
ನವದೆಹಲಿ(ಜು.04): ಚಂಡೀಗಢ ಬಳಿ ಆಯೋಜಿಸಿದ್ದ ಟಿ20 ಪಂದ್ಯವನ್ನು ಶ್ರೀಲಂಕಾದಲ್ಲಿ ನಡೆಯುತ್ತಿದೆ ಎಂದು ಸುಳ್ಳು ಹೇಳಿ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ ಪ್ರಸಂಗ ಬಿಸಿಸಿಐ ಗಮನವನ್ನೂ ಸೆಳೆದಿದೆ.
ಜೂನ್ 29ರಂದು ಚಂಡೀಗಢದಿಂದ 16 ಕಿ.ಮೀ ದೂರದಲ್ಲಿರುವ ಸವಾರ ಎನ್ನುವ ಗ್ರಾಮದಲ್ಲಿ ನಡೆದ ಟಿ20 ಪಂದ್ಯವನ್ನು ‘ಉವಾ ಟಿ20 ಲೀಗ್’ ಎನ್ನುವ ಹೆಸರಲ್ಲಿ ಶ್ರೀಲಂಕಾದ ಬಾದುಲ್ಲಾ ನಗರದಲ್ಲಿ ನಡೆಯುತ್ತಿದೆ ಎಂದು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯಾವೊಬ್ಬ ಕ್ರಿಕೆಟಿಗನೂ ಪಾಲ್ಗೊಂಡಿರಲಿಲ್ಲ, ಪಂಜಾಬಿನ ಕೆಲವು ಸ್ಥಳೀಯ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಲರ್‌ಫುಲ್ ಜೆರ್ಸಿ ತೊಟ್ಟು ಕ್ರಿಕೆಟ್ ಆಡಿದ್ದರು. ಶ್ರೀಲಂಕಾ ಮಾಜಿ ಆಲ್ರೌಂಡರ್ ಫರ್ವೇಜ್ ಮೊಹರೂಫ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತ್ತು. ಆದರೆ ಈ ವರದಿಯನ್ನು ಲಂಕಾ ಮಾಜಿ ವೇಗಿ ತಳ್ಳಿಹಾಕಿದ್ದಾರೆ.
2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ; ಸತತ 10 ಗಂಟೆ ವಿಚಾರಣೆ ಎದುರಿಸಿದ ಸಂಗಕ್ಕಾರ !
ಇದರ ಬೆನ್ನಲ್ಲೇ ಪಂಬಾಬ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಂದ್ಯದಲ್ಲಿ ದೊಡ್ಡ ಮಟ್ಟದ ಬೆಟ್ಟಿಂಗ್ ನಡೆದಿರುವ ಶಂಕೆ ಇದ್ದು, ಯಾರಾರಯರು ಭಾಗಿಯಾಗಿದ್ದರು ಎನ್ನುವ ಮಾಹಿತಿ ಸಂಗ್ರಹಿಸಲು ಬಿಸಿಸಿಐ ಕಾತರಿಸುತ್ತಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಾ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.