ದಿಢೀರ್ ಕುಸಿದ ಟೀಂ ಇಂಡಿಯಾಗೆ ಮಳೆರಾಯನ ಶಾಕ್; ಪಂದ್ಯ ತಾತ್ಕಾಲಿಕ ಸ್ಥಗಿತ!

By Suvarna NewsFirst Published Aug 5, 2021, 7:50 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ
  • ದಿಢೀರ್ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಮಳೆರಾಯನ ಶಾಕ್
  • 2ನೇ ಸೆಶನ್‌ನಲ್ಲಿ ಕುಸಿದ ಭಾರತ, ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತ
     

ನಾಟಿಂಗ್‌ಹ್ಯಾಮ್(ಆ.05): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನ ದಿಟ್ಟ ಹೋರಾಟ ನೀಡುತ್ತಿದ್ದ ಟೀಂ ಇಂಡಿಯಾಗೆ ದಿಢೀರ್ ಆಘಾತ ಎದುರಾಗಿತ್ತು. ಸತತ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 4 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ವೇಳೆ ವೇಳೆ ಮಳೆ ಕೂಡ ವಕ್ಕರಿಸಿದೆ. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. 

ಸತತ 3 ವಿಕೆಟ್ ಪತನ; ಟೀಂ ಇಂಡಿಯಾಗೆ ನೆರವಾದ ಕೆಎಲ್ ರಾಹುಲ್ ಆರ್ಧಶತಕ!

ದ್ವಿತೀಯ ದಿನದಾಟದಲ್ಲಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 97 ರನ್ ಜೊತೆಯಾಟ ನೀಡಿತು. 37 ರನ್ ಸಿಡಿಸಿದ ರೋಹಿತ್ ಶರ್ಮಾ ವಿಕೆಟ್ ಪತನದ ಬೆನ್ನಲ್ಲೇ ದಿಢೀರ್ ವಿಕೆಟ್ ಕಳೆದುಕೊಂಡಿತು. ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ವಿಕೆಚ್ ಕೈಚೆಲ್ಲಿದರು.

ಅರ್ಧಶತಕ ಸಿಡಿಸಿ ಟೀಂ ಇಂಡಿಯಾಗೆ ನೆರವಾದ ಕೆಎಲ್ ರಾಹುಲ್ ಹೋರಾಟ ಮುಂದುವರಿಸಿದರು. ರಿಷಬ್ ಪಂತ್ ಜೊತೆ ರಾಹುಲ್ ಬ್ಯಾಟಿಂಗ್ ಮುಂದುವರಿಸಿದರು. ಇದೇ ವೇಳೆ ಮಳೆ ವಕ್ಕರಿಸಿತು. ಭಾರತ 4 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. ಮೊದಲ ಇನ್ನಿಂಗ್ಸ್ ಮುನ್ನಡೆಗೆ ಇನ್ನೂ 58ರನ್ ಅವಶ್ಯಕತೆ ಇದೆ.

 

It has now started to rain!

We will keep you posted on further updates. https://t.co/njARIRJHuE

— BCCI (@BCCI)

ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗೆ ಆಲೌಟ್ ಆಗಿತ್ತು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತ್ತು. ಹೀಗಾಗಿ ಜೋ ರೂಟ್ ಸಿಡಿಸಿದ 64 ರನ್ ಹೊರತು ಪಡಿಸಿದರೆ ಇನ್ಯಾರು ಕೂಡ ಉತ್ತಮ ಹೋರಾಟ ನೀಡಲಿಲ್ಲ.

click me!