
ನವದೆಹಲಿ(ಮಾ.29): ಭಾರತ ಮಹಿಳಾ ತಂಡದ ಏಕದಿನ ನಾಯಕಿ ಮಿಥಾಲಿ ರಾಜ್ ಹಾಗೂ ಪಿ.ವಿ.ಸಿಂಧು ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮನಃಪೂರ್ವಕವಾಗಿ ಶ್ಲಾಘಿಸಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ತೋರುತ್ತಿರುವ ಸಾಧನೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ನವದೆಹಲಿಯಲ್ಲಿ ಭಾನುವಾರವಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಶೂಟಿಂಗ್‌ನಲ್ಲೂ ಸಾಧನೆ ಮೆರೆದ ಭಾರತೀಯ ಶೂಟರ್‌ಗಳನ್ನು ಅಭಿನಂದಿಸಿದ್ದಾರೆ.
ಭಾನುವಾರ(ಮಾ.28)ದಂದು ನಡೆದ ಮನ್ ಕೀ ಬಾತ್‌ನಲ್ಲಿ ಮಿಥಾಲಿ ರಾಜ್ ಸಾಧನೆಯನ್ನು ಹೊಗಳಿದ ಮೋದಿ, ಮಹಿಳಾ ಕ್ರಿಕೆಟ್‌ಗೆ ಮಿಥಾಲಿ ರಾಜ್ ಕೊಡುಗೆ ಅದ್ಭುತ. ತಮ್ಮ 2 ದಶಕದ ವೃತ್ತಿಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮದ ಕಥೆ ಹಾಗೂ ಯಶಸ್ಸು ಮಹಿಳಾ ಆಟಗಾರ್ತಿಯರಿಗೆ ಮಾತ್ರವಲ್ಲ ಪುರುಷರ ಕ್ರಿಕೆಟಿಗರಿಗೂ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.
ಮಹಿಳಾ ಕ್ರಿಕೆಟ್: 10 ಸಾವಿರ ರನ್ ಬಾರಿಸಿ ಹೊಸ ದಾಖಲೆ ಬರೆದ ಮಿಥಾಲಿ ರಾಜ್..!
ಮಿಥಾಲಿ ರಾಜ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ಸಾವಿರ ರನ್ ಪೂರೈಸಿದ್ದರು. ಈ ಸಾಧನೆ ಮಾಡಿದ ಭಾರತದ ಏಕೈಕ ಆಟಗಾರ್ತಿ ಮಿಥಾಲಿ ಆಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 7,000ಕ್ಕಿಂತ ಅಧಿಕ ರನ್ ಬಾರಿಸಿರುವ ವಿಶ್ವದ ಏಕೈಕ ಆಟಗಾರ್ತಿ ಮಿಥಾಲಿ. ಇನ್ನು ಮೋದಿ ತನ್ನ ಮನ್ ಕೀ ಬಾತ್‌ನಲ್ಲಿ ಕಳೆದ ತಿಂಗಳಷ್ಟೇ ನಡೆದ ಸ್ವಿಸ್ ಓಪನ್‌ನಲ್ಲಿ ರನ್ನರ್ ಅಪ್ ಪಿ.ವಿ.ಸಿಂಧು ಸಾಧನೆಯನ್ನು ಕೊಂಡಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.