ಐಪಿಎಲ್ ಪ್ಲೇ ಆಫ್‌ಗೆ ಎಂಟ್ರಿ ನೀಡೋ ನಾಲ್ಕು ತಂಡಗಳು ಯಾವುವು..?

Published : Apr 19, 2024, 03:56 PM ISTUpdated : Apr 19, 2024, 04:07 PM IST
ಐಪಿಎಲ್ ಪ್ಲೇ ಆಫ್‌ಗೆ ಎಂಟ್ರಿ ನೀಡೋ ನಾಲ್ಕು ತಂಡಗಳು ಯಾವುವು..?

ಸಾರಾಂಶ

IPL ಸಮರ ಶುರುವಾಗಿ ಆಲ್ಮೋಸ್ಟ್ ಒಂದು ತಿಂಗಳು ಕಳೆದಿದೆ. ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್‌ನ ರಣರೋಚಕ ಪಂದ್ಯಗಳು, ಫ್ಯಾನ್ಸ್‌ಗೆ ಮಸ್ತ್ ಮನರಂಜನೆ ನೀಡ್ತಿವೆ. ಈ ನಡುವೆ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿದೆ. ಟೂರ್ನಿಯ ಫಸ್ಟ್ ಹಾಫ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 4 ತಂಡಗಳು ನಾಕೌಟ್ ರೇಸ್ನಲ್ಲಿ ಮುಂದಿವೆ. ಸೆಕೆಂಡ್ ಹಾಫ್ನಲ್ಲೂ ಇದೇ ಪ್ರದರ್ಶನ ನೀಡಿದ್ರೆ, ಪ್ಲೇ ಆಫ್ಗೆ ಎಂಟ್ರಿ ನೀಡೋದು ಪಕ್ಕಾ..! 

ಬೆಂಗಳೂರು(ಏ.19): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಎಂಟ್ರಿ ನೀಡೋ ತಂಡಗಳಾವುವು..? ಯಾವ 4 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯೋ ಚಾನ್ಸ್ ಹೆಚ್ಚಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ಎಂಟ್ರಿ ಕೊಡಬೇಕಾದ್ರೆ ಏನ್ ಮಾಡ್ಬೇಕು ಗೊತ್ತಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ. 

IPL ಸಮರದಲ್ಲಿ ಶುರುವಾಯ್ತು ಪ್ಲೇ ಆಫ್ ಲೆಕ್ಕಾಚಾರ..! 

IPL ಸಮರ ಶುರುವಾಗಿ ಆಲ್ಮೋಸ್ಟ್ ಒಂದು ತಿಂಗಳು ಕಳೆದಿದೆ. ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್‌ನ ರಣರೋಚಕ ಪಂದ್ಯಗಳು, ಫ್ಯಾನ್ಸ್‌ಗೆ ಮಸ್ತ್ ಮನರಂಜನೆ ನೀಡ್ತಿವೆ. ಈ ನಡುವೆ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿದೆ. ಟೂರ್ನಿಯ ಫಸ್ಟ್ ಹಾಫ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 4 ತಂಡಗಳು ನಾಕೌಟ್ ರೇಸ್ನಲ್ಲಿ ಮುಂದಿವೆ. ಸೆಕೆಂಡ್ ಹಾಫ್ನಲ್ಲೂ ಇದೇ ಪ್ರದರ್ಶನ ನೀಡಿದ್ರೆ, ಪ್ಲೇ ಆಫ್ಗೆ ಎಂಟ್ರಿ ನೀಡೋದು ಪಕ್ಕಾ..! 

ಕಾವ್ಯ ಮಾರನ್ ಜಾತಕದಿಂದ ಸನ್‌ರೈಸರ್ಸ್ ಲಕ್ ಚೇಂಜ್..! ಹೈದರಾಬಾದ್‌ ಸಕ್ಸಸ್‌ಗೆ ಕಾರಣ ಏನು ಗೊತ್ತಾ..?

ರಾಜಸ್ಥಾನ ರಾಯಲ್ಸ್ ನಾಕೌಟ್ ಹಂತಕ್ಕೆ ಎಂಟ್ರಿ  ಕೊಡೋದು ಪಕ್ಕಾ..! 

ಯೆಸ್, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಸತತ ಗೆಲುವುಗಳಿಂದ ಮುನ್ನುಗ್ಗುತ್ತಿದೆ. ಈವರೆಗೂ 7 ಪಂದ್ಯಗಳನ್ನಾಡಿರೋ ರಾಜಸ್ಥಾನ ಸೈನ್ಯ, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. 12 ಪಾಯಿಂಟ್ಗಳೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇದ್ರಿಂದ ಇನ್ನು ಮೂರು ಮ್ಯಾಚ್ ಗೆದ್ರೆ, ಸುಲಭವಾಗಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲಿದೆ. 

ಕೆಕೆಆರ್ ಪ್ಲೇ ಆಫ್ ಎಂಟ್ರಿ ಕಷ್ಟವಲ್ಲ..!

2023ರಲ್ಲಿ ಫ್ಲಾಪ್ ಶೋ ನೀಡಿದ್ದ ಕೋಲ್ಕತಾ ನೈಟ್‌ ರೈಡರ್ಸ್, ಈ ಸಲ ಫಿನಿಕ್ಸ್ನಂತೆ ಮೇಲೆದ್ದು ಬಂದಿದೆ. ಮೆಂಟರ್ ಆಗಿ ಗೌತಮ್ ಗಂಭೀರ್ ಬಂದ್ಮೇಲೆ ಆ ತಂಡದ ಪ್ರದರ್ಶನ ಕಂಪ್ಲೀಟ್ ಚೇಂಜ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುತ್ತಿದೆ. ಆಡಿರೋ 6 ಪಂದ್ಯಗಳಲ್ಲಿ 4ರಲ್ಲಿ  ಜಯ ಕಂಡಿರೋದೇ KKR ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಪ್ಲೇ ಆಫ್ ಪ್ರವೇಶಕ್ಕೆ ಕೋಲ್ಕತ್ತಾ ಉಳಿದ 8 ಪಂದ್ಯಗಳಲ್ಲಿ 5 ಮ್ಯಾಚ್ ಗೆಲ್ಲಬೇಕಿದೆ. 

ಟಿ20 ವಿಶ್ವಕಪ್‌ನಲ್ಲಿ ಭಾರತದ ಹೊಸ ಮುಖಗಳಿಗೆ ಮಣೆಯಿಲ್ಲ? ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಟಾಪ್-4ರಲ್ಲಿ ಹಾಲಿ ಚಾಂಪಿಯನ್ಸ್‌ಗೆ ಜಾಗ ಫಿಕ್ಸ್..!

ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್, ಈ  ಬಾರಿಯೂ ಕಪ್ ಮೇಲೆ ಕಣ್ಣಿಟ್ಟಿದೆ. ಹೊಸ ನಾಯಕ ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಅಬ್ಬರಿಸ್ತಿದೆ. ಯೆಲ್ಲೋ ಆರ್ಮಿ ಈವರೆಗೂ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ಸಿಎಸ್‌ಕೆಯ ಪ್ರದರ್ಶ ನೋಡಿದ್ರೆ, ಟಾಪ್-4ರಲ್ಲಿ ಕಾಣಿಸಿಕೊಳ್ಳೋದು ಫಿಕ್ಸ್ ಎನ್ನಲಾಗ್ತಿದೆ. 

ಪ್ಲೇ ಆಫ್ ರೇಸ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್.! 

ಯೆಸ್, ಕಳೆದ ವರ್ಷ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಹೈದ್ರಬಾದ್, ಈ ಸಲ ಧೂಳೆಬ್ಬಿಸ್ತಿದೆ. ಘಟಾನುಘಟಿ ತಂಡಗಳ ವಿರುದ್ಧ ಗೆದ್ದು ಬೀಗಿದೆ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಕ್ಯಾಪ್ಟನ್ಸಿಯಲ್ಲಿ ಸನ್‌ರೈಸರ್ಸ್ ಅಬ್ಬರಿಸುತ್ತಿದೆ. ಅದರಲ್ಲೂ ಸನ್‌ರೈಸರ್ಸ್ ತಂಡದ ಬ್ಯಾಟರ್ಸ್ ಮೈದಾನದಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಇದ್ರಿಂದ ಸನ್‌ರೈಸರ್ಸ್‌, ಪ್ಲೇ ಆಫ್ ಮ್ಯಾಚ್ ಆಡೋದು ಪಕ್ಕಾ ಅನ್ನೋ ಮಾತುಗಳು ಕೇಳಿಬರ್ತಿವೆ. 

ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬಗ್ಗೆ ಅಚ್ಚರಿ ಅಭಿಪ್ರಾಯ ತಿಳಿಸಿದ ರೋಹಿತ್ ಶರ್ಮಾ..!

ಇನ್ನು ಸತತ 5 ಸೋಲುಗಳ ನಂತರವೂ RCBಗೆ ಪ್ಲೇ ಆಫ್ ಡೋರ್  ಕ್ಲೋಸ್ ಆಗಿಲ್ಲ. ಆದ್ರೆ, ಈ ಡೋರ್ ಓಪೆನ್ ಆಗಬೇಕಾದ್ರೆ, ಪಾಫ್ ಡುಪ್ಲೆಸಿ ಪಡೆ ಸ್ಟ್ರಾಂಗ್‌ ಕಮ್‌ಬ್ಯಾಕ್ ಮಾಡಬೇಕಿದೆ. ಉಳಿದಿರೋ 7ಕ್ಕೆ ಪಂದ್ಯಗಳನ್ನ ಗೆಲ್ಲಬೇಕಿದೆ. ಆದ್ರೆ, ಇದು ಅಷ್ಟು ಸುಲಭವಲ್ಲ, ಹಾಗಂತ ಆಗೋದೇ ಇಲ್ಲ ಅಂಂತ ಹೇಳೋಕಾಗಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!