Pink Ball Test: 377 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿದ ಭಾರತ

By Suvarna NewsFirst Published Oct 2, 2021, 1:31 PM IST
Highlights

* ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ 377 ರನ್‌ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ ಭಾರತ

* ಸಮಯೋಚಿತ ಅರ್ಧಶತಕ ಸಿಡಿಸಿದ ದೀಪ್ತಿ ಶರ್ಮಾ

* ಮೂರನೇ ದಿನದಾಟದಲ್ಲಿ 101 ರನ್ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ ಮಿಥಾಲಿ ಪಡೆ

ಗೋಲ್ಡ್‌ ಕೋಸ್ಟ್(ಅ.02): ಸ್ಮೃತಿ ಮಂಧನಾ (Smriti Mandhana) ಆಕರ್ಷಕ ಶತಕ ಹಾಗೂ ದೀಪ್ತಿ ಶರ್ಮಾ ಸಮಯೋಚಿತ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ದದ ಪಿಂಕ್‌ ಬಾಲ್ ಟೆಸ್ಟ್ (Pink Ball Test) ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ (Indian Women's Cricket Team) ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು 377 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ.

ಎರಡನೇ ದಿನದಾಟದಂತ್ಯದ ವೇಳೆಗೆ ಭಾರತ 5 ವಿಕೆಟ್ ಕಳೆದುಕೊಂಡು 276 ರನ್‌ ಬಾರಿಸಿತ್ತು. ಮಳೆಯ ಅಡಚಣೆಯ ನಡುವೆಯೂ ಮಿಥಾಲಿ ರಾಜ್ (Mithali Raj) ನೇತೃತ್ವದ ಮಹಿಳಾ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ಎದುರು ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನದಾಟದಲ್ಲಿ ಸ್ಮೃತಿ ಮಂಧನಾ ವೃತ್ತಿ ಜೀವನದ ಮೊದಲ ಟೆಸ್ಟ್ ಶತಕ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ದಿನದಾಟದಲ್ಲಿ ಭಾರತ ತನ್ನ ಖಾತೆಗೆ ಭರ್ತಿ 101 ರನ್‌ ಜೋಡಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

Update: India have declared their innings at 377-8 after 145 overs. It is time for our bowlers to bowl with the pink ball now! https://t.co/M7bkAXaWsS pic.twitter.com/LvAzxPDjl6

— BCCI Women (@BCCIWomen)

GONE ☝️

Stella Campbell has trapped set batter Deepti Sharma in front for 66. | https://t.co/cKISkEvPH4 pic.twitter.com/e5hGvXuObC

— ICC (@ICC)

India have declared on 377/8 🏏

Who do you think will shine for Australia with the bat? | https://t.co/cKISkEvPH4 pic.twitter.com/MYWk9Whb0Z

— ICC (@ICC)

ಭಾರತದ ಆಲ್ರೌಂಡರ್‌ ದೀಪ್ತಿ ಶರ್ಮಾ 167 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 66 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್‌ ಬ್ಯಾಟರ್ ತಾನಿಯಾ ಭಾಟಿಯಾ (22) ಹಾಗೂ ಪೂಜಾ ವಸ್ತ್ರಾಕರ್(13) ಉಪಯುಕ್ತ ರನ್‌ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ದೀಪ್ತಿ ಶರ್ಮಾ ವಿಕೆಟ್ ಪತನವಾಗುತ್ತಿದ್ದಂತೆಯೇ ಭಾರತ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

Pink Ball Test: ಸ್ಮೃತಿ ಮಂಧನಾ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಭಾರತ

ಆಸ್ಟ್ರೇಲಿಯಾ ಪರ ಎಲಿಸಾ ಪೆರ್ರಿ, ಸ್ಟೆಲ್ಲಾ ಕ್ಯಾಂಪ್ಬೆಲ್‌ ಮೊಲಿನ್ಯುಕ್ಸ್‌ ತಲಾ 2 ವಿಕೆಟ್ ಪಡೆದರೆ, ಗಾರ್ಡ್ನರ್ ಒಂದು ವಿಕೆಟ್ ಪಡೆದರು. ಇಂದು ಮತ್ತು ನಾಳೆ ಮಾತ್ರ ಪಿಂಕ್ ಬಾಲ್ ಟೆಸ್ಟ್‌ ನಡೆಯಲಿದ್ದು, ಆದಷ್ಟು ಬೇಗ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಮಿಥಾಲಿ ರಾಜ್ ಪಡೆ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. ಪಿಂಕ್‌ ಬಾಲ್ ಟೆಸ್ಟ್‌ನ ಮೊದಲೆರಡು ದಿನದಲ್ಲೂ ಮಳೆರಾಯ ಪಂದ್ಯಕ್ಕೆ ಅಡ್ಡಿ ಪಡಿಸಿತ್ತು.

ಸಂಕ್ಷಿಪ್ತ ಸ್ಕೋರ್:
ಭಾರತ: 377/8 ಡಿಕ್ಲೇರ್(ಮೊದಲ ಇನಿಂಗ್ಸ್‌)
ಸ್ಮೃತಿ ಮಂಧನಾ: 127
ಮೊಲಿನ್ಯುಕ್ಸ್‌: 2
 

click me!