ಇಡ್ಲಿ- ಸಾಂಬಾರ್‌ to ರೋಹಿತ್-ಬ್ಯಾಟ್; ಗೋಯೆಂಕಾ ಕಾಂಬಿನೇಷನ್‌ಗೆ ಮೆಚ್ಚುಗೆ!

Suvarna News   | Asianet News
Published : Jan 19, 2020, 11:08 PM IST
ಇಡ್ಲಿ- ಸಾಂಬಾರ್‌ to ರೋಹಿತ್-ಬ್ಯಾಟ್; ಗೋಯೆಂಕಾ ಕಾಂಬಿನೇಷನ್‌ಗೆ ಮೆಚ್ಚುಗೆ!

ಸಾರಾಂಶ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆಸೀಸ್ ವಿರುದ್ಧದ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಬ್ಯಾಟಿಂಗ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಉದ್ಯಮಿ ಹರ್ಷಾ ಗೋಯೆಂಕಾ ಕಾಂಬಿನೇಷನ್ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

ಮುಂಬೈ(ಜ.19): ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದುಕೊಂಡಿತು. ಬೆಂಗಳೂರು ಪಂದ್ಯದಲ್ಲಿ ರೋಹಿತ್ ಶರ್ಮಾ 119 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನ ಬಳಿಕ ಉದ್ಯಮಿ ಹರ್ಷಾ ಗೋಯೆಂಕಾ ಮಾಡಿದ ಟ್ವೀಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಘರ್ಜಿಸಿದ ಟೀಂ ಇಂಡಿಯಾ; ಏಕದಿನ ಸರಣಿ ಕೈವಶ!.

ಹರ್ಷಾ ಗೋಯೆಂಕಾ ಭಾರತದಲ್ಲಿನ ಬೆಸ್ಟ್ ಕಾಂಬಿನೇಷನ್ ಕುರಿತು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಗೋಯೆಂಕಾ ಅವರ ಅತ್ಯುತ್ತಮ ಕಾಂಬಿನೇಷನ್ ಯಾವುದು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಪಿಜ್ಜಾ ಹಾಗೂ ಕೋಕ್‌ನಿಂದ ಆರಂಭಿಸಿರುವ ಗೋಯೆಂಕಾ, ರೋಹಿತ್ ಶರ್ಮಾ ಹಾಗೂ ಸಿಎಟ್ ಬ್ಯಾಟ್ ಕಾಂಬಿನೇಷನ್‌ಗೆ ಅಂತ್ಯಗೊಳಿಸಿದ್ದಾರೆ. ರೋಹಿತ್ ಅದ್ಭುತ ಇನಿಂಗ್ಸ್ ಬಳಿಕ ಗೋಯೆಂಕಾ ಮಾಡಿದ ಟ್ವೀಟ್ ಕ್ರಿಕೆಟ್ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.

 

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ; ಜಯಸೂರ್ಯ ದಾಖಲೆ ಪುಡಿ ಪುಡಿ!

ಪಿಜ್ಜಾ ಹಾಗೂ ಕೋಕ್, ಆಲೂ ಚಿಪ್ಸ್ ಹಾಗೂ ಕೆಚಪ್,ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಟಾಮ್ ಹಾಗೂ ಜೆರಿ, ತಂದೆ ಮತ್ತು ತಾಯಿ, ಬೆಲ್ ಹಾಗೂ ತಲೆದಿಂಬು, ಇಡ್ಲಿ ಹಾಗೂ ಸಾಂಬಾರ್, ರೋಹಿತ್ ಶರ್ಮಾ ಹಾಗೂ ಸಿಇಎಟಿ ಬ್ಯಾಟ್ ಎಂದು ಹರ್ಷಾ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

ಹರ್ಷಾ ಗೋಯೆಂಕಾ ಅವರ ಫೇವರಿಟ್ ಕಾಂಬಿನೇಷನ್‌ನಲ್ಲಿ ಇದೀಗ ರೋಹಿತ್ ಶರ್ಮಾ ಹಾಗೂ ಬ್ಯಾಟ್ ಸೇರಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿ ಸರಣಿಯಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯುತ್ತಿದ್ದಾರೆ. ರೋಹಿತ್ ಶರ್ಮಾ ಪ್ರತಿ ಸೆಂಚುರಿ, ಹಾಫ್ ಸೆಂಚುರಿ ಸಿಡಿಸಿ ಬ್ಯಾಟ್ ಮೇಲಕ್ಕೆತ್ತಿ ಸಂಭ್ರಮಿಸುತ್ತಾರೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ಶರ್ಮಾ ಬ್ಯಾಟ್ ಸ್ಪಾನ್ಸರ್ ಸಿಎಇಟಿ ಗೋಯೆಂಕಾ ಲಿಸ್ಟ್‌ಗೇ ಸೇರಿಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ