
ಧರ್ಮಶಾಲಾ(ಮೇ.08) ಪಾಕಿಸ್ತಾನ ಗಡಿಯಲ್ಲಿ ಸತತ ದಾಳಿ ನಡೆಸುತ್ತಿದೆ. ಡ್ರೋನ್, ಮಿಸೈಲ್ ದಾಳಿ ಜೊತೆಗೆ ಪಾಕಿಸ್ತಾನ ಫೈಟರ್ ಜೆಟ್ ಕೂಡ ಭಾರತದ ಗಡಿ ಪ್ರವೇಶಿಸುವ ಪ್ರಯತ್ನ ಮಾಡಿದೆ. ಇದರ ಪರಿಣಾಮ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯ ರದ್ದುಗೊಳಿಸಲಾಗಿದೆ. ಪಂದ್ಯ ನಡೆಯುತ್ತಿದ್ದ ನಡುವೆ ಭಾರತೀಯ ಸೇನೆ, ತಕ್ಷಣವೇ ಕ್ರೀಡಾಂಗಣದ ಲೈಟ್ ಆಫ್ ಮಾಡಲು ಸೂಚಿಸಿದೆ. ಇದರಂತೆ ಲೈಟ್ ಆಫರ್ ಮಾಡಲಾಗಿದೆ. ಹೀಗಾಗಿ ಪಂಜಾಬ್ ಹಾಗೂ ಡೆಲ್ಲಿ ನಡುವಿನ ಪಂದ್ಯ ರದ್ದಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಾಗದಲ್ಲಿ ಪಾಕಿಸ್ತಾನ ಸೇನೆ ದಾಳಿ ಮಾಡಿದೆ. ಇತ್ತ ರಾಜಸ್ಥಾನದ ಜೈಸಲ್ಮೇರ್‌ನಲ್ಲೂ ಪಾಕಿಸ್ತಾನ ದಾಳಿ ಮಾಡಿದೆ. ಪಾಕಿಸ್ತಾನದ 2 ಪೈಟರ್ ಜೆಟ್‌ನ್ನು ಭಾರತ ಹೊಡೆದುರುಳಿಸಿದೆ. ಇತ್ತ ಪಾಕಿಸ್ತಾನದ ಡ್ರೋನ್ ಹಾಗೂ 8 ಮಿಸೈಲ್ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಪರಿಣಾಮ ಹಲೆವೆಡೆ ಹೈಅಲರ್ಟ್ ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಮ ಬ್ಲಾಕ್ಔಟ್ ಮಾಡಲಾಗಿದೆ. ಆದೆರ ದರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸುವುದು ಸವಾಲಾಗುತ್ತಿದ್ದಂತೆ ಸೇನೆ ಸೂಚನೆ ನೀಡಿದೆ. ಸಂಪೂರ್ಣ ಬ್ಲಾಕ್ಔಟ್ ಮಾಡಲು ಭಾರತೀಯ ಸೇನೆ ಸೂಚಿಸಿತ್ತು. ಇದರಂತ ತಕ್ಷಣವೇ ಫ್ಲಡ್‌ಲೈಟ್ ಆಫ್ ಮಾಡಲಾಗಿದೆ.
ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
10 ಓವರ್ ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಧರ್ಮಶಾಲಾ ಪಂದ್ಯದಲ್ಲಿ 10.1 ಓವರ್್ ಬ್ಯಾಟಿಂಗ್ ಮಾಡಿತ್ತು. 1 ವಿಕೆಟ್ ಕಳೆದುಕೊಂಡು 122 ರನ್ ಸಿಡಿಸಿತ್ತು. ಇದೇ ವೇಳೆ ಸೇನೆ ಸೂಚನೆ ಮೇರೆಗೆ ಫ್ಲಡ್ ಲೈಟ್ ಆಫ್ ಮಾಡಲಾಗಿದೆ. ಹಲವರು ಇದು ತಾಂತ್ರಿಕ ಸಮಸ್ಯೆ ಎಂದುಕೊಂಡಿದ್ದರು. ಅಷ್ಟೇ ವೇಗದಲ್ಲಿ ಐಪಿಎಲ್ ಅಭಿಮಾನಿಗಳು ಕ್ರೀಡಾಂಗಣ ತೊರೆಯುವಂತೆ ಸೂಚನೆ ನೀಡಲಾಗಿದೆ. ಬಳಿಕ ಪಂದ್ಯ ರದ್ದಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಹೇಳಿದೆ.
ಪಠಾನ್‌ಕೋಟ್ ಸೇರಿದಂತೆ ಹಲೆವೆಡೆ ಪಾಕಿಸ್ತಾನ ಡ್ರೋನ್ ಹಾಗೂ ಮಿಸೈಲ್ ದಾಳಿ ಮಾಡಿದೆ. ಭದ್ರತಾ ಕಾರಣದಿಂದ ತಕ್ಷಣವೇ ಧರ್ಮಶಾಲಾ ಪಂದ್ಯ ಸ್ಥಗಿತಗೊಳಿಸಲಾಗಿದೆ. ಎರಡೂ ತಂಡಗಳಿಗೆ ಧರ್ಮಶಾಲಾ ತೊರೆಯುವಂತೆ ಸೂಚನೆ ನೀಡಲಾಗಿದೆ. ಇದರಂತೆ ಭಾರಿ ಭದ್ರತೆಯೊಂದಿಗೆ ತಂಡದ ಆಟಗಾರರನ್ನು ಸ್ಥಳಾಂತರಿಸಲಾಗಿದೆ. ಶೀಘ್ರದಲ್ಲೇ ಕ್ರಿಕೆಟಿಗರು ಧರ್ಮಾಶಾಲಾದಿಂದ ಬೇರೆಗೆಡೆ ಸ್ಥಳಾಂತರಗೊಳ್ಳಲಿದ್ದಾರೆ.
ಧರ್ಮಶಾಲಾ ಪಂದ್ಯ ಅಹಮ್ಮದಾಬಾದ್‌ಗೆ ಸ್ಥಳಾಂತರ
ಧರ್ಮಶಾಲಾದಲ್ಲಿ ಆಯೋಜನೆಗೊಂಡಿದ್ದ ಇಂದಿನ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯ ರದ್ದಾಗಿದೆ.ಇನ್ನು ಮೇ.11ರಂದು ಆಯೋಜಿಸಿದ್ದ ಪಂದ್ಯವನ್ನು ಅಹಮ್ಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ.
ಪಾಕ್ ಮಿಲಿಟರಿ ರಾಜಧಾನಿ ರಾವಲ್ಪಿಂಡಿ ಮೇಲೆ ಡ್ರೋನ್ ದಾಳಿ, PSL ಆಡಲು ಬಂದಿದ್ದ ವಿದೇಶಿ ಆಟಗಾರರಿಗೆ ಆತಂಕ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.