಾಬ್ವೆ ವಿರುದ್ಧ ಭಾರತದ ರನ್ ಪರ್ವ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 256 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತವಾಗಿದ್ದು, ಪ್ರಸಕ್ತ ವಿಶ್ವಕಪ್‌ನ ಗರಿಷ್ಠ ಸ್ಕೋರ್ ಆಗಿದೆ. ಆರಂಭಿಕ ಆಘಾತಗಳ ನಡುವೆಯೂ ಭಾರತದ ಬ್ಯಾಟರ್‌ಗಳು ಅಬ್ಬರಿಸುವ ಮೂಲಕ ಜಿಂಬಾಬ್ವೆಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದ್ದಾರೆ.

ನಾಲ್ಕೇ ದಿನದಲ್ಲಿ ವೆಸ್ಟ್ ಇಂಡೀಸ್ ದಾಖಲೆ ಧೂಳೀಪಟ

ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧವೇ 254 ರನ್ ಗಳಿಸಿ ವಿಶ್ವ ದಾಖಲೆ ಬರೆದಿತ್ತು. ಆದರೆ, ಇಂದು ಭಾರತ ಆ ದಾಖಲೆಯನ್ನು ಮುರಿದು ಹಾಕಿದೆ. 2007ರಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ ಗಳಿಸಿದ್ದ 260 ರನ್‌ಗಳ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಭಾರತಕ್ಕೆ ಕೇವಲ 5 ರನ್‌ಗಳ ಕೊರತೆ ಉಂಟಾಯಿತು.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್‌ಗಳು

  • 260 ರನ್‌ಗಳು - ಶ್ರೀಲಂಕಾ (vs ಕೀನ್ಯಾ)
  • 256 ರನ್‌ಗಳು - ಭಾರತ (vs ಜಿಂಬಾಬ್ವೆ)
  • 254 ರನ್‌ಗಳು - ವೆಸ್ಟ್ ಇಂಡೀಸ್ (vs ಜಿಂಬಾಬ್ವೆ)
  • 235 ರನ್‌ಗಳು - ಐರ್ಲೆಂಡ್ (vs ಓಮನ್)

ಅಭಿಷೇಕ್ ಶರ್ಮಾ ಬ್ಯಾಟ್‌ನಿಂದ ರನ್ ಮಳೆ

ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಶೂನ್ಯಕ್ಕೆ ಔಟಾಗಿದ್ದ ಅಭಿಷೇಕ್ ಶರ್ಮಾ, ಇಂದು ಜಿಂಬಾಬ್ವೆ ವಿರುದ್ಧ ಅಕ್ಷರಶಃ ಘರ್ಜಿಸಿದ್ದಾರೆ. ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಅವರು 30 ಎಸೆತಗಳಲ್ಲಿ 55 ರನ್ ಸಿಡಿಸಿ ಭರ್ಜರಿ ಅರ್ಧಶತಕ ಪೂರೈಸಿದರು. ಇದು ಅವರ ವೃತ್ತಿಜೀವನದ ಸ್ಮರಣೀಯ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಹಾರ್ದಿಕ್-ತಿಲಕ್ ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್

ಅಭಿಷೇಕ್ ನಿರ್ಗಮನದ ನಂತರ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಜಿಂಬಾಬ್ವೆ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಕೇವಲ 31 ಎಸೆತಗಳಲ್ಲಿ 84 ರನ್‌ಗಳ ಸ್ಫೋಟಕ ಪಾಲುದಾರಿಕೆ ಹಂಚಿಕೊಂಡಿತು. ಹಾರ್ದಿಕ್ 23 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರೆ, ತಿಲಕ್ ವರ್ಮಾ ಕೇವಲ 16 ಎಸೆತಗಳಲ್ಲಿ 44 ರನ್ ಚಚ್ಚಿದರು. ಇಬ್ಬರೂ ಸೇರಿ ಒಟ್ಟು 8 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿ ಮೊತ್ತವನ್ನು 250ರ ಗಡಿ ದಾಟಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL ಡೀಲ್‌ಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ವೆಸ್ಟ್‌ ಇಂಡೀಸ್‌? ಪಾಕ್‌ ಮಾಜಿ ಸ್ಪಿನ್ನರ್‌ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪ!
ಚೆಪಾಕ್‌ ನೆಲದಲ್ಲಿ ಜಿಂಬಾಬ್ವೆ ಛಿದ್ರ ಮಾಡಿದ ಟೀಮ್‌ ಇಂಡಿಯಾ, ಸೆಮಿಫೈನಲ್‌ಗೆ ಈಗ ವಿಂಡೀಸ್‌ ಜೊತೆ ಫೈಟ್‌!