ACC Rising Stars ಏಷ್ಯಾ ಕಪ್‌ಗೆ ಭಾರತ A ತಂಡ ಪ್ರಕಟ, ಆರ್‍‌ಸಿಬಿ ಹೀರೋ ಪಾಟೀದಾರ್‍‌ಗೆ ವಿಶೇಷ ಜವಾಬ್ದಾರಿ

Published : Nov 02, 2026, 08:54 PM IST
Rajat Patidar

ಸಾರಾಂಶ

ಬಿಸಿಸಿಐ ಮುಂಬರುವ ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗಾಗಿ ಟೀಂ ಇಂಡಿಯಾ 'ಎ' ತಂಡವನ್ನು ಪ್ರಕಟಿಸಿದೆ. ತಿಲಕ್ ವರ್ಮಾ ನಾಯಕರಾಗಿದ್ದು, ಆರ್‌ಸಿಬಿ ಆಟಗಾರ ರಜತ್ ಪಾಟೀದಾರ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 22 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸೆಣಸಾಡಲಿದೆ.

ನವದೆಹಲಿ: ಇವತ್ತು ಬಿಸಿಸಿಐ ACC Rising Stars ಏಷ್ಯಾ ಕಪ್‌ಗಾಗಿ ಟೀಂ ಇಂಡಿಯಾ A ತಂಡವನ್ನು ಪ್ರಕಟಿಸಿದೆ. ನವೆಂಬರ್ 19 ರಿಂದ 29 ವರೆಗೆ ದೋಹಾ ಮತ್ತು ಕತಾರ್‍‌‍‌ನಲ್ಲಿ ಪಂದ್ಯಗಳು ನಡೆಯಲಿವೆ. ವಿಶೇಷ ಅಂದ್ರೆ ತಂಡದಲ್ಲಿ ಆರ್‍‌ಸಿಬಿ ಹೀರೋ ರಜತ್ ಪಾಟೀದಾರ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಕ್ಯಾಪ್ಟನ್), ರಜತ್ ಪಾಟೀದಾರ್ (ಉಪನಾಯಕ), ರಿಂಕು ಸಿಂಗ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಸುರ್ಯಾಂಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷದ್ ದುಬೆ, ತನುಷ್ ಕೊಟಿಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾವ್, ಅರ್ಷದ್ ಖಾನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ವಿಶೇಷ ಅಂದ್ರೆ ಆರ್‍‌ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ. ಉಪನಾಯಕನಾಗಿ ಟೀಂ ಇಂಡಿಯಾ ಎ ಮುನ್ನಡೆಸಲಿದ್ದಾರೆ. ಇನ್ನು ತಂಡದ ನಾಯಕ ಜವಾಬ್ದಾರಿಯನ್ನ ತಿಲಕ್ ವರ್ಮಾ ಅವರಿಗೆ ನೀಡಲಾಗಿದೆ. ಈ ಟೂರ್ನಿಯಲ್ಲಿ ಭಾರತ ಎ ತಂಡವು ಬಿ ಗ್ರೂಪ್‌ನಲ್ಲಿ ಇದೆ. UAE, ನೇಪಾಳ ಹಾಗೂ ಪಾಕಿಸ್ತಾನ ಎ ತಂಡಗಳ ಜೊತೆಗೆ ಟೀಂ ಇಂಡಿಯ ಸೆಣಸಾಟ ನಡೆಸಲಿದೆ. ಇನ್ನು ಗ್ರೂಪ್ ಎ ನಲ್ಲಿ ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಅಫ್ಘಾನಸ್ತಾನ ಎ ಹಾಗೂ ಹಾಂಕ್‌ ಕಾಂಗ್, ಚೈನಾ ತಂಡಗಳಿವೆ.

ಪ್ರತಿ ಗುಂಪು ಪಂದ್ಯಗಳಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಮಿ ಫೈನಲ್‌ಗೆ ಪ್ರವೇಶ ಪಡೆಯಲಿವೆ. ಸೆಮಿಫೈನಲ ಪಂದ್ಯಗಳು ನವೆಂವಬರ್ 26 ಮತ್ತು 27 ರಂದು ನಡೆಯಲಿದೆ. ಫೈನಲ್ ಪಂದ್ಯವು ನವೆಂಬರ್ 29 ರಂದು ಭಾನುವಾರ ನಡೆಯಲಿದೆ.

ಭಾರತದ ಪಂದ್ಯಗಳು ಯಾವಾಗ?

ನವೆಂಬರ್ 20 ರಂದು ಶುಕ್ರವಾರ ನೆಪಾಳ ವಿರುದ್ಧ ವೆಸ್ಟ್‌ ಎಂಡ್ ಪಾರ್ಕ್ ಇಂಟೆಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ನವೆಂಬರ್ 22 ರಂದು ಭಾನುವಾರ ಪಾಕಿಸ್ತಾನ ಎ ತಂಡದ ವಿರುದ್ಧ ವೆಸ್ಟ್‌ ಎಂಡ್ ಪಾರ್ಕ್ ಇಂಟೆಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ನವೆಂಬರ್ 24 ರಂದು ಮಂಗಳವಾರ UAE ವಿರುದ್ಧ University of Doha for Science & Technology ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ನವೆಂಬರ್ 22 ರಂದು ನಡೆಯುವ ಪಂದ್ಯವು ಹೈವೋಲ್ಟೇಜ್ ಮ್ಯಾಚ್ ಆಗಿರಲಿದೆ. ಬದ್ಧ ವೈರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಿತ್ತ ಟೀಂ ಇಂಡಿಯಾ ಸ್ಟಾರ್; ದೇಸಿಯ ಟೂರ್ನಿಯಲ್ಲಿ ಮಿಂಚು, ಬೆರಗಾದ ಕ್ರಿಕೆಟ್ ಜಗತ್ತು
ಪಾಕ್ ಕ್ರಿಕೆಟಿಗನಿಗೆ IPL ಆಡುವ ಆಸೆ! 2027ರ ಹರಾಜಿನ ಮೇಲೆ ಕಣ್ಣಿಟ್ಟ ಆ ಸ್ಟಾರ್ ಬೌಲರ್ ಯಾರು?