ಆರಂಭಗೊಂಡ INDvsENG ಟೆಸ್ಟ್ ಪಂದ್ಯ ಮತ್ತೆ ಸ್ಥಗಿತ; ಬಿಟ್ಟು ಬಿಡದೆ ಕಾಡುತ್ತಿದೆ ಮಳೆರಾಯ

By Suvarna NewsFirst Published Aug 5, 2021, 9:49 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಸ್ಟ್ ಪಂದ್ಯಕ್ಕೆ ಅಡ್ಡಿಯಾದ ಮಳೆ
  • ತತ್ಕಾಲಿಕ ಸ್ಥಗಿತಗೊಂಡಿದ್ದ ಪಂದ್ಯ ಆರಂಭಕ್ಕೆ ಅನುವು ಮಾಡಿಕೊಟ್ಟ ಮಳೆ
  • ಮತ್ತೆ ಮಳೆ ವಕ್ಕರಿಸಿ ಎರಡನೇ ಬಾರಿಗೆ ಪಂದ್ಯ ಸ್ಥಗಿತ

ನಾಟಿಂಗ್‌ಹ್ಯಾಮ್(ಆ.05): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಲ್ಲಿ ಭಾರತದ ಬ್ಯಾಟಿಂಗ್‌ಗಿಂತ ಮಳೆರಾಯನ ಆರ್ಭಟವೇ ಹೆಚ್ಚಾಗಿದೆ. ಇದೀಗ ಮಳೆಯಿಂದ 2ನೇ ಬಾರಿಗೆ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.  

ದಿಢೀರ್ ಕುಸಿದ ಟೀಂ ಇಂಡಿಯಾಗೆ ಮಳೆರಾಯನ ಶಾಕ್; ಪಂದ್ಯ ತಾತ್ಕಾಲಿಕ ಸ್ಥಗಿತ!

4 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿದ ಸಂದರ್ಭದಲ್ಲಿ ಮಳೆ ವಕ್ಕರಿಸಿತು. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿಗೊಂಡಿತು. ಕೆಲ ಕಾಲ ಸುರಿದ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾಗಿತ್ತು. ಮಳೆ ನಿಂತ ಬಳಿಕ ಪಂದ್ಯ ಮತ್ತೆ ಆರಂಭಗೊಂಡಿತ್ತು. ಕೇವಲ ಎರಡು ಎಸೆತವಷ್ಟೇ ಮುಗಿದಿದೆ. ಅಷ್ಟರಲ್ಲೇ ಮತ್ತೆ ಮಳೆ ವಕ್ಕರಿಸಿದೆ.

ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಕ್ರೀಸ್‌ಗಳಿದ ದಿಟ್ಟ ಹೋರಾಟದ ಮುನ್ಸೂಚನೆ ನೀಡಿದರು. ರಾಹುಲ್ ಎರಡು ಎಸೆತ ಎದುರಿಸುತ್ತಿದ್ದಂತೆ ಮತ್ತೆ ಮಳೆ ಸುರಿಯಿತು. ಹೀಗಾಗಿ 2ನೇ ಬಾರಿಗೆ ಪಂದ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.ಭಾರತ 4 ವಿಕೆಟ್ ಕಳೆದುಕೊಂಡು 125 ರನ್ ಸಿಡಿಸಿದೆ.

ಟೀಂ ಇಂಡಿಯಾಗೆ ನೆರವಾದ ಕೆಎಲ್ ರಾಹುಲ್ ಆರ್ಧಶತಕ!

ಮಳೆಗೂ ಮೊದಲು ಭಾರತ ದಿಢೀರ್ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಆರಂಭಿಕ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದ್ದರು. ಈ ಜೋಡಿ 97 ರನ್ ಜೊತೆಯಾಟ ನೀಡಿತ್ತು. ಆದರೆ 36 ರನ್ ಸಿಡಿಸಿದ ರೋಹಿತ್ ಶರ್ಮಾ ವಿಕೆಟ್ ಪತನ ಟೀಂ ಇಂಡಿಯಾಗೆ ತೀವ್ರ ಹಿನ್ನಡೆ ತಂದಿತ್ತು.

ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಚೇತೇಶ್ವರ್ ಪೂಜಾರಾ, ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಔಟಾದರು. 97 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡರೆ, 112ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಸಂಪೂರ್ಣ ಮಳೆ ಆರ್ಭಟಿಸುತ್ತಿದೆ

click me!