ಸತತ 3 ವಿಕೆಟ್ ಪತನ; ಟೀಂ ಇಂಡಿಯಾಗೆ ನೆರವಾದ ಕೆಎಲ್ ರಾಹುಲ್ ಆರ್ಧಶತಕ!

By Suvarna NewsFirst Published Aug 5, 2021, 6:33 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್
  • ಇಂಗ್ಲೆಂಡ್ ತಂಡವನ್ನು 1ನೇ ಇನ್ನಿಂಗ್ಸ್‌ನಲ್ಲಿ 183 ರನ್‌ಗೆ ಕಟ್ಟಿ ಹಾಕಿದ್ದ ಭಾರತ
  • ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ರಾಹುಲ್ ಹಾಫ್ ಸೆಂಚುರಿ ನೆರವು

ನಾಟಿಂಗ್‌ಹ್ಯಾಮ್(ಆ.05): ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುತ್ತಿದೆ. ಸತತ 3 ವಿಕೆಟ್ ಪತನಗೊಂಡ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಅರ್ಧಶತಕ ನೆರವಾಗಿದೆ. ಈ ಮೂಲಕ ಮೊದಲ ಇನ್ನಿಂಗ್ಸ್ ಸಮಬಲಕ್ಕೆ 72 ರನ್ ಅವಶ್ಯಕತೆ ಇದೆ. 

ಟೀಂ ಇಂಡಿಯಾ ದಾಳಿಗೆ ಇಂಗ್ಲೆಂಡ್ ತತ್ತರ, 183 ರನ್‌ಗೆ ರೂಟ್ ಸೈನ್ಯ ಆಲೌಟ್

ಮೊದಲ ದಿನದಲ್ಲಿ ಇಂಗ್ಲೆಂಡ್ ತಂಡವನ್ನು 183 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್ ಮಾಡಿತ್ತು. ಬಳಿಕ ದಿನದಾಟ ಅಂತ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ, 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿತು. ಆರಂಭಿಕ ಕೆಎಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೊತೆಯಾಟದಿಂದ ಭಾರತ ಉತ್ತಮ ಪ್ರದರ್ಶನ ನೀಡಿತು.

ರೋಹಿತ್ ಶರ್ಮಾ 36 ರನ್ ಸಿಡಿಸಿ ಔಟಾದರು. ಈ ಮೂಲಕ ರಾಹುಲ್ ಹಾಗೂ ರೋಹಿತ್ 97 ರನ್ ಜೊತೆಯಾಟ ಅಂತ್ಯಗೊಂಡಿತು. ಮೊದಲ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ದಿಡೀರ್ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.  ಸತತ 3 ವಿಕೆಟ್ ಪತನ ತಂಡದ ಮೇಲೆ ಒತ್ತಡ ಹೆಚ್ಚಿಸಿತು. 

97 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ, 104 ರನ್‌ಗೆ 2 ಮತ್ತು 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಕೆಎಲ್ ರಾಹುಲ್ ಜವಾಬ್ದಾರಿಯುತ ಆಟ ಟೀಂ ಇಂಡಿಯಾಗೆ ನೆರವಾಯಿತು. 

click me!