ಮತ್ತೆ ಮತ್ತೆ ನೋಡಬೇಕೆನಿಸುವ ರೋಹಿತ್ ಹಿಡಿದ ಅದ್ಭುತ ಕ್ಯಾಚ್..!

By Web Desk  |  First Published Nov 22, 2019, 5:39 PM IST

ಬಾಂಗ್ಲಾ ವಿರುದ್ಧದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್ ಈಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಕ್ಯಾಚ್ ಹೇಗಿತ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...


ಕೋಲ್ಕತಾ[ನ.22]: ಭಾರತ-ಬಾಂಗ್ಲಾದೇಶ ನಡುವಿನ ಚೊಚ್ಚಲ ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಬಾಂಗ್ಲಾದೇಶ ಕೇವಲ 106 ರನ್’ಗಳಿಗೆ ಆಲೌಟ್ ಆಗಿದೆ. ಇಶಾಂತ್ ಶರ್ಮಾ 5 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.

ಪಿಂಕ್ ಬಾಲ್ ಟೆಸ್ಟ್; ಅಲ್ಪ ಮೊತ್ತಕ್ಕೆ ಬಾಂಗ್ಲಾ ಆಲೌಟ್; ದಾಖಲೆ ಹೊಸ್ತಿಲಲ್ಲಿ ಭಾರತ!

Tap to resize

Latest Videos

ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಇಶಾಂತ್ ಶರ್ಮಾ 5 ವಿಕೆಟ್ ಪಡೆದರಾದರೂ, ಉಮೇಶ್ ಯಾದವ್ ಬೌಲಿಂಗ್’ನಲ್ಲಿ ರೋಹಿತ್ ಶರ್ಮಾ ಹಿಡಿದ ಕ್ಯಾಚ್ ಇದೀಗ ವೈರಲ್ ಆಗುತ್ತಿದೆ. ಹೌದು, 11ನೇ ಓವರ್’ನಲ್ಲಿ ಉಮೇಶ್ ಹಾಕಿದ ಮೊದಲ ಎಸೆತವನ್ನು ಬಾಂಗ್ಲಾ ನಾಯಕ  ಮೊಮಿ​ನುಲ್‌ ಹಕ್‌ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು. ಆದರೆ ಬ್ಯಾಟ್ ಅಂಚನ್ನು ಸವರಿದ ಚೆಂಡು ಮೊದಲ ಸ್ಲಿಪ್’ನಲ್ಲಿದ್ದ ವಿರಾಟ್ ಕೊಹ್ಲಿಯ ಕೈ ಸೇರುವುದರಲ್ಲಿತ್ತು. ಆದರೆ, ಎರಡನೇ ಸ್ಲಿಪ್’ನಲ್ಲಿದ್ದ ರೋಹಿತ್ ಶರ್ಮಾ ಬಲಕ್ಕೆ ಜಿಗಿದು ಒಂದೇ ಕೈನಲ್ಲಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ರೋಹಿತ್ ಅದ್ಭುತ ಕ್ಯಾಚ್ ಕಂಡು ಸ್ವತಃ ಬಾಂಗ್ಲಾ ನಾಯಕ ತಬ್ಬಿಬ್ಬಾಗಿ ಹೋದರು.

ಡೇ & ನೈಟ್ ಟೆಸ್ಟ್: ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಗುರಿ

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾ ರೋಹಿತ್ ಕ್ಯಾಚ್ ಹಿಡಿದ ರೀತಿ ಕಂಡು ಕುಣಿದು ಕುಪ್ಪಳಿಸಿದರು. ಇದರೊಂದಿಗೆ ಕೊಹ್ಲಿ-ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ಮೈದಾನದಿಂದಲೇ ರವಾನಿಸಿದ್ದಾರೆ.

ಹೀಗಿತ್ತು ನೋಡಿ ರೋಹಿತ್ ಹಿಡಿದ ಆ ಅದ್ಭುತ ಕ್ಯಾಚ್:

"

ಕೃಪೆ: BCCI

ಪಿಂಕ್ ಬಾಲ್ ಟೆಸ್ಟ್ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸಾಕಷ್ಟು ಬಾರಿ ಸ್ಲಿಪ್ ಕ್ಯಾಚ್ ಅಭ್ಯಾಸ ನಡೆಸಿದ್ದರು. ಆ ಪ್ರಯತ್ನ ಇದೀಗ ಕೊನೆಗೂ ಫಲಕೊಟ್ಟಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಕೇವಲ 106 ರನ್’ಗಳಿಗೆ ಸರ್ವಪತನ ಕಂಡಿದೆ. ಇಶಾಂತ್ ಶರ್ಮಾ 22 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 29/3 ಹಾಗೂ ಮೊಹಮ್ಮದ್ ಶಮಿ 36 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.
 

click me!