ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಿತ್ತ ಟೀಂ ಇಂಡಿಯಾ ಸ್ಟಾರ್; ದೇಸಿಯ ಟೂರ್ನಿಯಲ್ಲಿ ಮಿಂಚು, ಬೆರಗಾದ ಕ್ರಿಕೆಟ್ ಜಗತ್ತು

Published : Nov 02, 2026, 11:04 PM IST
Harsh Dubey

ಸಾರಾಂಶ

ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶದ ವಿರುದ್ಧ ವಿದರ್ಭ ತಂಡದ ಎಡಗೈ ಸ್ಪಿನ್ನರ್ ಹರ್ಷ ದುಬೆ ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಪಡೆದು ಸಂಚಲನ ಸೃಷ್ಟಿಸಿದ್ದಾರೆ. ಇವರ ಅದ್ಭುತ ಬೌಲಿಂಗ್ ದಾಳಿಗೆ ಮಧ್ಯಪ್ರದೇಶ 209 ರನ್‌ಗಳಿಗೆ ಆಲೌಟ್ ಆಗಿದೆ. ಪ್ರಸ್ತುತ ಇವರು ಎಸಿಸಿ ರೈಸಿಂಗ್ ಸ್ಟಾರ್ ಏಷ್ಯಾ ಕಪ್‌ ಟೂರ್ನಿಗೆ ಟೀಂ ಇಂಡಿಯಾ 'ಎ' ತಂಡಕ್ಕೆ ಆಯ್ಕೆಯಾಗಿದ್ದಾರೆ.

ದೇಸಿಯ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಬೌಲರ್‍‌ ಹರ್ಷ ದುಬೆ ಸಂಚಲನ ಸೃಷ್ಟಿಸಿದ್ದಾರೆ. ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 9 ವಿಕೆಟ್‌ಗಳನ್ನ ಕಿತ್ತಿದ್ದಾರೆ. ಅವರ ಸ್ಪಿನ್ ಮೋಡಿಗೆ ಇಡೀ ಕ್ರಿಕೆಟ್ ಜಗತ್ತು ಬೆರಗಾಗಿದೆ!

ಯಾವ ಪಂದ್ಯ ಅದು?

ಮಧ್ಯಪ್ರದೇಶ ಮತ್ತು ವಿದರ್ಭ ನಡುವೆ ಎಲೈಟ್ ಗ್ರೂಪ್ ಎ ರಣಜಿ ಟ್ರೋಫಿ ನಡೆಯುತ್ತಿದೆ. ಮಧ್ಯ ಪ್ರದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ದಿನ 66.1 ಓವರ್‌ಗಳನ್ನ ಎದುರಿಸಿ ಆಲೌಟ್ ಆಯಿತು. ಇದಕ್ಕೆ ಮುಖ್ಯ ಕಾರಣ ಹರ್ಷ ದುಬೆ. ವಿದರ್ಭದ ಎಡಗೈ ಸ್ಪಿನ್ನರ್ ದುಬೆ 23.1 ಓವರ್‌ಗಳನ್ನು ಎಸೆದು ಭರ್ಜರಿ ಪ್ರದರ್ಶನ ನೀಡಿದರು. ವಿದರ್ಭ ಪರ ಒಂಬತ್ತು ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದುಬೆ, 53 ರನ್‌ ಬಿಟ್ಟುಕೊಟ್ಟು 9 ವಿಕೆಟ್‌ ಪಡೆದರು. ಇದರಿಂದ ಮಧ್ಯಪ್ರದೇಶ 209 ರನ್‌ಗಳಿಗೆ ಆಲೌಟ್ ಆಯಿತು.

ಅಥರ್ವ ಮಹಾಜನ್ 123 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 85 ರನ್ ಗಳಿಸಿ ಮಧ್ಯಪ್ರದೇಶದ ಪರ ಗರಿಷ್ಠ ಸ್ಕೋರರ್ ಆದರು. ಸರಾಂಶ್ ಜೈನ್ 41 ಎಸೆತಗಳಲ್ಲಿ 34 ರನ್ ಗಳಿಸಿ ಉಪಯುಕ್ತ ಪ್ರದರ್ಶನ ನೀಡಿದರು. ಕೊನೆಯಲ್ಲಿ ಅವೇಶ್ ಖಾನ್ 13 ರನ್ ಗಳಿಸಿ ಅಜೇಯರಾಗಿ ಉಳಿದರು. ವಿದರ್ಭ ತಂಡದ ಪರ ದುಬೆ ಒಂಬತ್ತು ವಿಕೆಟ್ ಪಡೆದರೆ, ನಚಿಕೇತ್ ಭೂಟೆ ಉಳಿದ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇದಕ್ಕೆ ಉತ್ತರವಾಗಿ ವಿದರ್ಭ ತಂಡವು ಮಧ್ಯಪ್ರದೇಶದ ಬೌಲಿಂಗ್ ದಾಳಿಯ ವಿರುದ್ಧವೂ ಹೋರಾಡಿ ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 56 ರನ್ ಗಳಿಸಿದೆ. 153 ರನ್‌ಗಳ ಹಿನ್ನಡೆ ಅನುಭವಿಸಿರುವ ವಿದರ್ಭ ತಂಡ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ನಾಯಕ ಅಕ್ಷಯ್ ವಾಡ್ಕರ್ 9 ರನ್, ಧ್ರುವ್ ಶೋರೆ 56 ಎಸೆತಗಳಲ್ಲಿ 21 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಧ್ಯಪ್ರದೇಶದ ಎಡಗೈ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಎಂಟು ಓವರ್‌ಗಳಲ್ಲಿ 23 ರನ್‌ಗಳಿಗೆ ಮೂರು ವಿಕೆಟ್‌ಗಳ ಬೇಟೆ ಆಡಿದರು. ಇನ್ನು ಆವೇಶ್ ಖಾನ್ ಒಂದು ವಿಕೆಟ್ ಪಡೆದರು.

ಟೀಂ ಇಂಡಿಯಾ ಆಟಗಾರ ಹರ್ಷ ದುಬೆ

ಹರ್ಷ ದುಬೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದಾರೆ. ಟೀಂ ಇಂಡಿಯಾ ಪರ ಎರಡು ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಎರಡು ಪಂದ್ಯಗಳಲ್ಲಿ ನಾಲ್ಕ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಐಪಿಎಲ್‌ನಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ಪ್ರಸ್ತುತ ದೇಸಿಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ದುಬೆ ಅವರನ್ನು ಎಸಿಸಿ ರೈಸಿಂಗ್ ಸ್ಟಾರ್ ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆ ಆಗಿದ್ದಾರೆ. ಟೀ ಇಂಡಿಯಾ ಎ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲಿ ಭಾರತ ತಂಡವು UAE, ನೇಪಾಳ ಹಾಗೂ ಪಾಕಿಸ್ತಾನ ಎ ತಂಡಗಳ ಜೊತೆಗೆ ಟೀಂ ಇಂಡಿಯ ಸೆಣಸಾಟ ನಡೆಸಲಿದೆ. ಇನ್ನು, ಗ್ರೂಪ್ ಎ ನಲ್ಲಿ ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಅಫ್ಘಾನಸ್ತಾನ ಎ ಹಾಗೂ ಹಾಂಕ್‌ ಕಾಂಗ್, ಚೈನಾ ತಂಡಗಳಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ACC Rising Stars ಏಷ್ಯಾ ಕಪ್‌ಗೆ ಭಾರತ A ತಂಡ ಪ್ರಕಟ, ಆರ್‍‌ಸಿಬಿ ಹೀರೋ ಪಾಟೀದಾರ್‍‌ಗೆ ವಿಶೇಷ ಜವಾಬ್ದಾರಿ
ಪಾಕ್ ಕ್ರಿಕೆಟಿಗನಿಗೆ IPL ಆಡುವ ಆಸೆ! 2027ರ ಹರಾಜಿನ ಮೇಲೆ ಕಣ್ಣಿಟ್ಟ ಆ ಸ್ಟಾರ್ ಬೌಲರ್ ಯಾರು?