Ranaji Trophy : ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಕರ್ನಾಟಕ

By Santosh NaikFirst Published Jun 8, 2022, 4:21 PM IST
Highlights

ಗೆಲುವಿಗೆ 213 ರನ್ ಗಳ ಸಾಧಾರಣ ಸವಾಲು ಪಡೆದುಕೊಂಡಿದ್ದ ಉತ್ತರ ಪ್ರದೇಶ ತಂಡ ನಾಯಕ ಕರಣ್ ಶರ್ಮ ಹಾಗೂ ಅನುಭವಿ ಬ್ಯಾಟ್ಸ್ ಮನ್ ಪ್ರಿಯಂ ಗರ್ಗ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿತು.
 

ಬೆಂಗಳೂರು (ಜೂನ್ 8): ಬ್ಯಾಟಿಂಗ್ ವಿಭಾಗದ ನೀರಸ ನಿರ್ವಹಣೆ ಹಾಗೂ ಅನನುಭವಿ ಬೌಲಿಂಗ್ ವಿಭಾಗದ ಕಾರಣದಿಂದಾಗಿ ಹಿನ್ನಡೆ ಕಂಡ ಕರ್ನಾಟಕ (Karnataka) ತಂಡ 2021-22ರ ರಣಜಿ ಟ್ರೊಫಿ (2021-22 Ranaji Trophy) ಹೋರಾಟವನ್ನು ಕ್ವಾರ್ಟರ್ ಫೈನಲ್ ಹಂತದಲ್ಲಿಯೇ ಮುಗಿಸಿದೆ. ಆಲೂರು ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್ ಗಳಿಂದ ಉತ್ತರ ಪ್ರದೇಶ (Uttar Pradesh) ತಂಡಕ್ಕೆ ಶರಣಾಯಿತು.

ಗೆಲುವಿಗೆ 213 ರನ್ ಗಳ ಸಾಧಾರಣ ಸವಾಲು ಪಡೆದಿದ್ದ ಉತ್ತರ ಪ್ರದೇಶ ತಂಡ, ನಾಯಕ ಕರಣ್ ಶರ್ಮ (93 ರನ್, 163 ಎಸೆತ, 13 ಬೌಂಡರಿ, 1 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್ ಮನ್ ಪ್ರಿಯಂ ಗರ್ಗ್ (52 ರರನ್, 60 ಎಸೆತ, 6 ಬೌಂಡರಿ, 2 ಸಿಕ್ಸರ್) ನೆರವಿನಿಂದ 65.2 ಓವರ್ ಗಳಲ್ಲಿ 5 ವಿಕೆಟ್ ಗೆ 213 ರನ್ ಬಾರಿಸಿ ಗೆಲವು ಕಂಡಿತು.

ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡ 253 ರನ್ ಗೆ ಆಲೌಟ್ ಆಗಿದ್ದರೆ, ಉತ್ತರ ಪ್ರದೇಶ ತಂಡವನ್ನು ಕೇವಲ 155 ರನ್ ಗೆ ಆಲೌಟ್ ಮಾಡಿ ಕರ್ನಾಟಕ ತಂಡ 98 ರನ್ ಗಳ ಅಮೂಲ್ಯ ಮುನ್ನಡೆ ಕಂಡಿತ್ತು. ಆದರೆ, 2ನೇ ಇನ್ನಿಂಗ್ಸ್ ನಲ್ಲೂ ದಯನೀಯ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕರ್ನಾಟಕ ತಂಡ ಕೇವಲ 114 ರನ್ ಗೆ ಆಲೌಟ್ ಆಯಿತು. ಇದರಿಂದಾಗಿ ಗೆಲುವಿಗೆ 213 ರನ್ ಗಳ ಸವಾಲು ಪಡೆದಿದ್ದ ಉತ್ತರ ಪ್ರದೇಶ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ಗೆಲುವು ಕಂಡಿತು.

8 ವಿಕೆಟ್ ಗೆ 100 ರನ್ ಗಳಿಂದ ಮೂರನೇ ದಿನವಾದ ಬುಧವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡ 114 ರನ್ ಗೆ ಆಲೌಟ್ ಆಯಿತು. ಇದರಿಂದಾಗಿ ಉತ್ತರ ಪ್ರದೇಶ ತಂಡಕ್ಕೆ 213 ರನ್ ಗಳ ಗುರಿ ನೀಡಲು ಸಾಧ್ಯವಾಗಿತ್ತು. 10 ರನ್ ಗಳಿಂದ ದಿನದಾಟ ಆರಂಭಿಸಿದ ಶರತ್ ಶ್ರೀನಿವಾಸ್ 57 ಎಸತೆಗಳಲ್ಲಿ 2 ಬೌಂಡರಿಗಳೊಂದಿಗೆ ಅಜೇಯ 23 ರನ್ ಬಾರಿಸಿದರು. ಆದರೆ, ಕೊನೆಯ ಎರಡು ವಿಕೆಟ್ ಗಳನ್ನು ಉರುಳಿಸಿ ಯಶ್ ದಯಾಳ್ ಉರುಳಿಸಿದರು. ಇದರಿಂದಾಗಿ ಉತ್ತರ ಪ್ರದೇಶ ತಂಡಕ್ಕೆ ಕನಿಷ್ಠ 250 ರನ್ ಗಳ ಗುರಿಯನ್ನು ನೀಡುವ ಕರ್ನಾಟಕದ ಆಸೆ ಭಗ್ನಗೊಂಡಿತು. ಉತ್ತರ ಪ್ರದೇಶ ತಂಡದ ಪರವಾಗಿ ಸೌರಭ್ ಕುಮಾರ್ 36 ರನ್ ಗೆ 3 ವಿಕೆಟ್ ಉರುಳಿಸಿದರೆ, ಯಶ್ ದಯಾಳ್, ಅಂಕಿತ್ ರಜಪೂತ್ ತಲಾ 2 ವಿಕೆಟ್ ಸಾಧನೆ ಮಾಡಿದರು.

Latest Videos

ಉತ್ತರ ಪ್ರದೇಶಕ್ಕೆ ಏಟು ನೀಡಿದ್ದ ಕರ್ನಾಟಕ: ಚೇಸಿಂಗ್ ಆರಂಭಿಸಿದ ಉತ್ತರ ಪ್ರದೇಶ ತಂಡಕ್ಕೆ ವೈಶಾಖ್ ವಿಜಯ್ ಕುಮಾರ್ ಆರಂಭದಲ್ಲಿಯೇ ಏಟು ನೀಡಿದ್ದರು. 15 ರನ್ ಬಾರಿಸುವ ವೇಳೆಗೆ ಆರ್ಯನ್ ಜುಯಾಲ್ ವಿಕೆಟ್ ಉರುಳಿಸಿದ ವೈಶಾಖ್ ವಿಜಯ್ ಕುಮಾರ್, ಆ ಬಳಿಕ ಇನ್ನೊಬ್ಬ ಆರಂಭಿಕ ಆಟಗಾರ ಸಮರ್ಥ್ ಸಿಂಗ್ ರನ್ನು ಪೆವಿಲಿಯನ್ ಗೆ ಅಟ್ಟಿದ್ದರು. ಈ ವೇಳೆ ಉತ್ತರ ಪ್ರದೇಶ 28 ರನ್ ಬಾರಿಸಿತ್ತು. ಈ ಹಂತದಲ್ಲಿ ಕರ್ನಾಟಕ ಕೂಡ ಪ್ರತಿರೋಧ ಒಡ್ಡಬಹುದು ಎನ್ನುವ ನಿರೀಕ್ಷೆ ಇಡಲಾಗಿತ್ತು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಬೆಂಗಾಲ್, ಶತಮಾನದ ದಾಖಲೆ ಉಡೀಸ್ ..!

ಆದರೆ, ಮೂರನೇ ವಿಕೆಟ್ ಗೆ ಜೊತೆಯಾದ ಅನುಭವಿ ಪ್ರಿಯಂ ಗರ್ಗ್ ಹಾಗೂ ಕರಣ್ ಶರ್ಮ ಅಮೂಲ್ಯ 71 ರನ್ ಜೊತೆಯಾಟವಾಡುವ ಮೂಲಕ ಉತ್ತರ ಪ್ರದೇಶ ತಂಡಕ್ಕೆ ಗೆಲುವಿನ ಭರವಸೆ ನೀಡಿದರು. ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಈ ಜೋಡಿ ಕರ್ನಾಟಕ ಬೌಲಿಂಗ್ ವಿಭಾಗವನ್ನು ವಿಶ್ವಾಸದಿಂದ ಎದುರಿಸಿತು. ಅಮಾಯಕಾರಿ ಆಗುತ್ತಿದ್ದ ಈ ಜೋಡಿಯನ್ನು 29ನೇ ಓವರ್ ನಲ್ಲಿ ಕೆ.ಗೌತಮ್ ಬೇರ್ಪಡಿಸಿದರು. ಅದರ ಬೆನ್ನಲ್ಲಿಯೇ ಕೆಲ ವಿಕೆಟ್ ಗಳು ಉರುಳಿದ್ದರಿಂದ ಕರ್ನಾಟಕ ತಂಡ ಹೋರಾಟ ಪ್ರಯತ್ನ ಮಾಡಿತು. ರಿಂಕು ಸಿಂಗ್, ಕಾವೇರಪ್ಪಗೆ ವಿಕೆಟ್ ನೀಡಿದರೆ, ಧ್ರುವ್ ಜುರೇಲ್ ವಿಕೆಟ್ ಅನ್ನು ವೈಶಾಖ್ ಪಡೆದುಕೊಂಡರು. 2 ವಿಕೆಟ್ ಗೆ 87 ರನ್ ಬಾರಿಸಿದ್ದ ಉತ್ತರ ಪ್ರದೇಶ 114 ರನ್ ಬಾರಿಸುವ ವೇಳೆಗೆ 5 ವಿಕೆಟ್ ಕಳೆದುಕೊಂಡಿತ್ತು. ಇಂಥ ಸಮಯದಲ್ಲಿ ನಾಯಕ ಕರಣ್ ಶರ್ಮಗೆ ಜೊತೆಯಾದ ಪ್ರಿನ್ಸ್ ಯಾದವ್ 6ನೇ ವಿಕೆಟ್ ಗೆ ಮುರಿಯದ 99 ರನ್ ಜೊತೆಯಾಟವಾಡುವ ಮೂಲಕ ತಂಡದ ಗೆಲುವುಗೆ ಕಾರಣರಾದರು. 

Mithali Raj retirement: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್‌

ಕರ್ನಾಟಕ ವಿರುದ್ಧ ಮೊದಲ ಗೆಲುವು: 
ಉತ್ತರ ಪ್ರದೇಶ ತಂಡಕ್ಕೆ ರಣಜಿ ಟ್ರೋಫಿಯಲ್ಲಿ ಇದು ಕರ್ನಾಟಕ ವಿರುದ್ಧ ಮೊದಲ ಗೆಲುವು ಎನಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಸಿದೆ. 8 ಬಾರಿಯ ರಣಜಿ ಚಾಂಪಿಯನ್ ತಂಡದ ವಿರುದ್ಧ ಮೊದಲ ಗೆಲುವು ಕ್ವಾರ್ಟರ್ ಫೈನಲ್ ಹಂತದಲ್ಲಿ ಬಂದಿರುವುದು ವಿಶೇಷ ಎನಿಸಿದೆ.

click me!