ದ್ರಾವಿಡ್ ಹೆಸರಲ್ಲಿ ಹಾಡು: ವಿಡಿಯೋ ಭಾರೀ ವೈರಲ್..!

Published : Mar 03, 2019, 12:20 PM IST
ದ್ರಾವಿಡ್ ಹೆಸರಲ್ಲಿ ಹಾಡು: ವಿಡಿಯೋ ಭಾರೀ ವೈರಲ್..!

ಸಾರಾಂಶ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಹೆಸರಲ್ಲಿ ‘ದಿ ರೀವಿಸಿಟ್‌ ಪ್ರಾಜೆಕ್ಟ್’ ಎನ್ನುವ ಮ್ಯೂಸಿಕ್‌ ಬ್ಯಾಂಡ್‌ ಹಾಡೊಂದನ್ನು ರಚಿಸಿದೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ

ನವದೆಹಲಿ[ಮಾ.03]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಹೆಸರಲ್ಲಿ ‘ದಿ ರೀವಿಸಿಟ್‌ ಪ್ರಾಜೆಕ್ಟ್’ ಎನ್ನುವ ಮ್ಯೂಸಿಕ್‌ ಬ್ಯಾಂಡ್‌ ಹಾಡೊಂದನ್ನು ರಚಿಸಿದೆ. 

ಈ ಹಾಡಿಗೆ ‘ಸರ್‌ ದ್ರಾವಿಡ್‌’ ಎಂದು ಹೆಸರಿಟ್ಟಿದ್ದು, ದ್ರಾವಿಡ್‌ರ ಸಾಧನೆಗಳ ಬಗ್ಗೆ ಮೆಲುಕು ಹಾಕಲಾಗಿದೆ. 2003ರಲ್ಲಿ ಅಡಿಲೇಡ್‌ನಲ್ಲಿ ಅವರು ಬಾರಿಸಿದ 233 ಹಾಗೂ ಅಜೇಯ 72 ರನ್‌, ಕೋಲ್ಕತಾದಲ್ಲಿ ಆಸ್ಪ್ರೇಲಿಯಾ ವಿರುದ್ಧ ಲಕ್ಷ್ಮಣ್‌ ಜತೆ ಅವರಾಡಿದ 374 ರನ್‌ಗಳ ಜೊತೆಯಾಟ ಹೀಗೆ ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಕೊಂಡಾಡಲಾಗಿದೆ. ಯುಟ್ಯೂಬ್‌ನಲ್ಲಿ ಈ ಹಾಡು ಭಾರೀ ಹಿಟ್‌ ಆಗಿದ್ದು, ಸಾಮಾಜಿಕ ತಾಣಗಳಲ್ಲೂ ವೈರಲ್‌ ಆಗಿದೆ.

’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ 164 ಹಾಗೂ ಏಕದಿನ ಕ್ರಿಕೆಟ್’ನಲ್ಲಿ 344 ಪಂದ್ಯಗಳನ್ನಾಡಿ ಕ್ರಮವಾಗಿ 13288 ಹಾಗೂ 10889 ರನ್ ಬಾರಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?