ಈ ಬಾರಿಯ IPL ರಣರಂಗದಲ್ಲಿ ಸನ್‌ರೈಸರ್ಸ್ ಖತರ್ನಾಕ್ ಪ್ರದರ್ಶನ ನೀಡ್ತಿದೆ. ಈವರೆಗೂ 6 ಪಂದ್ಯಗಳಲ್ಲಿ 4ರಲ್ಲಿ ಗೆಲವು ಸಾಧಿಸಿರೋ ಆರೆಂಜ್ ಆರ್ಮಿ, ಪಾಯಿಂಟ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದೆ. ಕಳೆದ ಸೀಸನ್‌ವರೆಗೂ ಬ್ಯಾಟಿಂಗ್ನಲ್ಲಿ ಸೈಲೆಂಟಾಗಿದ್ದ ಸನ್‌ರೈಸರ್ಸ್, ಈ ಸೀಸನ್ನಲ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದೆ.
ಬೆಂಗಳೂರು(ಏ.19): ಕಳೆದ ವರ್ಷದ ಐಪಿಎಲ್‌ನಲ್ಲಿ ಫ್ಲಾಪ್ ಶೋ ನೀಡಿದ್ದ ಸನ್‌ರೈಸರ್ಸ್ ಹೈದ್ರಾಬಾದ್, ಈ ಬಾರಿ ಸೂಪರ್ ಸಕ್ಸಸ್ ಕಾಣ್ತಿದೆ. ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸುತ್ತಿದೆ. ಇದಕ್ಕೆ ಕಾರಣ ಏನು..? ಸನ್‌ರೈಸರ್ಸ್ ಹಿಂದಿನ ಪವರ್ ಏನು ಅಂತ ಗೊತ್ತಾ..? ಹಾಗಾದ್ರೆ, ಈ ಸ್ಟೋರಿ ನೋಡಿ.
2023ರ IPL ಸಮರದಲ್ಲಿ ಫ್ಲಾಪ್ ಶೋ..! 2024ರ ಸೀಸನ್ನಲ್ಲಿ ಸೂಪರ್ ಸಕ್ಸಸ್..!
undefined
ಈ ಬಾರಿಯ IPL ರಣರಂಗದಲ್ಲಿ ಸನ್‌ರೈಸರ್ಸ್ ಖತರ್ನಾಕ್ ಪ್ರದರ್ಶನ ನೀಡ್ತಿದೆ. ಈವರೆಗೂ 6 ಪಂದ್ಯಗಳಲ್ಲಿ 4ರಲ್ಲಿ ಗೆಲವು ಸಾಧಿಸಿರೋ ಆರೆಂಜ್ ಆರ್ಮಿ, ಪಾಯಿಂಟ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದೆ. ಕಳೆದ ಸೀಸನ್‌ವರೆಗೂ ಬ್ಯಾಟಿಂಗ್ನಲ್ಲಿ ಸೈಲೆಂಟಾಗಿದ್ದ ಸನ್‌ರೈಸರ್ಸ್, ಈ ಸೀಸನ್ನಲ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದೆ. ಹೈದ್ರಾಬಾದ್ ಬ್ಯಾಟರ್ಸ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದ್ರಿಂದ IPL ಇತಿಹಾಸದಲ್ಲಿ SRH ಹೈಯೆಸ್ಟ್ ಟೀಮ್ ಸ್ಕೋರ್ ದಾಖಲಿಸಿದೆ.
IPL 2024 ಚೆನ್ನೈ ಸೂಪರ್ ಕಿಂಗ್ಸ್ vs ಲಖನೌ ಸೂಪರ್ ಜೈಂಟ್ಸ್: ಸ್ಪಿನ್ ಅಖಾಡದಲ್ಲಿ ಗೆಲ್ಲೋರ್ಯಾರು?
ಲಾಸ್ಟ್ ಸೀಸನ್ನಲ್ಲಿ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಕಂಡಿದ್ದ ಹೈದ್ರಾಬಾದ್, ಈ ಬಾರಿ ಅದಕ್ಕೆ ವಿರುದ್ಧವಾದ ಪ್ರದರ್ಶನ ನೀಡ್ತಿದೆ. ಕಪ್ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಒಂದು ವರ್ಷದಲ್ಲೇ ಸನ್‌ರೈಸರ್ಸ್ ತಂಡದ ಈ ಚೇಂಜ್ ಓವರ್ ಕಂಡು ಕ್ರಿಕೆಟ್ ಫ್ಯಾನ್ಸ್ ಶಾಕ್ ಆಗಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕತ್ವ, ಟ್ರಾವಿಸ್ ಹೆಡ್ ಎಂಟ್ರಿಯಿಂದ ಸನ್‌ರೈಸರ್ಸ್‌ಗೆ ಆನೆಬಲ ಬಂದಿದೆ. ಅದರ ಜೊತೆಗೆ ಆ ತಂಡದ ಕೋ ಓನರ್ ಕಾವ್ಯ ಮಾರನ್ ಅದೃಷ್ಟವೂ SRH ಬೆನ್ನಿಗಿದೆ.
ಹೈದ್ರಾಬಾದ್ ತಂಡದ ಬೆನ್ನಿಗಿದೆ ಕಾವ್ಯ ಅದೃಷ್ಟ..!
ಯೆಸ್, ಸನ್‌ರೈಸರ್ಸ್ ಸಕ್ಸಸ್‌ಗೆ ಕಾವ್ಯ ಮಾರನ್ ಜಾತಕ ಪ್ರಮುಖ ಕಾರಣ. ಸದ್ಯ ಕಾವ್ಯಗೆ ಗುರುಬಲ ಕೂಡಿ ಬಂದಿದೆ. ಅವ್ರ ಜಾತಕದಲ್ಲಿ ಗಜಕೇಸರಿ ಯೋಗ ನಡೆಯುತ್ತಿದೆ. ಕಾವ್ಯದ್ದು ಮಿಥುನ ರಾಶಿಯಾಗಿದ್ದು, ಆ ಜಾತಕದವ್ರಿಗೆ ಈ ವರ್ಷ ಅಂದುಕೊಂಡದ್ದೆಲ್ಲಾ ನೆರವೇರಲಿದೆ. ಅದರ ಪರಿಣಾಮ ಸನ್‌ರೈಸರ್ಸ್ ಮೇಲೆ ಬೀರಿದೆ. ಇದ್ರಿಂದ ಸನ್‌ರೈಸರ್ಸ್ IPLನಲ್ಲಿ ಮಿಂಚುತ್ತಿದೆ.
IPL 2024 ಚೆನ್ನೈ ಸೂಪರ್ ಕಿಂಗ್ಸ್ vs ಲಖನೌ ಸೂಪರ್ ಜೈಂಟ್ಸ್: ಸ್ಪಿನ್ ಅಖಾಡದಲ್ಲಿ ಗೆಲ್ಲೋರ್ಯಾರು?
ಇದನ್ನೆಲ್ಲಾ ನಾವೇಳ್ತಿಲ್ಲ, ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದಾರೆ. ಇವರು ಅಂತಿಂಥ ಜ್ಯೋತಿಷಿ ಅಲ್ಲ, ಟಾಲಿವುಡ್‌ನ ದೊಡ್ಡ ದೊಡ್ಡ ಹೀರೋ, ಹೀರೋಯಿನ್ಸ್ ಇವ್ರ ಬಳಿ ತಮ್ಮ ಭವಿಷ್ಯ ಕೇಳ್ತಾರೆ. ಈ ಹಿಂದೆ ಇದೇ ವೇಣುಸ್ವಾಮಿ ಸಮಂತಾ ಮತ್ತು ನಾಗಚೈತನ್ಯ ಮದುವೆಯಾಗಿ ಬಹಳ ಕಾಲ ಸಂಸಾರ ನಡೆಸಲ್ಲ. ಡಿವೋರ್ಸ್ ಪಡೆದುಕೊಳ್ತಾರೆ ಅಂತ ಹೇಳಿದ್ರು. ಅದರಂತೆ ಸ್ಯಾಮ್-ಚೈತನ್ಯ ಸಂಸಾರ ಮುರಿದು ಬಿತ್ತು. ಇನ್ನು ವಿಜಯ್ ದೇವರಕೊಂಡ ಸಕ್ಸಸ್ ಪಾತಾಳಕ್ಕೆ ಕುಸಿಯುತ್ತೆ ಅಂತ ಭವಿಷ್ಯ ನುಡಿದಿದ್ರು. ಹೇಳಿದಂತೆ ವಿಜಯ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ.
ಸನ್‌ರೈಸರ್ಸ್ ಯಶಸ್ಸಿಗೆ ಕಾವ್ಯ ಜಾತಕ ಕಾರಣ ಅಂತ ಹೇಳಿರೋ ವೇಣುಸ್ವಾಮಿ, ಆ ತಂಡ ಕಪ್ ಗೆಲ್ಲುತ್ತಾ ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿಲ್ಲ. ಅದೇನೆ ಇರಲಿ, ನಿಜಕ್ಕೂ ಕಾವ್ಯ ಜಾತಕ ಸನ್‌ರೈಸರ್ಸ್ ಗೆಲುವುಗಳಿಗೆ ಕಾರಣನಾ..? 3ನೇ ಬಾರಿ ಹೈದ್ರಾಬಾದ್ ತಂಡ IPL ಚಾಂಪಿಯನ್ಸ್ ಪಟ್ಟ ಅಲಂಕರಿಸುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್