ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!

Published : Dec 09, 2025, 12:39 PM IST
R Ashwin Shares Sunny Leone Picture

ಸಾರಾಂಶ

R Ashwin Sunny Leone Post Decoded The IPL Link to Uncapped All-rounder Sunny Sandhu ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಆರ್‌.ಅಶ್ವಿನ್‌, ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದ್ದರು. 

ಬೆಂಗಳೂರು (ಡಿ.9): ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಆರ್‌.ಅಶ್ವಿನ್‌ ಸೋಶಿಯಲ್‌ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳಿಗೆ ತಲೆಗೆ ಹುಳ ಬಿಡುವ ಕೆಲಸ ಮಾಡಿದರು. ಮಂಗಳವಾರ ತಮ್ಮ ಅಧಿಕರತ ಎಕ್ಸ್‌ ಪೇಜ್‌ನಲ್ಲಿ ಅವರು ಮಾಜಿ ನೀಲಿಚಿತ್ರ ತಾರೆ ಹಾಗೂ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಫೋಟೋ ಪೋಸ್ಟ್‌ ಮಾಡುವ ಮೂಲಕ ಗಮನಸೆಳೆದರು. ಅನುಭವಿ ಕ್ರಿಕೆಟಿಗ ಎರಡು ಇಮೇಜ್‌ನ ಕೊಲಾಜ್‌ಅನ್ನು ಅವರು ಫೋಸ್ಟ್‌ ಮಾಡಿದ್ದಾರೆ. ಒಂಚು ಚಿತ್ರದಲ್ಲಿ ಸನ್ನಿ ಲಿಯೋನ್‌ ಇದ್ದರೆ, ಇನ್ನೊಂದು ಫೋಟೋದಲ್ಲಿ ಚೆನ್ನೈನ ಪ್ರಮುಖ ಸಾಧು ಸ್ಟ್ರೀಟ್‌ ಫೋಟೋ ಹಾಕಿದ್ದರು. ಆದರೆ ಅಶ್ವಿನ್‌ ಪೇಜ್‌ನಲ್ಲಿ ಸನ್ನಿ ಲಿಯೋನ್‌ ಫೋಟೋ ಬಂದಿದ್ದೇಕೆ ಎಂದು ಅಭಿಮಾನಿಗಳು ತಲೆ ಕೆರೆದುಕೊಳ್ಳಲು ಆರಂಭಿಸಿದ್ದರು. ಅದರಲ್ಲಿ ಕೆಲವೇ ಕೆಲವರು ಮಾತ್ರ 37 ವರ್ಷದ ಆರ್‌.ಅಶ್ವಿನ್‌ ಅವರು ಹೇಳಲು ಹೊರಟಿರುವ ವಿಚಾರವನ್ನು ಸರಿಯಾಗಿ ಗೆಸ್ ಮಾಡಿದ್ದಾರೆ.

ಅಶ್ವಿನ್‌ ಅವರು ಆ ಫೋಟೋ ಮೂಲಕ ತಮಿಳು ನಾಡು ಆಲ್ರೌಂಡರ್‌ ಸನ್ನಿ ಸಂಧು ಬಗ್ಗೆ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20ಯಲ್ಲಿ ಪಾದಾರ್ಪಣೆ ಮಾಡಿ ಗಮನಸೆಳೆದಿದ್ದರು.

9 ಎಸೆತಗಳಲ್ಲಿ 30 ರನ್‌ ಬಾರಿಸಿದ್ದ ಸನ್ನಿ ಸಂಧು

ಸೋಮವಾರ ನಡೆದ ಪಂದ್ಯದಲ್ಲಿ ಸನ್ನಿ ಸಂಧು ಸೌರಾಷ್ಟ್ರ ವಿರುದ್ಧ ಪಂದ್ಯದ ಗೆಲುವಿಗೆ ಕಾರಣವಾದ ಚಿಕ್ಕ ಹಾಗೂ ಚೊಕ್ಕ ಇನ್ನಿಂಗ್ಸ್‌ ಆಡಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ಪರ ಕೇವಲ 2ನೇ ಪಂದ್ಯವಾಡುತ್ತಿರುವ ಸನ್ನಿ ಸಂಧು, ಕೇವಲ 9 ಎಸೆತಗಳಲ್ಲಿ 30 ರನ್‌ ಬಾರಿಸಿದ್ದರು. ಅದರೊಂದಿಗೆ 55 ಎಸೆತಗಳಲ್ಲಿ ಅಜೇಯ 101 ರನ್‌ ಬಾರಿಸಿದ್ದ ಸಾಯಿ ಸುದರ್ಶನ್‌ ಅವರೊಂದಿಗೆ ಪ್ರಮುಖ 37 ರನ್‌ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ಮುಂಬರುವ ಐಪಿಎಲ್‌ ಹರಾಜಿನಲ್ಲಿ ಫ್ರಾಂಚೈಸಿಗಳು ಅನ್‌ಕ್ಯಾಪ್ಡ್‌ ಆಲ್ರೌಂಡರ್‌ ಆಗಿ 22 ವರ್ಷದ ಸನ್ನಿ ಸಂಧುರನ್ನು ಆಯ್ಕೆ ಮಾಡಿಕೊಳ್ಳಬಹುದು ಅನ್ನೋ ಸೂಚನೆಯನ್ನೂ ಅಶ್ವಿನ್‌ ತಮ್ಮ ಪೋಸ್ಟ್‌ನ ಮೂಲಕ ನೀಡಿದ್ದರು.

ಮೊದಲು ಅಬ್ಬರಿಸಿದ್ದ ಸೌರಾಷ್ಟ್ರ

ಇದೇ ಪಂದ್ಯದಲ್ಲಿ ಮೊದಲು ಅಬ್ಬರಿಸಿದ್ದ ಸೌರಾಷ್ಟ್ರ ತಂಡದ ಜೈದೇವ್‌ ಉನಾದ್ಕತ್ ಹಾಗೂ ಚೇತನ್‌ ಸಕಾರಿಯಾ 183 ರನ್‌ಗಳ ಚೇಸಿಂಗ್‌ ವೇಳೆ ತಮಿಳು ನಾಡು ತಂಡದ 3 ವಿಕೆಟ್‌ಗಳನ್ನು ಕೇವಲ 29 ರನ್‌ಗೆ ಉರುಳಿಸಿದ್ದರು. ಕೊನೆಗೆ ಸಾಯಿ ಸುದರ್ಶನ್‌ ಏಕಾಂಗಿ ಇನ್ನಿಂಗ್ಸ್‌, ಕೊನೆಯಲ್ಲಿ ಸನ್ನಿ ಸಂಧು ಚಿಕ್ಕ ಇನ್ನಿಂಗ್ಸ್‌ ತಂಡದ ಗೆಲುವನ್ನು ಖಚಿತಪಡಿಸಿತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತ ಸೋಮವಾರ ಮುಕ್ತಾಯಗೊಂಡಿದೆ. ತಂಡಗಳು ಸೂಪರ್ ಲೀಗ್‌ನಲ್ಲಿ ತಮ್ಮ ಸ್ಥಾನಗಳನ್ನು ದೃಢಪಡಿಸಿದವು. ಮುಂಬೈ ಮತ್ತು ಆಂಧ್ರ ತಂಡಗಳು ಎ ಗುಂಪಿನಿಂದ, ಹೈದರಾಬಾದ್ ಮತ್ತು ಮಧ್ಯಪ್ರದೇಶ ತಂಡಗಳು ಬಿ ಗುಂಪಿನಿಂದ, ಪಂಜಾಬ್ ಮತ್ತು ಹರಿಯಾಣ ತಂಡಗಳು ಸಿ ಗುಂಪಿನಿಂದ ಮತ್ತು ರಾಜಸ್ಥಾನ ಮತ್ತು ಜಾರ್ಖಂಡ್ ತಂಡಗಳು ಡಿ ಗುಂಪಿನಿಂದ ಸ್ಥಾನ ಪಡೆದಿವೆ. ಈಗ ಅವುಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು ಮತ್ತು ಆ ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಡಿಸೆಂಬರ್ 18 ರಂದು ಪುಣೆಯಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!