Kohli daughter threat case;ಕೊಹ್ಲಿ ಪುತ್ರಿಗೆ ರೇಪ್ ಬೆದರಿಕೆ ಹಾಕಿದ ಹೈದರಾಬಾದ್ ಕಿಡಿಗೇಡಿ ಅರೆಸ್ಟ್!

By Suvarna News  |  First Published Nov 10, 2021, 8:46 PM IST
  • ಕೊಹ್ಲಿ ಮಗಳಿಗೆ ರೇಪ್ ಬೆದರಿಕೆ ಹಾಕಿದ ಕಿಡಿ ಗೇಡಿ ಅರೆಸ್ಟ್
  • ಟಿ20 ವಿಶ್ವಕಪ್ ಪಂದ್ಯದ ಸೋಲಿನ ಬಳಿಕ ಬೆದರಿಕೆ ಹಾಕಿದ್ದ ವ್ಯಕ್ತಿ
  • ಹೈದರಾಬಾದ್ ವ್ಯಕ್ತಿಯನ್ನು ಬಂಧಿಸಿದ ಪೊಲೀಸ್

ನವದೆಹಲಿ(ನ.10):  T20 World Cup 2021 ಟೂರ್ನಿಯಲ್ಲಿ ಟೀಂ ಇಂಡಿಯಾ(Team India) ನಿರೀಕ್ಷಿತ ಪ್ರದರ್ಶನ ನೀಡಿದೆ ಟೂರ್ನಿಯಿಂದ ಹೊರಬಿದ್ದಿದೆ. ಪಾಕಿಸ್ತಾನ ವಿರುದ್ಧದ ಸೋಲಿನ ಬಳಿಕ ವೇಗಿ ಮೊಹಮ್ಮದ್ ಶಮಿ ವಿರುದ್ಧ ನಿಂದನೆ, ಟೀಕೆಗಳು ಕೇಳಿಬಂದಿತ್ತು. ಶಮಿ ಪರ ನಿಂತ ನಾಯಕ ವಿರಾಟ್ ಕೊಹ್ಲಿ(Virat Kohli) ವಿರುದ್ಧವೂ ಅಪಸ್ವರ ಕೇಳಿಬಂದಿತ್ತು. ಇದಾದ ಬೆನ್ನಲ್ಲೇ ವಿರಾಟ್ ಕೊಹ್ಲಿ 10 ತಿಂಗಳ ಮಗಳು ವಮಿಕಾ(Vamika) ಮೇಲೆ ರೇಪ್ ಬೆದರಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮುಂಬೈ ಪೂಲೀಸ್, ಅತ್ಯಾಚಾರ ಬೆದರಿಕೆ ಹಾಕಿದ  ಕಿಡಿಗೇಡಿಯನ್ನು ಹೈದರಾಬಾದ್‌ನಲ್ಲಿ(Hyderabad) ಬಂಧಿಸಿದ್ದಾರೆ.

23 ವರ್ಷದ ಹೈದರಾಬಾದ್‌ನ ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿ ಬಂಧಿತ(Arrest) ಕಿಡಿಗೇಡಿ. ಈತ ಟ್ವಿಟರ್‌ನಲ್ಲಿ ತನ್ನ ಹೆಸರನ್ನು ಬದಲಾಯಿಸಿದ್ದಾರೆ. ಉರ್ದುವಿನಲ್ಲಿ ಹೆಸರು ಬರೆದುಕೊಂಡಿರುವ ಈತ, ತಾನೊಬ್ಬ ಪಾಕಿಸ್ತಾನಿ ಎಂದು ಟ್ವಿಟರ್‌ನಲ್ಲಿ ಬಿಂಬಿಸಿದ್ದಾನೆ. ಬಳಿಕ ಟೀಂ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವರ ವಿರುದ್ಧ ಸತತ ಟೀಕೆ,ನಿಂದನೆ ಮಾಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಪುತ್ರಿ ಮೇಲೆ ರೇಪ್ ಬೆದರಿಕೆ ಕೂಡ ಹಾಕಿದ್ದಾರೆ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Tap to resize

Latest Videos

ಬಂಧಿತ ಶ್ರೀನಿವಾಸ್‌ನನ್ನು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. ಮೂಲತಹ ಸಾಫ್ಟ್‌ವೇರ್ ಎಂಜನಿಯರ್ ಆಗಿರುವ ಶ್ರಿನಿವಾಸ್, ಫುಡ್ ಡೆಲಿವರಿ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತ್ಯಾಚಾರ ಬೆದರಿಕೆ ಹಾಕಿ ತನ್ನ ಪಾಡಿಗೆ ತಾನಿದ್ದ ಶ್ರೀನಿವಾಸ್ ಇದೀಗ ಸಂಕಷ್ಟ ಎದುರಿಸಬೇಕಾಗಿದೆ.

ಮಗಳಿಗೆ ಅತ್ಯಾಚಾರ ಬೆದರಿಕೆ: ವಿಕೃತ ಮನಸ್ಸುಗಳಿಗೆ ಅನುಷ್ಕಾ ಶರ್ಮಾ ಹೇಳಿದ್ದಿಷ್ಟು!

undefined

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನ ವಿರುದ್ದ ಸೋಲು ಕಂಡಿತ್ತು. ಈ ಸೋಲು ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ ತಂದಿತ್ತು. ಆದರೆ ಪಾಕ್ ಅಭಿಮಾನಿಗಳಂತೆ ಭಾರತದ ಅಭಿಮಾನಿಗಳು ವರ್ತಿಸಿರಲಿಲ್ಲ. ಟೀಂ ಇಂಡಿಯಾವನ್ನು ಬೆಂಬಲಿಸಿದ್ದರು. ಇತ್ತ ಪಾಕಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾ ವೇಗಿ ಶಮಿ ವಿರುದ್ಧ ನಿಂದನೆ ಮಾಡಿದ್ದಾರೆ. ಶಮಿ ಪಾಕಿಸ್ತಾನ ಐಎಸ್ಐ ಎಜೆಂಟ್, ಪಾಕಿಸ್ತಾನ ಎಜೆಂಟ್. ಶಮಿ ಪಾಕಿಸ್ತಾನ ಪ್ರೇಮಿ. ಹೀಗಾಗಿ ವಿಕೆಟ್ ಕಬಳಿಸದೇ ದುಬಾರಿಯಾಗಿದ್ದಾರೆ ಎಂದು ಟೀಕಿಸಲಾಗಿತ್ತು. ಇದರ ಜೊತೆಗೆ ಕೆಲ ಭಾರತೀಯ ಕಿಡಿಗೇಡಿಗಳು ಸೇರಿಕೊಂಡಿದ್ದರು. ಶಮಿ ವಿರುದ್ಧ ಸತತ ಟೀಕೆಗೆ ತಿರುಗೇಟು ನೀಡಿದ ನಾಯಕ ವಿರಾಟ್ ಕೊಹ್ಲಿ, ಶಮಿ ಬೆಂಬಲಕ್ಕೆ ನಿಂತಿದ್ದರು.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಬಿಸಿಸಿಐ ಸೇರಿದಂತೆ ಹಲವರು ಶಮಿ ಬೆಂಬಲಕ್ಕೆ ಆಗಮಿಸಿದ್ದರು. ಈ ಜಟಾಪಟಿ ನಡುವೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ದವೂ ಸೋಲು ಕಂಡಿತು. ಈ ಸೋಲು ಟೀಂ ಇಂಡಿಯಾದ ಸೆಮಿಫೈನಲ್ ಅವಕಾಶವನ್ನೇ ಕಸಿದುಕೊಂಡಿತು. ಇದೇ ವೇಳೆ ಹಲವರು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದ್ದರು. ಇತ್ತ ಹೈದರಾಬಾದ್ ಕಿಡಿಗೇಡಿ ಒಂದು ಹೆಜ್ಜೆ ಮುಂದೆ ಹೋಗಿ ವಿರಾಟ್ ಕೊಹ್ಲಿ ಪುತ್ರಿ ವಮಿಕಾ ಮೇಲೆ ರೇಪ್ ಬೆದರಿಕೆ ಹಾಕಿದ್ದ.

Virat Kohli Birthday: 10 ತಿಂಗಳ ಮಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ವಿರಾಟ್ ಕೊಹ್ಲಿ..!

ಸಾಮಾಜಿಕ ಜಾಲತಾಣಧಲ್ಲಿನ ಈ ಬೆದರಿಕೆ ಸ್ಕೀನ್ ಶಾಟ್ ಎಲ್ಲಡೆ ಹರಿದಾಡತೊಡಗಿತು. ಈ ವರದಿ ಪಡೆದ ದೆಹಲಿ ಮಹಿಳಾ ಪೊಲೀಸ್ ಆಯುಕ್ತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತ ಮುಂಬೈ ಪೊಲೀಸರು ಪ್ರಕರಣದ ತನಿಖೆ ಚರುಕೊಳಿಸಿದ್ದರು.  ಇದೀಗ ಎಲ್ಲಾ ದಾಖಲೆ ಕಲೆ ಹಾಕಿ ಆರೋಪಿಯನ್ನು ಬಂಧಿಸಲಾಗಿದೆ. ಇದೀಗ ಆರೋಪಿಯನ್ನು ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುವ ಕಿಡಿಗೇಡಿಗಳಿಗೆ ಪಾಠವಾಗಲಿದೆ.

click me!