Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

Suvarna News   | Asianet News
Published : Nov 08, 2021, 09:50 PM ISTUpdated : Nov 08, 2021, 10:05 PM IST
Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

ಸಾರಾಂಶ

*ಭಾರತ ತಂಡದ ಕೀರ್ತಿ ಹೆಚ್ಚಿಸಲಿದ್ದಾರೆ ರಾಹುಲ್‌ *3-4 ವರ್ಷಗಳ ಕಾಲ ಆಡಲು ಬಹಳಷ್ಟು ಆಟಗಾರರಿದ್ದಾರೆ *ವಿರಾಟ್ ತಂಡದ ನಾಯಕರಾಗಿ ಅದ್ಭುತ ಕೆಲಸ ಮಾಡಿದ್ದಾರೆ

ದುಬೈ (.8): ರಾಹುಲ್ ದ್ರಾವಿಡ್ (Rahul Dravid) ಅವರು ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ  ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. 2021 ರ T20 ವಿಶ್ವಕಪ್‌ನ ಅಂತಿಮ ಸೂಪರ್ 12 ಪಂದ್ಯದಲ್ಲಿ ಭಾರತ ನಮೀಬಿಯಾ (India vs Namibia) ಪಂದ್ಯದಲ್ಲಿ ರವಿ ಶಾಸ್ತ್ರಿ (Ravi Shastri) ಮುಖ್ಯ ಕೋಚ್‌ (Head Coach) ಆಗಿ ಕೊನೆ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.  ಪಂದ್ಯಾವಳಿಯ ನಂತರ ಶಾಸ್ತ್ರಿ ಅವರ ಮುಖ್ಯ ತರಬೇತುದಾರ ಒಪ್ಪಂದವು ಕೊನೆಗೊಳ್ಳಲಿದೆ ಮತ್ತು ಅವರ ಸ್ಥಾನವನ್ನು ಮಾಜಿ ನಾಯಕ ದ್ರಾವಿಡ್ ತುಂಬಲಿದ್ದಾರೆ.

T20 World Cup: ರಾಷ್ಟ್ರೀಯ ತಂಡಕ್ಕೆ ಮೊದಲ ಆದ್ಯತೆ ನೀಡಿ : ಕಪೀಲ್‌ ದೇವ್!

ಭಾರತ ನಮೀಬಿಯಾ ಪಂದ್ಯಕ್ಕೂ ಮುನ್ನ ಮಾತನಾಡಿದ ರವಿ ಶಾಸ್ತ್ರಿ "ರಾಹುಲ್ ದ್ರಾವಿಡ್ ಶ್ರೇಷ್ಠ ತಂಡವನ್ನು ಪಡೆದುಕೊಂಡಿದ್ದಾರೆ ಮತ್ತು ಅವರು ಜವಾಬ್ದಾರಿಯುತ ವ್ಯಕ್ತಿಯಾಗಿ ತಂಡದ ಕೀರ್ತಿಯನ್ನು ಹೆಚ್ಚಿಸಲಿದ್ದಾರೆ " ಎಂದು ಹೇಳಿದ್ದಾರೆ. ಇಂದಿನ ಪಂದ್ಯಾವಳಿಯ ಬಳಿಕ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಟಿ20 ಪಂದ್ಯಗಳಲ್ಲಿ ಭಾರತದ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಆದರೆ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ನಾಯಕರಾಗಿ ಮುಂದುವರಿಯಲಿದ್ದಾರೆ. ಕೊಹ್ಲಿಯಂತಹ ಹಿರಿಯ ಆಟಗಾರರು ಇದ್ದಾರೆ ಎಂದರೆ ಭಾರತ ತಂಡವು ಹಠಾತ್ ಪರಿವರ್ತನೆಗೆ ತಳ್ಳಲ್ಪಟ್ಟಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.

ಇನ್ನೂ 3-4 ವರ್ಷಗಳ ಕಾಲ ಆಡುವ ಆಟಗಾರರಿದ್ದಾರೆ

"ಅವರ ನಿಲುವು ಮತ್ತು ಅವರ ಅನುಭವದೊಂದಿಗೆ, ಅವರು ಮುಂದಿನ ದಿನಗಳಲ್ಲಿ  ಈ ತಂಡದ ಕಾರ್ಯಕ್ಷಮತೆಯನ್ನು  ಹೆಚ್ಚಿಸಬಹುದು. ಇನ್ನೂ 3-4 ವರ್ಷಗಳ ಕಾಲ ಆಡುಲು ಬಹಳಷ್ಟು ಆಟಗಾರರಿದ್ದಾರೆ, ಇದು ಬಹಳ ಮುಖ್ಯವಾಗಿದೆ. ಇದು ರಾತ್ರೋರಾತ್ರಿ ಪರಿವರ್ತನೆಯಾಗುತ್ತಿರುವ ತಂಡವಲ್ಲ. ಹಾಗಾಗಿ ಈ ವಿಷಯ ತಂಡದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ರವಿ  ಶಾಸ್ತ್ರಿ ಹೇಳಿದ್ದಾರೆ

T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

"ವಿರಾಟ್ ಇನ್ನೂ ಇದ್ದಾರೆ, ಅವರು ತಮ್ಮ ತಂಡದ ನಾಯಕರಾಗಿ ಅದ್ಭುತ ಕೆಲಸ ಮಾಡಿದ್ದಾರೆ. ವಾಸ್ತವವಾಗಿ, ಅವರು ಕಳೆದ 5-6 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ . ತಂಡ ಹೇಗೆ ಆಡಬೇಕೆಂಬ ವಿಷಯದಲ್ಲಿ ಅವರ ನಿರ್ಧಾರಗಳು  ಮತ್ತ ಅವರ ಮಾರ್ಗದರ್ಶನದಲ್ಲಿ ಮುನ್ನಡೆದ  ಆಟಗಾರರ ಬಹಳಷ್ಟು ಕ್ರೆಡಿಟ್ ವಿರಾಟ್‌ಗೆ ಸಲ್ಲುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಸೆಮಿಫೈನಲ್ ಕದನ

ಮೊದಲ ಗುಂಪಿನಿಂದ ಇಂಗ್ಲೆಂಡ್(England) ಹಾಗೂ ಆಸ್ಟ್ರೇಲಿಯಾ(Australia) ಸೆಮಿಫೈನಲ್ ಹಂತ ಪ್ರವೇಶಿಸಿದೆ. ಎರಡನೇ ಗುಂಪಿನಿಂದ ಪಾಕಿಸ್ತಾನ(Pakistan) ಹಾಗೂ ನ್ಯೂಜಿಲೆಂಡ್(New zealand) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿದೆ.

ಇನ್ನು ಶ್ರೀಲಂಕಾ)Srilanka), ಬಾಂಗ್ಲಾದೇಶ(Bangladesh), ಆಫ್ಘಾನಿಸ್ತಾನ(Afghanistan) ನಮಿಬಿಯಾ(Namibia), ಸ್ಕಾಟ್‌ಲೆಂಡ್(Scotland) ತಂಡಗಳು ಕೂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಕಣದಲ್ಲಿ ನಾಲ್ಕು ತಂಡಗಳು ಮಾತ್ರ ಉಳಿದುಕೊಂಡಿದೆ. ಈ ತಂಡಗಳ ಪೈಕಿ ಫೈನಲ್ ಪ್ರವೇಶಿಸುವ ತಂಡ ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ನವೆಂಬರ್ 10 ರಂದು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಡೆದರೆ, ನವೆಂಬರ್ 11 ರಂದು 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇನ್ನ ನವೆಂಬರ್ 14 ರಂದು ಫೈನಲ್(T20 World cup 2021 Final) ಪಂದ್ಯ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ