
ಕೋಲ್ಕತಾ(ಮಾ.02): ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಲು ಬಂಗಾಳ ತಂಡವು 352 ರನ್‌ಗಳ ಗುರಿ ನೀಡಿದೆ. ಎರಡನೇ ಇನಿಂಗ್ಸ್‌ನಲ್ಲಿ ಬಂಗಾಳ ತಂಡವು 161 ರನ್‌ಗಳಿಗೆ ಆಲೌಟ್ ಆಗಿದೆ. ಅಭಿಮನ್ಯು ಮಿಥುನ್ 4, ಗೌತಮ್ 3 ವಿಕೆಟ್ ಪಡೆದು ಮಿಂಚಿದರು.
ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿದ್ದ ಬಂಗಾಳ ತಂಡಕ್ಕೆ ಮೂರನೇ ದಿನದಾಟದಲ್ಲಿ ಅನುಸ್ತೂಪ್(41) ಹಾಗೂ ಶೆಹಬಾಜ್ ಅಹಮ್ಮದ್(31) ಕೆಲಕಾಲ ಕರ್ನಾಟಕ ಬೌಲರ್‌ಗಳನ್ನು ಕಾಡಿದರು. ಸತತ ಎಸೆತಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ರೋನಿತ್ ಮೋರೆ ಬಂಗಾಳದ ಸುದೀಪ್ ಚಟ್ಟರ್ಜಿ(45) ಹಾಗೂ ಶ್ರೀವಸ್ತ್ ಗೋಸ್ವಾಮಿ ಅವರನ್ನು ಪೆವಿಲಿಯನ್ನಿಗಟ್ಟಿದರು. ಆ ಬಳಿಕ ಮಿಥುನ್ ಹಾಗೂ ಗೌತಮ್ ಬಂಗಾಳ ಬಾಲಂಗೋಚಿಗಳನ್ನು ಕಾಡಿದರು.
ರಣಜಿ ಟ್ರೋಫಿ: ಬಂಗಾಳ ಎದುರು ರನ್ ಗಳಿಸಲು ಪರದಾಡಿದ ಕರ್ನಾಟಕ
ಕರ್ನಾಟಕಕ್ಕೆ ಆರಂಭಿಕ ಆಘಾತ: ಸವಾಲಿನ ಗುರಿ ಬೆನ್ನತ್ತಿರುವ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಎರಡನೇ ಎಸೆತದಲ್ಲೇ ಕೆ.ಎಲ್. ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ. ಇಶಾನ್ ಪೊರೆಲ್ ಬಂಗಾಳ ತಂಡಕ್ಕೆ ಮೊದಲ ಯಶಸ್ಸು ಒದಗಿಸಿಕೊಟ್ಟಿದ್ದಾರೆ. ಇದೀಗ ದೇವದತ್ ಪಡಿಕ್ಕಲ್ ಹಾಗೂ ರವಿ ಕುಮಾರ್ ಸಮರ್ಥ್ ಕ್ರೀಸ್‌ನಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.