ಫೆಬ್ರವರಿ 18ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ರವಿಕುಮಾರ್ ಸಮರ್ಥ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಕರುಣ್ ನಾಯರ್‌ರನ್ನು ನಾಯಕ ಪಟ್ಟದಿಂದ ಕೆಳಗಿಳಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಫೆ.02): ವಿಜಯ್ ಹಜಾರೆ ಏಕದಿನ ಟೂರ್ನಿಗಾಗಿ 22 ಆಟಗಾರರ ಕರ್ನಾಟಕ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಆರ್. ಸಮರ್ಥ ತಂಡದ ನಾಯಕರಾಗಿದ್ದಾರೆ. ಉಳಿದಂತೆ ಮುಷ್ತಾಕ್ ಅಲಿ ಟೂರ್ನಿಗೆ ಸ್ಥಾನ ಪಡೆದಿದ್ದ ಬಹುತೇಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಫೆಬ್ರವರಿ 18 ರಿಂದ ವಿಜಯ್ ಹಜಾರೆ ಟೂರ್ನಿಯನ್ನು ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ. ಎಲ್ಲಿ ಪಂದ್ಯಗಳು ನಡೆಯಲಿವೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
undefined
ವಿಜಯ್ ಹಜಾರೆ ಟ್ರೋಫಿ: ಮುಂಬೈ ಸಂಭಾವ್ಯರ ಪಟ್ಟಿಯಲ್ಲಿ 104 ಕ್ರಿಕೆಟಿಗರು!
ನಾಯಕತ್ವದಿಂದ ಕರುಣ್‌ಗೆ ಕೊಕ್
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ಕರುಣ್ ನಾಯರ್‌ರನ್ನು ನಾಯಕತ್ವದಿಂದ ಕೆಳಕ್ಕಿಳಿಸಲಾಗಿದೆ. ವಿಜಯ್ ಹಜಾರೆ ಏಕದಿನ ಟೂರ್ನಿಗೆ ಆರ್. ಸಮರ್ಥಗೆ ನಾಯಕತ್ವ ಜವಾಬ್ದಾರಿ ವಹಿಸಲಾಗಿದೆ.
Karnataka squad for the Vijay Hazare Trophy 2020-21. pic.twitter.com/MOnxysc00a
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka)ತಂಡ: ಸಮರ್ಥ (ನಾಯಕ), ಪಡಿಕ್ಕಲ್, ರೋಹನ್, ನಿಶ್ಚಲ್, ಕರುಣ್, ಶ್ರಿಜಿತ್, ಶರತ್, ರಕ್ಷಿತ್, ಅನಿರುದ್ಧ, ಸಿದ್ಧಾರ್ಥ್, ನಿಕ್ಕಿನ್, ಶ್ರೇಯಸ್, ಗೌತಮ್, ಸುಚಿತ್, ಆದಿತ್ಯ, ಶುಭಾಂಗ್, ಮಿಥುನ್, ಪ್ರಸಿದ್ಧ್, ರೋನಿತ್, ವೈಶಾಕ್, ಮನೋಜ್, ದರ್ಶನ್.